ಮಹತ್ವದ ಟೆಸ್ಟ್​ ಸೀರೀಸ್​ನಿಂದ ರೋಹಿತ್​ ಆಪ್ತನಿಗೆ ಕೊಕ್​​; ಧೃವ್​ ಜುರೆಲ್​ಗೆ ಅವಕಾಶ

author-image
Ganesh Nachikethu
Updated On
ಮಹತ್ವದ ಟೆಸ್ಟ್​ ಸೀರೀಸ್​ನಿಂದ ರೋಹಿತ್​ ಆಪ್ತನಿಗೆ ಕೊಕ್​​; ಧೃವ್​ ಜುರೆಲ್​ಗೆ ಅವಕಾಶ
Advertisment
  • ಟೀಮ್​ ಇಂಡಿಯಾಗೆ ಬ್ಯಾಕ್​ ಟು ಬ್ಯಾಕ್​ ಹೀನಾಯ ಸೋಲು!
  • ಹೀನಾಯ ಸೋಲಿನ ಬೆನ್ನಲ್ಲೇ ಬುದ್ಧಿ ಕಲಿತ ಟೀಮ್​ ಇಂಡಿಯಾ
  • ಆಸೀಸ್​ ವಿರುದ್ಧ ಮೊದಲ ಟೆಸ್ಟ್​ನಿಂದ ಸ್ಟಾರ್ ಪ್ಲೇಯರ್​ ಔಟ್​

ಇದೇ ತಿಂಗಳು ನವೆಂಬರ್ 22ನೇ ತಾರೀಕಿನಿಂದ ಆಸ್ಟ್ರೇಲಿಯಾ ವಿರುದ್ಧ ಟೀಮ್​ ಇಂಡಿಯಾ 5 ಪಂದ್ಯಗಳ ಟೆಸ್ಟ್​ ಸರಣಿ ಆಡಲಿದೆ. ಕಳೆದ ಎರಡು ಆಸ್ಟ್ರೇಲಿಯಾ ಪ್ರವಾಸಗಳಲ್ಲಿ ಭಾರತ ಟ್ರೋಪಿ ಗೆದ್ದಿತ್ತು. 2016 ರಿಂದಲೂ ಟೀಮ್​ ಇಂಡಿಯಾ ಬಾರ್ಡರ್ ಗವಾಸ್ಕರ್ ಟ್ರೋಫಿ ಗೆಲ್ಲುತ್ತಲೇ ಬಂದಿದೆ. ಟೀಮ್​ ಇಂಡಿಯಾ ಈಗಿರೋ ಪರಿಸ್ಥಿತಿ ನೋಡಿದ್ರೆ ಗೆಲ್ಲೋದು ಕಷ್ಟವಾಗಿದೆ. ಆಸೀಸ್ ಸರಣಿಗೆ ಆಟಗಾರರನ್ನು ಸಜ್ಜುಗೊಳಿಸಲು ಸಿದ್ಧತೆ ಆರಂಭಿಸಿರೋ ಬಿಸಿಸಿಐ ಸರ್ಫರಾಜ್​ ಖಾನ್​ ಅವರನ್ನು ಕೈ ಬಿಡಲು ಮುಂದಾಗಿದೆ.

ಇತ್ತೀಚೆಗೆ ಮುಂಬೈನ ವಾಂಖೆಡೆ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಕೊನೆಯ ಟೆಸ್ಟ್​​ ಪಂದ್ಯದಲ್ಲಿ ನ್ಯೂಜಿಲೆಂಡ್​​ ವಿರುದ್ಧ ಟೀಮ್​ ಇಂಡಿಯಾ 25 ರನ್​ಗಳಿಂದ ಸೋತಿದೆ. ನ್ಯೂಜಿಲೆಂಡ್​ ನೀಡಿದ 147 ರನ್​​ಗಳ ಗುರಿ ಬೆನ್ನತ್ತಿದ ಟೀಮ್​ ಇಂಡಿಯಾ 29.1 ಓವರ್​​ಗಳಲ್ಲಿ ಕೇವಲ 121 ರನ್​​ಗಳಿಗೆ ಆಲೌಟ್​​ ಆಗಿ ಸೋತು ಭಾರೀ ಮುಖಭಂಗ ಅನುಭವಿಸಿದೆ.

ಇನ್ನು, ಟೀಮ್​ ಇಂಡಿಯಾ ಪರ ಏಕಾಂಗಿ ಹೋರಾಟ ನಡೆಸಿದ ಸ್ಟಾರ್​ ವಿಕೆಟ್​ ಬ್ಯಾಟರ್​​ ರಿಷಬ್​ ಪಂತ್​​. ಬರೋಬ್ಬರಿ 64 ರನ್​ ಸಿಡಿಸಿ ಟೀಮ್​ ಇಂಡಿಯಾ ಪಡೆಯಲ್ಲಿ ಗೆಲುವಿನ ವಿಶ್ವಾಸ ಮೂಡಿಸಿದ್ರು. ಆದರೆ, ಇವರು ಔಟ್​​ ಆದ ಕಾರಣ ಭಾರತ ಸೋಲಬೇಕಾಯ್ತು. ಭಾರತ ತಂಡದ ಬ್ಯಾಟರ್​​ಗಳು ನ್ಯೂಜಿಲೆಂಡ್​​ ಬೌಲರ್​​​ಗಳ ವಿರುದ್ಧ ಹೀನಾಯ ಪ್ರದರ್ಶನ ನೀಡಿದ್ರು.

ಟೀಮ್​ ಇಂಡಿಯಾಗೆ ಕೈ ಕೊಟ್ಟ ಸರ್ಫರಾಜ್​ ಖಾನ್​​

ಬೆಂಗಳೂರಲ್ಲಿ ನಡೆದ ಮೊದಲ ಟೆಸ್ಟ್​​ ಮೊದಲ ಇನ್ನಿಂಗ್ಸ್​ನಲ್ಲಿ 150 ರನ್​​ ಸಿಡಿಸಿ ಭಾರೀ ಸದ್ದು ಮಾಡಿದ್ದ ಸರ್ಫರಾಜ್​ ಖಾನ್​ ಟೀಮ್​ ಇಂಡಿಯಾಗೆ ಕೈ ಕೊಟ್ಟರು. ಕೊನೆ ಟೆಸ್ಟ್​ ಪಂದ್ಯದಲ್ಲಿ ಸರ್ಫರಾಜ್​ ಖಾನ್​ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದ್ರು. ಕಳೆದ ಮೂರು ಇನ್ನಿಂಗ್ಸ್​ನಲ್ಲಿ ಸರ್ಫರಾಜ್​ ಖಾನ್​ 11(24), 9(15), 0(4) ಗಳಿಸೋ ಮೂಲಕ ಕಳಪೆ ಪ್ರದರ್ಶನ ನೀಡಿದ್ರು.

ಕೇವಲ ಒಂದು ಪಂದ್ಯದಲ್ಲಿ ಸರಿಯಾಗಿ ಆಡದಿದ್ದಕ್ಕೆ ಕೆ.ಎಲ್​ ರಾಹುಲ್​ ಅವರನ್ನು 2 ಪಂದ್ಯಗಳಿಂದ ಬೆಂಚ್​​ ಕಾಯಿಸಲಾಗಿತ್ತು. ಇವರ ಬದಲಿಗೆ ಸರ್ಫರಾಜ್​ ಖಾನ್​ ಅವರಿಗೆ ಅವಕಾಶ ನೀಡಲಾಗಿತ್ತು. ಈಗ ಸರ್ಫರಾಜ್​ ಖಾನ್​ ಸಂಪೂರ್ಣ ಬ್ಯಾಟಿಂಗ್​ನಲ್ಲಿ ವೈಫಲ್ಯರಾಗಿದ್ದು, ಕೆ.ಎಲ್​ ರಾಹುಲ್​​ ಅವರನ್ನು ಕೈ ಬಿಟ್ಟು ಭಾರತ ಕ್ರಿಕೆಟ್​ ತಂಡ ತಪ್ಪು ಮಾಡಿದ್ಯಾ? ಅನ್ನೋ ಪ್ರಶ್ನೆಗಳು ಕೇಳಿ ಬಂದವು.

ಬಾರ್ಡರ್ ಗವಾಸ್ಕರ್ ಟ್ರೋಫಿಗೆ ಧೃವ್​ ಜುರೆಲ್​ಗೆ ಅವಕಾಶ

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾ ಪ್ಲೇಯಿಂಗ್​ ಎಲೆವೆನ್​​ನಲ್ಲಿ ಸರ್ಫರಾಜ್​ ಖಾನ್ ಬದಲಿಗೆ ಧ್ರುವ್ ಜುರೆಲ್ ಅವರಿಗೆ ಅವಕಾಶ ನೀಡಬಹುದು. ಇತ್ತೀಚೆಗೆ ಮೆಲ್ಬೋರ್ನ್‌ನ ಬೌನ್ಸಿ ಪಿಚ್‌ನಲ್ಲಿ ಆಸ್ಟ್ರೇಲಿಯಾ ಎ ವಿರುದ್ಧದ 2ನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಧ್ರುವ್ ಜುರೆಲ್ ಅದ್ಭುತ ಪ್ರದರ್ಶನ ನೀಡಿದರು. ಮೊದಲ ಇನ್ನಿಂಗ್ಸ್‌ನಲ್ಲಿ 80 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 68 ರನ್ ಗಳಿಸಿದ್ದ ಧೃವ್​ ಜುರೆಲ್​​ ತನ್ನ ಅದ್ಭುತ ಬ್ಯಾಟಿಂಗ್​​ ಮೂಲಕ ಹೆಡ್‌ ಕೋಚ್ ಗೌತಮ್ ಗಂಭೀರ್ ಗಮನ ಸೆಳೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment