/newsfirstlive-kannada/media/post_attachments/wp-content/uploads/2024/12/shivana-druva.jpg)
ಸ್ಯಾಂಡಲ್‌ವುಡ್ ಆಕ್ಷನ್ ಪ್ರಿನ್ಸ್​ ಧ್ರುವ ಸರ್ಜಾ ಅಬ್ಬರ ಜೋರಾಗಿದೆ. ಜೋಗಿ ಪ್ರೇಮ್ ಹಾಗೂ ಕೈಲಾಶ್ ಖೇರ್ ಜೊತೆಗೆ ಹಾಡಿರೋ ಕೆಡಿ ಚಿತದ ಹಾಡು ರಿಲೀಸ್ ಆಗಿದೆ. ಈ ಹಾಡಿನಲ್ಲಿ ನಟ ಧ್ರುವ ಸರ್ಜಾ ಕಾರ್ ಮೇಲೆ ನಿಂತು ಡ್ಯಾನ್ಸ್ ಮಾಡಿದ್ದು ಸಖತ್​ ಹೈಲೈಟ್​ ಆಗಿದೆ.
ಇದನ್ನೂ ಓದಿ:ಧ್ರುವ ಸರ್ಜಾ ಫ್ಯಾನ್ಸ್ ಹಾಗೂ ಸುಧಾಕರ್ ವಾರ್‌ಗೆ ಹೊಸ ಟ್ವಿಸ್ಟ್.. ಮತ್ತೊಂದು ವಿಡಿಯೋ ರಿಲೀಸ್!
ಕೆ.ಡಿ ಫಸ್ಟ್ ಸಾಂಗ್ ರಿಲೀಸ್ ಈವೆಂಟ್​ನಲ್ಲಿ ನಟ ಧ್ರುವ ಸರ್ಜಾ ಮಾತಾಡಿದ್ದಾರೆ. ಮಾತು ಶುರು ಮಾಡುವ ಮೊದಲೇ ಹ್ಯಾಟ್ರಿಕ್ ಹೀರೋ ಶಿವಣ್ಣನ ಬಗ್ಗೆ ಮಾತಾಡಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಅಮೆರಿಕಾದಲ್ಲಿ ಆಪರೇಷನ್ ನಡೆಯುತ್ತಿದೆ. ಅವರು ಕನ್ನಡ ಸಿನಿಮಾರಂಗದ ದೊಡ್ಡ ಆಸ್ತಿ. ಅವರಿಗೆ ನಮ್ಮ ಆಯಸ್ಸು ಸಿಗಲಿ. ಆದಷ್ಟು ಬೇಗ ಗುಣಮುಖರಾಗಿ ಬರಲಿ ಎಂದು ಪ್ರಾರ್ಥಿಸಿದರು.
ಡಾ.ಶಿವರಾಜ್​ಕುಮಾರ್ ಅವರು ಚಿಕಿತ್ಸೆಗೆಂದು ಅಮೆರಿಕಕ್ಕೆ ತೆರಳಿದ್ದು ಇಂದು ಶಸ್ತ್ರಚಿಕಿತ್ಸೆ ನಡೆಯಲಿದೆ. ಆಸ್ಪತ್ರೆಯಲ್ಲಿ ಶಿವಣ್ಣಗೆ ಶಸ್ತ್ರಚಿಕಿತ್ಸೆಯ ಬಳಿಕ ಒಂದು ತಿಂಗಳು ಕಾಲ ಅಮೆರಿಕದಲ್ಲಿ ಇರಲಿದ್ದಾರೆ. ಜನವರಿ 26ಕ್ಕೆ ಭಾರತಕ್ಕೆ ಶಿವಣ್ಣ ವಾಪಸ್ ಆಗಲಿದ್ದಾರೆ. ಶಿವಣ್ಣ ಜೊತೆ ಗೀತಾ ಶಿವರಾಜ್​ಕುಮಾರ್ ಜೊತೆಯಲ್ಲಿ ಇರಲಿದ್ದಾರೆ. ನೆಚ್ಚಿನ ನಟ ಬೇಗ ಗುಣಮುಖರಾಗಿ ಬರಲಿ ಎಂದು ಬೆಳಗ್ಗೆಯಿಂದ ರಾಜ್ಯದ ನಾನಾ ಭಾಗಗಳಲ್ಲಿ ಅಭಿಮಾನಿಗಳು ದೇವಸ್ಥಾನಗಳಲ್ಲಿ ಹೋಮ- ಹವನಗಳ ಜೊತೆ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ