newsfirstkannada.com

ಧ್ರುವ ಸರ್ಜಾ ಜಿಮ್ ಟ್ರೈನರ್ ಮೇಲೆ ಹಲ್ಲೆ; ಅಪರಿಚಿತರಿಂದ ಅಟ್ಯಾಕ್​; ಡಿಸಿಪಿ ಏನಂದ್ರು?

Share :

Published May 27, 2024 at 1:10pm

Update May 27, 2024 at 1:15pm

  ಅಪರಿಚಿತರಿಂದ ಧ್ರುವ ಸರ್ಜಾ ಜಿಮ್ ಟ್ರೈನರ್ ಮೇಲೆ ಹಲ್ಲೆ

  ಧ್ರುವ ಸರ್ಜಾ ಮನೆ ಹತ್ತಿರದ ಆಸ್ಪತ್ರೆಗೆ ಪ್ರಶಾಂತ್​ ದಾಖಲು

  ಆಸ್ಪತ್ರೆಯಲ್ಲಿ ಪ್ರಶಾಂತ್​ಗೆ ಟ್ರೀಟ್​ಮೆಂಟ್.. ಏನಾಗಿದೆ ಗೊತ್ತಾ?

ಬೆಂಗಳೂರು: ಧ್ರುವ ಸರ್ಜಾ ಜಿಮ್ ಟ್ರೈನರ್ ಪ್ರಶಾಂತ್ ಮೇಲೆ ಹಲ್ಲೆ ನಡೆದ ಪ್ರಸಂಗ ಬೆಳಕಿಗೆ ಬಂದಿದೆ. ಬನಶಂಕರಿಯ ಕೆ.ಆರ್.ರಸ್ತೆಯಲ್ಲಿ ಅಪರಿಚಿತರಿಂದ ಹಲ್ಲೆ ನಡೆದಿದೆ.

ನಿನ್ನೆ ರಾತ್ರಿ ಜಿಮ್ ಟ್ರೈನರ್ ಪ್ರಶಾಂತ್ ಮೇಲೆ ಅಟ್ಯಾಕ್ ಮಾಡಿದ್ದಾರೆ. ಧ್ರುವ ಸರ್ಜಾ ಮನೆ ಹತ್ತಿರದ ಅಕ್ಷಯ್ ಆಸ್ಪತ್ರೆಯಲ್ಲಿ ಪ್ರಶಾಂತ್ ದಾಖಲಾಗಿದ್ದಾರೆ. ಸದ್ಯ ಅವರಿಗೆ ಟ್ರೀಟ್​ಮೆಂಟ್ ನೀಡಲಾಗುತ್ತಿದೆ.

ಈ ಪ್ರಕರಣಕ್ಕೆ ಧ್ರುವ ಸರ್ಜಾಗೂ ಸಂಬಂಧವಿಲ್ಲ

ಧ್ರುವ ಸರ್ಜಾ ಜಿಮ್ ಟ್ರೈನರ್ ಪ್ರಶಾಂತ್ ಮೇಲೆ ಹಲ್ಲೆ ಪ್ರಕರಣ ಸಂಬಂಧಿಸಿದಂತೆ ಯಾವುದೇ ಸಂಬಂಧವಿಲ್ಲ ಎಂದು ಮ್ಯಾನೇಜರ್ ಹೇಳಿದ್ದಾರೆ. ಘಟನೆ ಬಗ್ಗೆ ಧ್ರುವಾ ಸರ್ಜಾಗೆ ಯಾವ ಮಾಹಿತಿನೂ ಇಲ್ಲ. ಖಾಸಗಿ ವಿಚಾರಕ್ಕೆ ಸಂಬಂಧಪಟ್ಟಂತೆ ಹಲ್ಲೆ ಆಗಿರುವ ಬಗ್ಗೆ ಮಾಹಿತಿ ಇದೆ. ಇದಕ್ಕೂ ಮುಂಚೆಯೂ ಎರಡು ಸಲ ಪ್ರಶಾಂತ್ ಮೇಲೆ ಹಲ್ಲೆ ಯತ್ನ ಆಗಿದೆ. ಆದರೆ ಆಗ ಪ್ರಶಾಂತ್ ತಪ್ಪಿಸಿಕೊಂಡಿದ್ದರು. ನಿನ್ನೆ ರಾತ್ರಿ ಬನಶಂಕರಿಯಲ್ಲಿ ಮತ್ತೆ ಗುಂಪು ದಾಳಿ ಮಾಡಿದೆ.

ಡಿಸಿಪಿ ಎನಂದ್ರು?

ದಕ್ಷಿಣ ವಿಭಾಗ ಡಿಸಿಪಿ ಲೋಕೇಶ್ ಬಿ.ಜಗಲಾಸರ್, ‘ಬನಶಂಕರಿ ಠಾಣಾ ವ್ಯಾಪ್ತಿಯ 32 ವರ್ಷದ ಯುವಕನ ಮೇಲೆ ಹಲ್ಲೆಯಾಗಿದೆ. 10;30ರ ಸುಮಾರಿಗೆ ಮನೆಗೆ ಹೋಗುವಾಗ ಕೆ.ಆರ್ ರಸ್ತೆಯಲ್ಲಿ ಘಟನೆ ನಡೆದಿದೆ. ಬೈಕ್ ನಲ್ಲಿ ಬಂದಿದ್ದ ಇಬ್ಬರು ಅಪರಿಚಿತ ವ್ಯಕ್ತಿಗಳು ಹಲ್ಲೆ ಮಾಡಿದ್ದಾರೆ. ಸದ್ಯ ಯಾರು ಅನ್ನೋದರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಯಾಕಾಗಿ ಹಲ್ಲೆ ನಡೆದಿದೆ ಎನ್ನುವ ಬಗ್ಗೆಯೂ ಸ್ಪಷ್ಟವಾದ ಮಾಹಿತಿಯಿಲ್ಲ. ಜಿಮ್ ಟ್ರೈನರ್ ಹಾಗೆ ಇನ್ನೊಂದು ಕಡೆ ಇವರು ಕೆಲಸ ಮಾಡ್ತಿದ್ರು. ಅವರು ಬಂದು ಬನಶಂಕರಿ ಠಾಣೆಗೆ ದೂರು ಕೊಟ್ಟಿದ್ದಾರೆ. ತನಿಖೆ ನಡೆಯುತ್ತಿದೆ’ ಎಂದು ಹೇಳಿದ್ದಾರೆ.

ಕೆಡಿ ಬಿಗ್​ ಅಪ್ಡೇಟ್ಸ್​

ನಟ ಧುವ ಸರ್ಜಾ ಕೆಡಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೇ ಕ್ರಿಸ್​ಮಸ್​​ ಹಬ್ಬದ ಸಮಯದಲ್ಲಿ ಕೆಡಿ ರಿಲೀಸ್​ ಆಗಲಿದೆ. ಆದರೆ ನಿನ್ನೆ ಚಿತ್ರತಂಡ ಪ್ರೆಸ್​ ಮೀಟ್​ ಮಾಡಿದ್ದರು. ಪ್ರೆಸ್​ಮೀಟ್​ನಲ್ಲಿ ಬಿಗ್​ ಅಪ್ಡೇಟ್​​ ನೀಡಿದ್ದರು.

ಇದನ್ನೂ ಓದಿ: ಡೆವಿಲ್ V/S KD.. ದರ್ಶನ್​ ವಿರುದ್ಧ ತೊಡೆ ತಟ್ಟುತ್ತಾರಾ ಧ್ರುವ ಸರ್ಜಾ? ಯುದ್ಧಕ್ಕೆ ರೆಡಿ ಅಂದಿದ್ದೇಕೆ?

ಅಂದಹಾಗೆಯೇ ಕೆಡಿ ಬರೋಬ್ಬರಿ 17 ಕೋಟಿ 70 ಲಕ್ಷಕ್ಕೆ ಕೆಡಿ ಸಿನಿಮಾದ ಆಡಿಯೋ ರೈಟ್ಸ್​ ಸೇಲಾಗಿದೆ. ಈ ಸುದ್ದಿ ಕೇಳಿ ಬಾಲಿವುಡ್ ಭಾಯ್​ ಸಲ್ಮಾನ್​ ಖಾನ್​ ಕೂಡ ಹೊಗಳಿದ್ದಾರಂತೆ. ಪ್ರೇಮ್​ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ.

ಇದನ್ನೂ ಓದಿ: ಅಯ್ಯೋ.. ಇದೆಂಥಾ ಜಾತ್ರೆ! ಬಡಿಗೆಯಿಂದ ಹೊಡೆದು ಕೊಳ್ತಾರೆ ಜನರು! ಶತಮಾನದ ಇತಿಹಾಸ ಇದಕ್ಕಿದೆ

ಕೆಡಿ ಸಿನಿಮಾಗಾಗಿ ಲಾಸ್ ಏಂಜಲೀಸ್​ನಲ್ಲಿ ಬರೋಬ್ಬರಿ 260 ಪೀಸ್ ಆರ್ಕೆಸ್ಟ್ರಾ ಬಳಸಿ, ಹಾಡು ಮತ್ತು ಹಿನ್ನೆಲೆ ಸಂಗೀತ ಕಂಪೋಸ್ ಮಾಡಲಾಗಿದೆ. ಇದು ಭಾರತೀಯ ಸಿನಿಮಾರಂಗದಲ್ಲಿ ದೊಡ್ಡ ಸಾಧನೆ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಧ್ರುವ ಸರ್ಜಾ ಜಿಮ್ ಟ್ರೈನರ್ ಮೇಲೆ ಹಲ್ಲೆ; ಅಪರಿಚಿತರಿಂದ ಅಟ್ಯಾಕ್​; ಡಿಸಿಪಿ ಏನಂದ್ರು?

https://newsfirstlive.com/wp-content/uploads/2024/05/Druva-Sarja.jpg

Load More