/newsfirstlive-kannada/media/post_attachments/wp-content/uploads/2024/05/martin-1.jpg)
ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾ ನಿರ್ದೇಶಕ A.P ಅರ್ಜುನ್ ಮೇಲೆ ಗಂಭೀರ ಆರೋಪವೊಂದು ಕೇಳಿಬಂದಿದೆ. CG ವರ್ಕ್ಗಾಗಿ ಕೊಟ್ಟಿದ್ದ ಹಣದಲ್ಲಿ ನಿರ್ದೇಶಕ ಕಮಿಷನ್ ಪಡೆದಿದ್ದಾರೆ ಎಂಬ ಆರೋಪವನ್ನು ಡಿಜಿಟೆಲ್ ಟೆರೆನ್ ನಿರ್ದೇಶಕರೊಬ್ಬರು ಹೊರಿಸಿದ್ದಾರೆ.
ಮಾರ್ಟಿನ್ ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ ಸಿನಿಮಾ. ಅಕ್ಟೋಬರ್ 11ಕ್ಕೆ ವಿಶ್ವದಾದ್ಯಂತ 'ಮಾರ್ಟಿನ್' ಬಿಡುಗಡೆಯಾಗಲಿದೆ. ಆದರೆ ನಿರ್ದೇಶಕ ಅರ್ಜುನ್ ಲಕ್ಷಲಕ್ಷ ಹಣ ಕಮಿಷನ್ ಪಡೆದಿದ್ದಾರೆ ಎಂದು ಡಿಜಿಟೆಲ್ ಟೆರೆನ್ ನಿರ್ದೇಶಕ ಸತ್ಯಾ ರೆಡ್ಡಿ ಆರೋಪಿಸಿದ್ದಾರೆ.
[caption id="attachment_76913" align="alignnone" width="800"] ಡಿಜಿಟೆಲ್ ಟೆರೆನ್ ನಿರ್ದೇಶಕ ಸತ್ಯಾ ರೆಡ್ಡಿ[/caption]
ಏನಿದು ಘಟನೆ?
ಮಾರ್ಟಿನ್ ಅರ್ಜುನ್ ಆ್ಯಕ್ಷನ್ ಕಟ್ ಹೇಳಿದ ಸಿನಿಮಾ. ಧ್ರುವ ಸರ್ಜಾ ನಟನೆಯ ಸಿನಿಮಾ. ಈ ಸಿನಿಮಾದ CG ವರ್ಕ್ ಮಾಡಿಕೊಡಲು ಡಿಜಿಟೆಲ್ ಟೆರೆನ್ ಕಂಪನಿಗೆ ವಹಿಸಲಾಗಿತ್ತು. ಅದಕ್ಕಾಗಿ ಮಾರ್ಟಿನ್ ತಂಡ ಹಣ ಸಂದಾಯ ಮಾಡಿತ್ತು.
ಇದನ್ನೂ ಓದಿ: ಗುಡ್ಡ ಕುಸಿತದಲ್ಲಿ ಅರ್ಜುನ್ ಇನ್ನೂ ಸಿಕ್ಕಿಲ್ಲ.. ಮಣ್ಣಿನೊಳಗೆ ದೇಹ ಕೊಳೆಯಲು ಎಷ್ಟು ದಿನ ಬೇಕು..?
ಆದರೀಗ ಟೆರೆನ್ ಸಂಸ್ಥೆ ದುಡ್ಡು ಪಡೆದು ಕೆಲಸ ಮಾಡದೆ ವಂಚಿಸಿದೆ. ಈ ಸಂಬಂಧ ಮಾರ್ಟಿನ್ ನಿರ್ಮಾಪಕ ಉದಯ್ ಮೆಹ್ತಾರವರು ಡಿಜಿಟೆಲ್ ಟೆರೆನ್ ನಿರ್ದೇಶಕರಾದ ಸುನಿಲ್ ರೆಡ್ಡಿ, ಸತ್ಯಾ ರೆಡ್ಡಿ ಎಂಬುವವರ ಮೇಲೆ ದೂರು ನೀಡಿದ್ದಾರೆ. ಆದರೆ ಸತ್ಯಾ ರೆಡ್ಡಿಯವರು ಇದರಲ್ಲಿ ನಿರ್ದೇಶಕ ಅರ್ಜುನ್ ಗೆ ಕಮಿಷನ್ ನೀಡಿರೋದಾಗಿ ಹೇಳಿದ್ದಾರೆ.
ಇನ್ನು ಮಾರ್ಟಿನ್ ಚಿತ್ರತಂಡದಲ್ಲಿ ಮನಸ್ತಾಪಗಳಿವೆ ಎಂಬ ಗಾಳಿ ಮಾತುಗಳು ಹರಿದಾಡುತ್ತಿವೆ. ನಿರ್ಮಾಪಕ ಉದಯ್ ಮೆಹ್ತಾ ಹಾಗೂ AP ಅರ್ಜುನ್ ನಡುವೆ ಭಿನ್ನಾಭಿಪ್ರಾಯವಿದೆ ಎಂಬ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಆದರೆ ಇವೆಲ್ಲದಕ್ಕೆ ಮಾರ್ಟಿನ್ ನಿರ್ಮಾಪಕ ವಿಡಿಯೋದಲ್ಲಿ ಕ್ಲಾರಿಟಿ ಕೊಟ್ಟಿದ್ದರು. ಆ ಮೂಲಕ ಸುಳ್ಳು ಸುದ್ದಿಗೆ ತೆರೆ ಎಳೆದಿದ್ದರು.
ಇದನ್ನೂ ಓದಿ: ರಾಜ್ಯದಲ್ಲಿ ಭೂಕುಸಿತ ಪ್ರಕರಣ ಇಂದು ನಿನ್ನೆಯದಲ್ಲ.. ಇದಕ್ಕೆ ಯಾಕೆ ಸರ್ಕಾರ ಗಮನಹರಿಸುತ್ತಿಲ್ಲ..?
ಆದರೀಗ ಮಾರ್ಟಿನ್ ಚಿತ್ರತಂಡದಲ್ಲಿ ಟೆರೆನ್ ಸಂಸ್ಥೆ ದುಡ್ಡು ಪಡೆದು ಕೆಲಸ ಮಾಡದೆ ವಂಚಿಸಿದ್ದು, ನಿರ್ದೇಶಕ ಅರ್ಜುನ್ ಮೇಲೂ ಗಂಭೀರ ಆರೋಪ ಕೇಳಿಬಂದಿದೆ. ಆದರೆ ಇದಕ್ಕೆ ನಿರ್ದೇಶಕರೇ ಉತ್ತರಿಸಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ