ಧ್ರುವಾ ಸರ್ಜಾಗೆ ಈ ವಿಚಾರದಲ್ಲಿ ಭಯವಂತೆ! ‘ಆ್ಯಕ್ಷನ್​ ಪ್ರಿನ್ಸ್​’ ಅಂತ ಕರಿಬೇಡಿ ಎಂದಿದ್ದೇಕೆ?

author-image
AS Harshith
Updated On
ಧ್ರುವಾ ಸರ್ಜಾಗೆ ಈ ವಿಚಾರದಲ್ಲಿ ಭಯವಂತೆ! ‘ಆ್ಯಕ್ಷನ್​ ಪ್ರಿನ್ಸ್​’ ಅಂತ ಕರಿಬೇಡಿ ಎಂದಿದ್ದೇಕೆ?
Advertisment
  • ಧ್ರುವ ಸರ್ಜಾಗೆ ಎಲ್ಲಾ ಜಾನರ್​ನಲ್ಲಿ ಸಿನಿಮಾ ಮಾಡುವ ಆಸೆ
  • ಧ್ರುವ ಮತ್ತು ಚಿರು ಮನೆಯಲ್ಲಿ ಸಿನಿಮಾ ವಿಚಾರವಾಗಿ ಚರ್ಚೆ ಮಾಡಿದ್ದು ಕಡಿಮೆಯಂತೆ
  • ಸಿನಿಮಾ ವಿಚಾರವನ್ನು ಮನೆಗೆ ತರುತ್ತಿರಲಿಲ್ಲ ಎಂದ ಧ್ರುವ ಸರ್ಜಾ.. ಯಾಕೆ ಗೊತ್ತಾ?

ಆ್ಯಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾ ‘ಮಾರ್ಟಿನ್’​ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಇದೇ ಶುಕ್ರವಾರದಂದು ತೆರೆಗೆ ಬರುತ್ತಿದೆ. ಮಾರ್ಟಿನ್​ ರಿಲೀಸ್​ಗೂ ಮುನ್ನ ಧ್ರುವ ನ್ಯೂಸ್​​ಫಸ್ಟ್​ ಜೊತೆಗೆ ಮಾತನಾಡಿದ್ದು, ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ತಾನು ಭಯಪಡುವ ಸಂಗತಿಯನ್ನು ಹೇಳಿಕೊಂಡಿದ್ದಾರೆ.

ಧ್ರುವ ಸರ್ಜಾಗೆ ಅಟ್ಯಾಚ್​​ಮೆಂಟ್​ ವಿಚಾರದಲ್ಲಿ ಭಯ ಜಾಸ್ತಿಯಂತೆ. ಈ ಕುರಿತಾಗಿ ಮಾತನಾಡಿರುವ ಅವರು, ನನಗೆ ಅಟ್ಯಾಚ್​​ಮೆಂಟ್ ಅಂದ್ರೆ ಭಯ ಜಾಸ್ತಿ ಎಂದು ಹೇಳಿಕೊಂಡಿದ್ದಾರೆ. ಅಟ್ಯಾಚ್​ ಆದ್ರೆ ಡಿಟ್ಯಾಚ್​ ಆಗೋದು ಕಷ್ಟ. ಅಟ್ಯಾಚ್​​ಮೆಂಟ್ ಆದ್ರೆತಾನೆ ಬೇಜಾರು ಆಗೋದು ಎಂದು ಹೇಳಿದ್ದಾರೆ.

ಧ್ರುವ ಸರ್ಜಾಗೆ ಎಲ್ಲಾ ಜಾನರ್​ನಲ್ಲಿ ಸಿನಿಮಾ ಮಾಡುವ ಕನಸಿದೆಯಂತೆ. ಅಣ್ಣ ಚಿರು ಜೊತೆಗೆ ಸಿನಿಮಾ ಕುರಿತಾಗಿ ಚರ್ಚೆ ಮಾಡಿದ್ದು ತೀರಾ ಕಡಿಮೆ. ಡೀಟೇಲ್​ ಆಗಿ, ಆಳವಾಗಿ ಚರ್ಚೆ ಮಾಡಿಲ್ಲ. ಅದರಲ್ಲೂ ಮನೆಯಲ್ಲಿ ಸಿನಿಮಾ ವಿಚಾರವಾಗಿ ಮಾತನಾಡಿದ್ದು ಕಡಿಮೆ. ಸಿನಿಮಾ ವಿಚಾರವನ್ನು ಮನೆಗೆ ತರುತ್ತಿರಲಿಲ್ಲ ಎಂದು ಹೇಳಿದ್ದಾರೆ.

ನನ್ನನ್ನು ಆ್ಯಕ್ಷನ್​ ಪ್ರಿನ್ಸ್ ಅಂತ ಕರಿಬೇಡಿ. ನಾನು ಮಾಡಿರೋದು ಲವ್​ ಸಬ್​ಜೆಕ್ಟ್​. ಆದ್ರೆ ನನ್ನ ಆ್ಯಕ್ಷನ್​ ಪ್ರಿನ್ಸ್​ ಅಂತ ಕರಿತಾರೆ. ಹೀಗಾಗಿ ಟೈಟಲ್ಸ್​ ಕಂಡ್ರೆ ಕೂಡ ಒಂಚೂರು ಭಯ ಎಂದು ಧ್ರುವ ಸರ್ಜಾ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment