Martin: ಧ್ರುವ ಸರ್ಜಾ ಫ್ಯಾನ್ಸ್‌ ಹಬ್ಬ.. ರಿಲೀಸ್‌ಗೂ ಮೊದಲೇ ಮಾರ್ಟಿನ್ ಹವಾ ಹೇಗಿದೆ ಗೊತ್ತಾ?

author-image
admin
Updated On
Martin: ಧ್ರುವ ಸರ್ಜಾ ಫ್ಯಾನ್ಸ್‌ ಹಬ್ಬ.. ರಿಲೀಸ್‌ಗೂ ಮೊದಲೇ ಮಾರ್ಟಿನ್ ಹವಾ ಹೇಗಿದೆ ಗೊತ್ತಾ?
Advertisment
  • ಮೂರು ವರ್ಷದ ನಂತರ ಆ್ಯಕ್ಷನ್ ಪ್ರಿನ್ಸ್ ಸಿನಿಮಾ ರಿಲೀಸ್!
  • ವರ್ಲ್ಡ್ ವೈಲ್ಡ್ ಬರೋಬ್ಬರಿ 3500 ಸ್ಕ್ರೀನ್‌​ಗಳಲ್ಲಿ ಬಿಡುಗಡೆ
  • ಭರ್ಜರಿ, ಬಹದ್ದೂರ್, ಪೊಗರು ಬಳಿಕ ಮಾರ್ಟಿನ್ ಮೇನಿಯಾ!

ಬೆಂಗಳೂರು: ಬಂದೇ ಬಿಡ್ತು ಮಾರ್ಟಿನ್ ಸಿನಿಮಾ ಡೇ.. ಈ ಬಿಗ್ ಡೇಗಾಗಿ ಧ್ರುವಾ ಸರ್ಜಾ ಅಭಿಮಾನಿಗಳು, ಚಾತಕ ಪಕ್ಷಿಯಂತೆ ಕಾಯುತ್ತಿದ್ದರು. ಮೂರು ವರ್ಷಗಳ ಆ ಕನಸೀಗ ನನಸಾಗ್ತಿದ್ದು, ಮಾರ್ಟಿನ್ ಸ್ವಾಗತಿಸೋಕೆ ಎಂಟೈರ್ ಕರ್ನಾಟಕ ಮಾತ್ರವಲ್ಲದೇ, ಇಡೀ ಇಂಡಿಯಾ ಕಾಯ್ತಿದೆ.

publive-image

ಇದನ್ನೂ ಓದಿ: ವಿಮಾನ ಅಪಘಾತದಿಂದ ಕೂದಲೆಳೆ ಅಂತರದಲ್ಲಿ ಧ್ರುವ ಸರ್ಜಾ ಪಾರು 

ಬರೋಬ್ಬರಿ ಮೂರು ವರ್ಷದ ನಂತರ, ಆ್ಯಕ್ಷನ್ ಪ್ರಿನ್ಸ್ ಸಿನಿಮಾ ಬರ್ತಿರೋದ್ರಿಂದ. ಸಹಜವಾಗಿ ಸಿನಿಮಾ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ಈಗಾಗಲೇ ಬುಕ್ ಮೈ ಶೋನಲ್ಲಿ ಬುಕ್ಕಿಂಗ್ ಶುರುವಾಗಿದ್ದು, ಮುಂಗಡ ಬುಕ್ಕಿಂಗ್​ನಲ್ಲಿ ಮಾರ್ಟಿನ್ ಧೂಳೆಬ್ಬಿಸ್ತಿದೆ. ವರ್ಲ್ಡ್ ವೈಲ್ಡ್ ಬರೋಬ್ಬರಿ 3500 ಸ್ಕ್ರೀನ್‌​ಗಳಲ್ಲಿ ನಾಳೆ ಸಿನಿಮಾ ಬಿಡುಗಡೆ ಆಗ್ತಿದ್ದು, ಕರ್ನಾಟಕದಲ್ಲಿ 280ಕ್ಕೂ ಹೆಚ್ಚು ಥಿಯೇಟರ್​ಗಳಲ್ಲಿ ಮಾರ್ಟಿನ್ ಉತ್ಸವ ನಡೆಯಲಿದೆ.

publive-image

ಧ್ರುವಾ ಸರ್ಜಾಗೆ ಕೆ.ಜಿ.ರಸ್ತೆಯ ನರ್ತಕಿ ಥಿಯೇಟರ್ ಲಕ್ಕಿ ಆಗಿದ್ದು, ಇಲ್ಲಿ ಬಿಡುಗಡೆ ಆದ ಭರ್ಜರಿ, ಬಹದ್ದೂರ್, ಪೊಗರು ಸಿನಿಮಾಗಳು ಹಿಟ್ ಆಗಿವೆ. ಇದೀಗ ಮಾರ್ಟಿನ್ ಕೂಡ ರಿಲೀಸ್ ಆಗ್ತಿದ್ದು, ಇದೂ ಹಿಟ್ ಆಗಲಿದೆ ಅನ್ನೋದು ನರ್ತಕಿ ಥಿಯೇಟರ್ ಮ್ಯಾನೇಜರ್ ರಾಜು ಹೇಳಿದ್ದಾರೆ.

ಮಾರ್ಟಿನ್ ರಿಲೀಸ್ ಇಂಡಸ್ಟ್ರಿಗೂ ಒಂದು ದೊಡ್ಡ ಬಲವಾಗಿದ್ದು, ಮಾಸ್ ಪ್ರೇಕ್ಷಕರನ್ನು ಥಿಯೇಟರ್​ಗೆ ಕರೆಸೋದ್ರಲ್ಲಿ ಹಾಗೂ ಗಲ್ಲಾ ಪೆಟ್ಟಿಗೆಯಲ್ಲಿ ಗೆಲುವು ನಿಶ್ಚಿತ ಅನ್ನೋದು ಇಂಡಸ್ಟ್ರಿಯ ಇನ್ ಸೈಡ್ ಮಾತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment