Advertisment

ಧ್ರುವಾ ಸರ್ಜಾ ಫ್ಯಾನ್ಸ್​ಗೆ ಸಿಹಿ ಸುದ್ದಿ.. ಮಾರ್ಟಿನ್​ ರಿಲೀಸ್​ ಡೇಟ್​ ಆನೌನ್ಸ್​!

author-image
AS Harshith
Updated On
Martin: ಧ್ರುವ ಸರ್ಜಾ ಫ್ಯಾನ್ಸ್‌ ಹಬ್ಬ.. ರಿಲೀಸ್‌ಗೂ ಮೊದಲೇ ಮಾರ್ಟಿನ್ ಹವಾ ಹೇಗಿದೆ ಗೊತ್ತಾ?
Advertisment
  • ‘ಮಾರ್ಟಿನ್’​ ಬರೋಬ್ಬರಿ 250 ದಿನಗಳ ಕಾಲ ಶೂಟಿಂಗ್
  • ಅಧಿಕೃತವಾಗಿ ರಿಲೀಸ್ ಡೇಟ್ ಅನೌನ್ಸ್ ಮಾಡಿದ ಚಿತ್ರತಂಡ
  • ಪ್ಯಾನ್ ಇಂಡಿಯಾ ಸಿನಿಮಾಗಿ ಗೆಲ್ಲುವ ಸೂಚನೆ ಕೊಟ್ಟ ‘ಮಾರ್ಟಿನ್’

ಧ್ರುವಾ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾ ಸ್ಟಾರ್ಟ್​ ಆಗಿ ಬರೋಬ್ಬರಿ 3 ವರ್ಷ ಆಗ್ತಿದೆ. ಈವರೆಗೆ ಸಿನಿಮಾ ರಿಲೀಸ್ ಬಗ್ಗೆ ಸದ್ದು ಸಮಾಚಾರ ಏನಿರಲಿಲ್ಲ. ಯಾವುದೇ ಅಪ್​ಡೇಟ್ ಇಲ್ದೇ ಫ್ಯಾನ್ಸ್ ಬೇಸರದಲ್ಲಿದ್ರು. ಆದ್ರೀಗ ಮಾರ್ಟಿಂಗ್ ಗ್ಯಾಂಗ್‌, ಫ್ಯಾನ್ಸ್​ಗೆ ಬ್ಯಾಂಗ್ ಆಗಿ ಗುಡ್​ನ್ಯೂಸ್ ಕೊಟ್ಟಿದೆ.

Advertisment

publive-image

ಮಾರ್ಟಿನ್.. ಆ್ಯಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ ನಟನೆಯ ಈ ವರ್ಷದ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ. ಸೆಟ್ಟೇರಿದಾಗಿನಿಂದ ದೊಡ್ಡದಾಗಿಯೇ ಸದ್ದು ಮಾಡ್ತಿದೆ. ಸಿನಿಮಾದ ಬಜೆಟ್, ತಾರಾಗಣ, ಮೇಕಿಂಗ್ ಇದ್ಯಾವುದ್ರಲ್ಲೂ ಕಾಂಪ್ರಮೈಸ್ ಆಗದೇ, ಪ್ಯಾನ್ ಇಂಡಿಯಾ ಲೆವೆಲ್ಲಿಗೆ ಕ್ವಾಲಿಟಿ ನೀಡೋ ನಿಟ್ಟಿನಲ್ಲಿ ಬರೋಬ್ಬರಿ 250 ದಿನಗಳ ಕಾಲ ಶೂಟಿಂಗ್ ನಡೆಸಿದೆ. ಇತ್ತೀಚೆಗಷ್ಟೇ ಮಾರ್ಟಿನ್ ಚಿತ್ರತಂಡ ಶೂಟಿಂಗ್ ಮುಗಿಸಿ, ಕುಂಬಳಕಾಯಿ ಒಡೆದಿತ್ತು. ಅಲ್ಲಿಂದ ಮಾರ್ಟಿನ್ ರಿಲೀಸ್ ಯಾವಾಗ ಅನ್ನೋ ಕೂಗು ಶುರುವಾಗಿತ್ತು.

publive-image

ಪೊಗರು ನಂತರ ಧ್ರುವಾ ನಟನೆಯ ಯಾವ ಸಿನಿಮಾನೂ ರಿಲೀಸ್ ಆಗಿಲ್ಲ. ಮತ್ತೊಂದೆಡೆ ಸ್ಟಾರ್ ಸಿನಿಮಾಗಳಿಲ್ಲದೇ ಇಂಡಸ್ಟ್ರಿ ಸೊರಗಿ ನಿಂತಿದೆ. ಈ ಸಂದರ್ಭದಲ್ಲಿ ಇಂಡಸ್ಟ್ರಿಗೂ, ಅಭಿಮಾನಿಗಳಿಗೂ ಒಂದು ದೊಡ್ಡ ಬೂಸ್ಟರ್ ಡೋಸ್ ಬೇಕಾಗಿತ್ತು. ಇದರಿಂದಾಗಿ ಎಲ್ಲರೂ ಮಾರ್ಟಿನ್ ರಿಲೀಸ್ ದಿನಾಂಕದ ಮೇಲೆ ಕಣ್ಣಿಟ್ಟಿದ್ದರು. ಇದೀಗ ನಿರೀಕ್ಷೆ ಇಟ್ಟಿದ್ದ ಫ್ಯಾನ್ಸ್​ಗೆ ಶುಭ ಸುದ್ದಿ ಸಿಕ್ಕಿದೆ. ಮಾರ್ಟಿನ್ ಚಿತ್ರತಂಡ ಅಧಿಕೃತವಾಗಿ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ.. ಅಕ್ಟೋಬರ್ 11 ರಂದು, ದಸರಾ ಹಬ್ಬದ ಕೊಡುಗೆಯಾಗಿ ಮಾರ್ಟಿನ್ ಜನರೆದುರು ಬರ್ತಿದ್ದಾನೆ.

publive-image

ಇದನ್ನೂ ಓದಿ: ಪೊಲೀಸರ ವಶದಲ್ಲಿದ್ದ ಆರೋಪಿ ಸಾವು; ASP ಕಾರಿನ ಮೇಲೆ ಕಲ್ಲು ತೂರಾಟ; ಉದ್ರಿಕ್ತರ ಮೇಲೆ ಲಾಠಿ ಚಾರ್ಜ್​

Advertisment

ಡೇಟ್ ಅನೌನ್ಸ್​ಮೆಂಟ್ ಕುರಿತು ಇಡೀ ಚಿತ್ರತಂಡ ಸ್ಪೆಷಲ್ ಪ್ರೆಸ್ ಮೀಟ್ ಮಾಡಿ ಘೋಷಿಸಿದೆ. ಮತ್ತೊಮ್ಮೆ ಈ ದಿನಾಂಕವನ್ನು ಮುಂದೂಡುವುದಿಲ್ಲ ಅಂತಲೂ ಪ್ರಾಮಿಸ್ ಮಾಡಿದೆ. ಒಟ್ಟಾರೆ ಮೂರು ವರ್ಷಗಳಿಂದ ಸತಾಯಿಸುತ್ತಿದ್ದ ಮಾರ್ಟಿನ್ ಫೈನಲಿ ಜನರೆದುರು ಬರುತ್ತಿದ್ದು, ಪ್ಯಾನ್ ಇಂಡಿಯಾ ಸಿನಿಮಾಗಿ ಗೆಲ್ಲುವ ಎಲ್ಲಾ ಸೂಚನೆಯನ್ನೂ ಕೊಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment