‘ಇಂಥ ನನ್ಮಕ್ಕಳನ್ನ ನಡು ರಸ್ತೆಯಲ್ಲಿ ಸುಟ್ಟು ಹಾಕ್ಬೇಕು’- ಕೆರಳಿ ಕೆಂಡವಾದ ನಟ ಧ್ರುವ ಸರ್ಜಾ; ವಿಡಿಯೋ ರಿಲೀಸ್‌!

author-image
Bheemappa
Updated On
‘ಇಂಥ ನನ್ಮಕ್ಕಳನ್ನ ನಡು ರಸ್ತೆಯಲ್ಲಿ ಸುಟ್ಟು ಹಾಕ್ಬೇಕು’- ಕೆರಳಿ ಕೆಂಡವಾದ ನಟ ಧ್ರುವ ಸರ್ಜಾ; ವಿಡಿಯೋ ರಿಲೀಸ್‌!
Advertisment
  • ಪ್ರತಿ ಮನೆ ಪುರುಷರಿಗೆ ಇದನ್ನು ಹೇಳಿ ಕೊಡಬೇಕೆಂದ ಮಾರ್ಟಿನ್ ನಟ
  • ನಮ್ಮದು ರಾಮ ಜನ್ಮಭೂಮಿ ಆದರೆ ಕೆಲವು ಕಿರಾತಕರಿಂದ ಕೆಟ್ಟ ಹೆಸರು
  • ಒಂದು ಮನೆಗೆ ಅನ್ಯಾಯ ಆಗಿದೆ ಎಂದರೆ ಅವರ ಜೊತೆ ನಾವಿರಬೇಕು

ಕೊಲ್ಕತ್ತಾದ ಆರ್​.ಜಿ ಕರ್ ಕಾಲೇಜಿನಲ್ಲಿ ಟ್ರೈನಿ ವೈದ್ಯೆಯ ಮೇಲಾದ ಅನಾಚಾರ, ರಾಕ್ಷಸ ಕೃತ್ಯಕ್ಕೆ ಇಡೀ ದೇಶವೇ ಬೆಚ್ಚಿ ಬಿದ್ದಿದೆ. ವೈದ್ಯರು, ಸಾರ್ವಜನಿಕರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ಈ ನೀಚ ಕೃತ್ಯವನ್ನ ದೇಶಾದ್ಯಾಂತ ಸೆಲೆಬ್ರಿಟಿಗಳು ತೀವ್ರವಾಗಿ ಖಂಡಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಸ್ಯಾಂಡಲ್​​ವುಡ್​ ಸ್ಟಾರ್ ಧ್ರುವ ಸರ್ಜಾ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕೊಲ್ಕತ್ತಾದಲ್ಲಿ ಬೀದಿಗಿಳಿದ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಭಾರೀ ಆಕ್ರೋಶ; ಯಾಕೆ?

ಈ ಸಂಬಂಧ ತಮ್ಮ ಎಕ್ಸ್​ ಅಕೌಂಟ್​​ನಲ್ಲಿ ವಿಡಿಯೋ ಶೇರ್ ಮಾಡಿ ಮಾತನಾಡಿರುವ ಧ್ರುವ ಸರ್ಜಾ ಅವರು, ಇವತ್ತು ನಮ್ಮ ಸಿನಿಮಾ ಕುರಿತು ಮಾತನಾಡುವುದನ್ನ ಪಕ್ಕಕ್ಕೆ ಇಟ್ಟು ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಮಾತಾಡೋಣ. 2024 ಆಗಸ್ಟ್​ 14ರ ಭಾರತದ ಅಂಕಿ ಅಂಶಗಳ ಪ್ರಕಾರ ಪ್ರತಿ 16 ನಿಮಿಷಗಳಿಗೊಮ್ಮೆ ಒಂದು ಹೆಣ್ಣು ಮಗುವಿನ ಮೇಲೆ ಕೃತ್ಯ ನಡೆಯುತ್ತಿದೆ. ಎಲ್ಲಿ ಮಹಿಳೆಯರಿಗೆ ಮರ್ಯಾದೆ, ಗೌರವ ಇರಲ್ಲವೋ ಅಲ್ಲಿ ಆ ಭಗವಂತನೇ ಇರಲ್ವಂತೆ. ನಮ್ಮದು ರಾಮ ಜನ್ಮಭೂಮಿ ಎಂದು ಕರೆಯುತ್ತೇವೆ. ಕೆಲವು ದುಷ್ಕರ್ಮಿಗಳು ಮಾಡುತ್ತಿರುವ ಕೃತ್ಯದಿಂದ ಇಡೀ ಭಾರತಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: VIDEO: ಕೋಲ್ಕತ್ತಾ ವೈದ್ಯೆ ಕೇಸ್​​.. ನನಗೆ ನಾಚಿಕೆ ಆಗುತ್ತಿದೆ ಎಂದು ಆಕ್ರೋಶ ಹೊರಹಾಕಿದ ಕೊಹ್ಲಿ

ಮಹಿಳೆಯರಿಗೆ ಮಾತ್ರ ಹಾಗೇ ಇರಿ, ಹೀಗೆ ಇರಿ, ಇದೇ ರೀತಿ ಬಟ್ಟೆ ಹಾಕೋಬೇಕು. ಇದನ್ನೇ ಮಾಡಬೇಕು, ಅದನ್ನೇ ಮಾಡಬೇಕು ಎಂದು ಹೇಳುವುದಕ್ಕಿಂತ ಯುವಕರಿಗೂ 3 ವಿಷಯಗಳ ಬಗ್ಗೆ ತಿಳಿ ಹೇಳಬೇಕು. ಮಹಿಳೆಯರನ್ನ ಹೇಗೆ ರಕ್ಷಣೆ ಮಾಡಬೇಕು? ಅವರಿಗೆ ಯಾವ ರೀತಿ ಸಹಾಯ ಮಾಡಬೇಕು? ಮಹಿಳೆಯರಿಗೆ ಹೇಗೆ ಗೌರವ ಕೊಡಬೇಕು? ಪ್ರತಿ ಮನೆಯಲ್ಲೂ ಪುರುಷರಿಗೆ ಈ ಬಗ್ಗೆ ಹೇಳಲೇಬೇಕು. ಇಂತಹ ದುಷ್ಕೃತ್ಯ ಎಸಗುವ ವ್ಯಕ್ತಿಗಳಿಗೆ ಕಾನೂನು ರೀತಿ ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ.


">August 19, 2024

ಕೃತ್ಯ ನಡೆಸಿದ ಆರೋಪಿಗಳಿಗೆ ಎಂತಹ ಕಠಿಣ ಶಿಕ್ಷೆ ಕೊಟ್ಟರು ಸಂತ್ರಸ್ತ ಕುಟುಂಬಸ್ಥರಿಗೆ ನೋವು ಮರೆಯಲಾಗಲ್ಲ. ಇಂತಹ ನನ್ಮಕ್ಕಳನ್ನ ನಡುರಸ್ತೆಯಲ್ಲಿ ನಿಲ್ಲಿಸಿ ಜೀವಂತವಾಗಿ ಸುಟ್ಟಾಕಿದರೂ ಸಮಾಧಾನ ಆಗಲ್ಲ. ಇಂತಹ ಆರೋಪಿಗಳಿಗೆ ಭಗವಂತ ಒಳ್ಳೆಯದು ಮಾಡದಿರಲಿ. ಒಂದು ಮನೆಗೆ ಅನ್ಯಾಯ ಆಗಿದೆ ಎಂದರೆ ಅವರ ಜೊತೆ ನಾವಿರಬೇಕು. ದಯವಿಟ್ಟ ಎಲ್ಲರೂ ಧ್ವನಿ ಎತ್ತಬೇಕು. ನ್ಯಾಯಕ್ಕೆ ಜಯ ಸಿಗಲಿ ಎಂದು ಧ್ರುವ ಸರ್ಜಾ ಅವರು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment