/newsfirstlive-kannada/media/post_attachments/wp-content/uploads/2025/06/druva-sarja.jpg)
ಸ್ಯಾಂಡಲ್ವುಡ್ ಌಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟ ಪ್ರೇಮ್ ನಿರ್ದೇಶನದ 'ಕೆಡಿ' ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದರೆ. ಇದರ ಮಧ್ಯೆ ಗ್ಯಾರೇಜ್ನಲ್ಲಿ ನಿಂತಿದ್ದ ಪ್ರೀತಿಯ ಅಣ್ಣ ಚಿರು ಸರ್ಜಾ ಬೈಕ್ಗೆ ಹೊಸ ರೂಪ ಕೊಟ್ಟಿದ್ದಾರೆ.
ಇದನ್ನೂ ಓದಿ:ಕನ್ನಡ ಕೋಗಿಲೆ ಸಿಂಗರ್ ಅಖಿಲಾ ಪಜಿಮಣ್ಣು ದಾಂಪತ್ಯದಲ್ಲಿ ಬಿರುಕು.. ಡಿವೋರ್ಸ್ಗೆ ಅರ್ಜಿ
ಹೌದು, ಚಿರಂಜೀವಿ ಸರ್ಜಾ ಹಾಗೂ ಧ್ರುವ ಸರ್ಜಾ ಇಬ್ಬರ ಬಾಂಧವ್ಯ ಅಭಿಮಾನಿಗಳಿಗೆ ಗೊತ್ತೇ ಇದೆ. ರಕ್ತ ಸಂಬಂಧದಲ್ಲಿ ಅಣ್ಣ ತಮ್ಮಂದಿರಂತೆ ಇದ್ದರೂ, ಜಿನ ಜೀವನದಲ್ಲಿ ಸ್ನೇಹಿತರಂತೆ ಇದ್ದರು. ಒಬ್ಬರಿಗೆ ಇನ್ನೊಬ್ಬರು ಬೆನ್ನೆಲುಬಾಗಿ ನಿಂತಿದ್ದರು. ಆದ್ರೆ ಚಿರಂಜೀವಿ ಸರ್ಜಾ ಅವರು ಅಕಾಲಿಕವಾಗಿ ನಿಧನರಾದರು.
ಇನ್ನೂ, ಚಿರು ಸರ್ಜಾ ಅವರ ಫೇವರಿಟ್ ಯಮಹ ಬೈಕ್ಗೆ ಹೊಸ ರೂಪ ಕೊಟ್ಟಿದ್ದಾರೆ ಧ್ರುವ ಸರ್ಜಾ. ಅಣ್ಣನ ಫೇವರೆಟ್ ಯಮಹ ಬೈಕ್ ನೋಡಿ ಧ್ರುವ ಸರ್ಜಾ ಭಾವುಕರಾಗಿದ್ದಾರೆ. ಅಲ್ಲದೇ ಮತ್ತೆ ಅಣ್ಣನ ಫೇವರೆಟ್ ಗಾಡಿಯನ್ನು ಓಡಿಸಿ ಖುಷಿಪಟ್ಟಿದ್ದಾರೆ ತಂದೆ ಹಾಗೂ ಧ್ರು ಸರ್ಜಾ.
ಸದ್ಯ ಧ್ರುವ ಸರ್ಜಾ ಯಮಹ ಬೈಕ್ ಓಡಿಸಿದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇದೇ ವಿಡಿಯೋ ನೋಡಿದ ಚಿರು ಸರ್ಜಾ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ