Advertisment

ಪೊಲೀಸ್​ ಠಾಣೆ ಮೆಟ್ಟಿಲೇರಿದ ‘ಮಾರ್ಟಿನ್’​ ನಿರ್ಮಾಪಕ.. ನಿರ್ದೇಶಕ A P ಅರ್ಜುನ್​ ಮೇಲೆ ಕಮೀಷನ್​ ಆರೋಪ!

author-image
AS Harshith
Updated On
ಪೊಲೀಸ್​ ಠಾಣೆ ಮೆಟ್ಟಿಲೇರಿದ ‘ಮಾರ್ಟಿನ್’​ ನಿರ್ಮಾಪಕ.. ನಿರ್ದೇಶಕ A P ಅರ್ಜುನ್​ ಮೇಲೆ ಕಮೀಷನ್​ ಆರೋಪ!
Advertisment
  • 2.5 ಕೋಟಿ ರೂಪಾಯಿ ಮೋಸ ಮಾಡಿದ್ದಾರೆಂದು ಆರೋಪ
  • ಪೊಲೀಸ್​ ಠಾಣೆ ಮೆಟ್ಟಿಲೇರಿದ ಧ್ರುವ ಸರ್ಜಾ ನಟನೆಯ ‘ಮಾರ್ಟಿನ್​’ ನಿರ್ಮಾಪಕ
  • ನಿರ್ದೇಶಕನ ಮೇಲೆ ಕಮೀಷನ್​ ಆರೋಪ.. ಇನ್​​ಸ್ಟಾದಲ್ಲಿ ಪೋಸ್ಟ್​ ಹಂಚಿಕೊಂಡ ಅರ್ಜುನ್

ಆ್ಯಕ್ಷನ್​ ಫ್ರಿನ್ಸ್​ ಧ್ರುವ ಸರ್ಜಾ ನಟನೆಯ​ ‘ಮಾರ್ಟಿನ್’ ಸಿನಿಮಾ ನಿರ್ಮಾಪಕ ಪೊಲೀಸ್​​ ಠಾಣೆ ಮೆಟ್ಟಿಲೇರಿದ್ದಾರೆ. ಬರೋಬ್ಬರಿ 2.5 ಕೋಟಿ ರೂಪಾಯಿ ಮೋಸವಾಗಿದೆ ಎಂದು ಡಿಜಿಟೆಲ್‌ ಟೆರೆನ್ ನಿರ್ದೇಶಕರನ್ನು ದೂರಿದ್ದಾರೆ.

Advertisment

ಮಾರ್ಟಿನ್ A P ಅರ್ಜುನ್ ಆ್ಯಕ್ಷನ್​ ಕಟ್​​ ಹೇಳಿದ ಸಿನಿಮಾ. ಧ್ರುವ ಸರ್ಜಾ ನಟನೆಯ ಸಿನಿಮಾ.  ಈ ಸಿನಿಮಾದ CG ವರ್ಕ್ ಮಾಡಿಕೊಡಲು ಡಿಜಿಟೆಲ್‌ ಟೆರೆನ್ ಕಂಪನಿಗೆ ವಹಿಸಲಾಗಿತ್ತು. ಅದಕ್ಕಾಗಿ ಮಾರ್ಟಿನ್ ತಂಡ 2.5 ಕೋಟಿ ರೂಪಾಯಿ ಹಣ ಸಂದಾಯ‌ ಮಾಡಿತ್ತು.

publive-image

ಇದನ್ನೂ ಓದಿ: ಧ್ರುವ ಸರ್ಜಾ ‘ಮಾರ್ಟಿನ್​’ ತಂಡಕ್ಕೆ ಮಹಾಮೋಸ? ನಿರ್ದೇಶಕ ಅರ್ಜುನ್​ ಮೇಲೆ ಕಮೀಷನ್​ ಆರೋಪ!

ಆದರೀಗ ಟೆರೆನ್ ಸಂಸ್ಥೆ ದುಡ್ಡು ಪಡೆದು ಕೆಲಸ ಮಾಡದೆ ವಂಚಿಸಿದೆ. ಈ ಸಂಬಂಧ ಮಾರ್ಟಿನ್​ ನಿರ್ಮಾಪಕ ಉದಯ್​ ಮೆಹ್ತಾರವರು ಡಿಜಿಟೆಲ್‌ ಟೆರೆನ್ ನಿರ್ದೇಶಕರಾದ ಸುನಿಲ್ ರೆಡ್ಡಿ, ಸತ್ಯಾ ರೆಡ್ಡಿ ಎಂಬುವವರ ಮೇಲೆ‌ ದೂರು ನೀಡಿದ್ದಾರೆ. ಆದರೆ ಸತ್ಯಾ ರೆಡ್ಡಿಯವರು ಇದರಲ್ಲಿ ನಿರ್ದೇಶಕ ಅರ್ಜುನ್ ಗೆ 50 ಲಕ್ಷ ರೂಪಾಯಿ ಕಮಿಷನ್ ನೀಡಿರೋದಾಗಿ ಹೇಳಿದ್ದಾರೆ.

Advertisment

ಇದನ್ನೂ ಓದಿ: 2.5 ಕೋಟಿ!! ಮಾರ್ಟಿನ್ ನಿರ್ದೇಶಕನ ಮೇಲೆ ಕಮೀಷನ್​ ಆರೋಪ.. ಇನ್​​ಸ್ಟಾದಲ್ಲಿ ಸ್ಟೇಟಸ್​ ಹಂಚಿಕೊಂಡ A P ಅರ್ಜುನ್​​

publive-image

ಇನ್ನು ಈ ಘಟನೆಯ ಬೆನ್ನಲ್ಲೇ ಪರೋಕ್ಷವಾಗಿ ಇನ್​​ಸ್ಟಾಗ್ರಾಂ ಸ್ಟೇಟಸ್​ ಹಾಕಿರುವ ಎಪಿ ಅರ್ಜುನ್ “ಸತ್ಯ ನೀತಿ ಧರ್ಮವಿದ್ದರೆ ಹಾರಾಡಿ ಮೆರೆದವರು ತೂರಾಡಿ ಹೋಗುವುದನ್ನ ಕಣ್ಣಾರೆ ನೋಡುವೆ” ಎಂದು ಸ್ಟೇಟಸ್​​ ಹಂಚಿಕೊಂಡಿದ್ದಾರೆ.

ಅಕ್ಟೋಬರ್​ 11ಕ್ಕೆ ವಿಶ್ವದಾದ್ಯಂತ ‘ಮಾರ್ಟಿನ್’ ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ಧ್ರುವ ಸರ್ಜಾ ಅವರು ಬ್ರಿಗೇಡಿಯರ್​​ ಅರ್ಜುನ್​ ಸಕ್ಸೇನನಾಗಿ ಕಂಗೊಳಿಸಲಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment