/newsfirstlive-kannada/media/post_attachments/wp-content/uploads/2024/10/Dhruva-Sarja-Fans-and-Sudhakar.jpg)
ಕನ್ನಡದ ಯೂಟ್ಯೂಬರ್ ಸ್ಟ್ರಾಂಗ್ ಸುಧಾಕರ್ ಅಲಿಯಾಸ್ ಸುಧಾಕರ್ ಗೌಡ ಅವರು ಮತ್ತೊಂದು ವಿಡಿಯೋದಲ್ಲಿ ಧ್ರುವ ಸರ್ಜಾ ಫ್ಯಾನ್ಸ್‌ಗಳ ಬಗ್ಗೆ ಮಾತನಾಡಿದ್ದಾರೆ. ಇತ್ತೀಚಿಗೆ ರಿಲೀಸ್ ಆದ ಮಾರ್ಟಿನ್ ಸಿನಿಮಾದ ಬಗ್ಗೆ ಸುಧಾಕರ್ ಗೌಡ ಅವರು ವಿಮರ್ಶೆಯ ವಿಡಿಯೋ ಮಾಡಿದ್ದರು. ಇದಾದ ಬೆನ್ನಲ್ಲೇ ಸುಧಾಕರ್ ಅವರಿಗೆ ಬೆದರಿಕೆ ಕರೆಗಳು ಬಂದಿದ್ದವು.
ಧ್ರುವ ಸರ್ಜಾ ಫ್ಯಾನ್ಸ್ ಆಕ್ರೋಶದ ಬಳಿಕ ಸುಧಾಕರ್ ಅವರನ್ನು ಮಾದನಾಯಕನಹಳ್ಳಿ ಪೊಲೀಲರು ಅರೆಸ್ಟ್ ಕೂಡ ಮಾಡಿದ್ದರು. ಹಲ್ಲೆ ಪ್ರಕರಣವೊಂದರಲ್ಲಿ ಯೂಟ್ಯೂಬರ್​ ಭಾಗಿಯಾಗಿದ್ದರು. ಆ ಪ್ರಕರಣ ಸಂಬಂಧ ಸುಧಾಕರ್ ವಿರುದ್ಧ ವಾರೆಂಟ್ ಇಶ್ಯೂ ಆಗಿತ್ತು. ಈ ಬೆನ್ನಲ್ಲೇ ಧ್ರುವ ಸರ್ಜಾ ಫ್ಯಾನ್ಸ್ ಮಾದನಾಯಕನಹಳ್ಳಿ ಠಾಣೆಗೆ ದೂರು ನೀಡಿದ್ದರು.
ಎರಡು ದಿನದ ಹಿಂದೆ ಸುಧಾಕರ್ ಅವರನ್ನು ವಶಕ್ಕೆ ಪಡೆದಿದ್ದ ಮಾದನಾಯಕನಹಳ್ಳಿ ಪೊಲೀಸರು ವಿಚಾರಣೆ ನಡೆಸಿದ್ದರು. ಅಪಾಲಜಿ ಲೆಟರ್ ಬರೆಸಿಕೊಂಡು ವಿಡಿಯೋಗಳನ್ನು ಡಿಲೀಟ್​ ಮಾಡಿಸಿದ್ದರು. ಇಷ್ಟೆಲ್ಲಾ ಗಲಾಟೆ, ಆಕ್ರೋಶ ವ್ಯಕ್ತವಾದ ಮೇಲೆ ಸುಧಾಕರ್ ಅವರು ಅಸಲಿಗೆ ಆಗಿದ್ದೇನು? ಧ್ರುವ ಸರ್ಜಾ ಹಾಗೂ ಮಾರ್ಟಿನ್ ಸಿನಿಮಾದ ಬಗ್ಗೆ ತಮ್ಮ ಅಭಿಪ್ರಾಯವೇನು ಅನ್ನೋದನ್ನ ಹೇಳಿಕೊಂಡಿದ್ದಾರೆ.
ಯೂಟ್ಯೂಬರ್ ಸುಧಾಕರ್ ಅವರು ಇನ್ಸ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಕಷ್ಟಕಾಲದಲ್ಲಿ ನಿನ್ನ ಜೊತೆಗೆ ನಾವಿದ್ದೇವೆ ಎಂದು ಧೈರ್ಯ ತುಂಬಿದ ಎಲ್ಲರಿಗೂ, ದಾಸನಪುರ ಹೋಬಳಿಯ ಹಿರಿಯರು, ಜನತೆಗೆ ಧನ್ಯವಾದಗಳು.
View this post on Instagram
ಗೊತ್ತೋ, ಗೊತ್ತಿಲ್ಲದೆಯೋ ನಾನು ಒಂದು ರಿವ್ಯೂ ಕೊಟ್ಟಿದೆ. ಬೇರೆ ಯಾರ ಅಭಿಮಾನಿಯಾಗಿ ನಾನು ವಿಮರ್ಶೆ ಮಾಡಿಲ್ಲ. ಧ್ರುವ ಸರ್ಜಾ ಅವರ ಬಹದ್ದೂರ್ ಸಿನಿಮಾ ನನಗೆ ತುಂಬಾ ಇಷ್ಟ. ಅದ್ಧೂರಿ ಸಿನಿಮಾದ ಡೈಲಾಗ್‌ಗಳು ನನಗೆ ಈಗಲೂ ನೆನಪಿದೆ. ಈಗ ಧ್ರುವ ಸರ್ಜಾ ಅವರ ಕಟೌಟ್‌ಗೆ ಅಂತಹ ಸಿನಿಮಾಗಳು ಬರ್ತಿಲ್ಲ ಅನ್ನೋ ಬೇಸರದಲ್ಲಿ ಹೇಳಿದ್ದೆ. ಯಾವುದೇ ಕೆಟ್ಟ ಉದ್ದೇಶದಿಂದ ನಾನು ಹೇಳಲಿಲ್ಲ.
ಇದಾದ ಮೇಲೆ ಒಂದು ಗಂಟೆಯಲ್ಲೇ ನಾನು ಆ ವಿಡಿಯೋ ಡಿಲೀಟ್ ಮಾಡಿದ್ದೆ. ಕೆಲವರು ಬುದ್ಧಿವಾದ ಹೇಳಿದ್ದಕ್ಕೆ ನಾನು ಕ್ಷಮೆ ಕೇಳಿದ್ದೆ. ಆದರೂ ಬೆದರಿಕೆ ಕರೆಗಳು ಬಂದಾಗ 2ನೇ ವಿಡಿಯೋ ಮಾಡಿ ಪ್ರತಿಕ್ರಿಯೆ ಕೊಟ್ಟಿದ್ದೆ. ನನ್ನ ಕಡೆಯಿಂದ ತಪ್ಪಾಗಿದೆ. ಧ್ರುವ ಸರ್ಜಾ, ಧ್ರುವ ಸರ್ಜಾ ಫ್ಯಾನ್ಸ್ ಹಾಗೂ ಕರ್ನಾಟಕದ ಜನರಿಗೆ ಕ್ಷಮೆ ಕೇಳುತ್ತೇನೆ. ಧ್ರುವ ಸರ್ಜಾ ಅವರು ದೊಡ್ಡವರು. ಅವರ ಮುಂದೆ ನಾನು ಏನು ಅಲ್ಲ. ಇದರ ಮೇಲೆ ನಾನು ಈ ವಿಚಾರದ ಬಗ್ಗೆ ಏನು ಮಾತನಾಡಲ್ಲ. ಎಲ್ಲರಿಗೂ ಸಾರಿ ಇಂತಹ ಕೆಲಸ ಇನ್ನೆಂದು ಆಗೋದಿಲ್ಲ ಎಂದು ಸುಧಾಕರ್ ಅವರು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ