PNB ಬ್ಯಾಂಕ್​ಗೆ 13,000 ಕೋಟಿ ರೂಪಾಯಿ ವಂಚನೆ ಆರೋಪ.. ವಜ್ರದ ಉದ್ಯಮಿ ಮೆಹುಲ್​ ಚೋಕ್ಸಿ ಅರೆಸ್ಟ್

author-image
Bheemappa
Updated On
PNB ಬ್ಯಾಂಕ್​ಗೆ 13,000 ಕೋಟಿ ರೂಪಾಯಿ ವಂಚನೆ ಆರೋಪ.. ವಜ್ರದ ಉದ್ಯಮಿ ಮೆಹುಲ್​ ಚೋಕ್ಸಿ ಅರೆಸ್ಟ್
Advertisment
  • ಕೋಟಿ ಕೋಟಿ ಹಣ ವಂಚಿಸಿ ಪರಾರಿಯಾಗಿದ್ದ ವಜ್ರದ ಉದ್ಯಮಿ​
  • ಉದ್ಯಮಿ ಮೆಹುಲ್​ ಚೋಕ್ಸಿಯನ್ನ ಯಾವ ದೇಶದಲ್ಲಿ ಬಂಧಿಸಲಾಗಿದೆ?
  • ವಿದೇಶದಲ್ಲಿ ಮೆಹುಲ್​ ಚೋಕ್ಸಿ ಯಾರ ಜೊತೆ ವಾಸಿಸುತ್ತಿದ್ದನು?

ಪಂಜಾಬ್ ನ್ಯಾಷನಲ್​ ಬ್ಯಾಂಕ್​ (ಪಿಎನ್​​ಬಿ)ಗೆ ಕೋಟಿ ಕೋಟಿ ರೂಪಾಯಿ ವಂಚಿಸಿ ಪರಾರಿಯಾಗಿದ್ದ ವಜ್ರದ ವ್ಯಾಪಾರಿ ಮೆಹುಲ್​ ಚೋಕ್ಸಿಯನ್ನು ಬೆಲ್ಜಿಯಂನಲ್ಲಿ ಅರೆಸ್ಟ್ ಮಾಡಲಾಗಿದೆ. ಸೆಂಟ್ರಲ್ ಬ್ಯೂರೋ ಆಫ್​ ಇನ್ವೆಸ್ಟಿಗೇಶನ್ (ಸಿಬಿಐ), ಜಾರಿ ನಿರ್ದೇಶನಾಲಯದ ಸೇರಿ ಭಾರತದ ತನಿಖೆ ಸಂಸ್ಥೆಗಳ ಕೋರಿಕೆ ಮೇರೆಗೆ ಮೆಹುಲ್​ ಚೋಕ್ಸಿಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ಮೆಹುಲ್​ ಚೋಕ್ಸಿಯನ್ನು ಪಂಜಾಬ್ ನ್ಯಾಷನಲ್​ ಬ್ಯಾಂಕ್​ಗೆ​ 13,500 ಕೋಟಿ ರೂಪಾಯಿಗಳನ್ನು ವಂಚನೆ ಮಾಡಿರುವ ಆರೋಪ ಇದೆ. ಆದರೆ ವೈದ್ಯಕೀಯ ಚಿಕಿತ್ಸೆಗೆಂದು ಯೋರೋಪ್​ಗೆ ಹೋಗಿದ್ದವರು ಮತ್ತೆ ಭಾರತದತ್ತ ಮುಖ ಕೂಡ ಮಾಡಿರಲಿಲ್ಲ. ಇವರ ಮೇಲೆ ಮುಂಬೈ ಕೋರ್ಟ್​ ಜಾಮೀನು ರಹಿತ ವಾಂರಟ್ ಹೊರಡಿಸಿದೆ. ಬ್ಯಾಂಕ್ ವಂಚನೆಯಲ್ಲಿ ಚೋಕ್ಸಿ ಜೊತೆಗೆ ಅವರ ಸೋದರಳಿ ಕೂಡ ಭಾಗಿಯಾಗಿರುವ ಆರೋಪಗಳು ಇವೆ.

ಭಾರತದಿಂದ ಬಂದು ಇಲ್ಲಿ ತಲೆಮರೆಸಿಕೊಂಡಿರುವುದನ್ನು ಬೆಲ್ಜಿಯಂ ಅಧಿಕಾರಿಗಳು ಕಳೆದ ತಿಂಗಳು ಕನ್ಫರ್ಮ್​ ಮಾಡಿದ್ದರು. ಪತ್ನಿ ಪ್ರೀತಿ ಚೋಕ್ಸಿ ಜೊತೆ ರೆಸಿಡೆನ್ಸಿ ಕಾರ್ಡ್​ ಪಡೆದುಕೊಂಡು ಆಂಟೆರ್ಪ್ ನಗರದಲ್ಲಿ ವಾಸಿಸುತ್ತಿರುವುದು ಗೊತ್ತಾಗಿತ್ತು. ಚೋಕ್ಸಿ ಮೇಲಿನ ಪ್ರಕರಣವನ್ನು ಸರ್ಕಾರ ಸೂಕ್ಷ್ಮವಾಗಿ ಪರಿಗಣಿಸುತ್ತಿದೆ. ಹೀಗಾಗಿ ಅವರನ್ನು ಬಂಧಿಸಲಾಗಿದೆ ಎಂದು ಬೆಲ್ಜಿಯಂನ ಫೆಡರಲ್ ಪಬ್ಲಿಕ್ ಸರ್ವೀಸ್​ನ ವಿದೇಶಾಂಗ ವ್ಯವಹಾರಗಳ ಸಿಬ್ಬಂದಿ ಡೇವಿಡ್ ಜೋರ್ಡೆನ್ಸ್ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: 100 T20 ಅರ್ಧಶತಕ ಸಿಡಿಸಿದ RCB ಸ್ಟಾರ್​ ಬ್ಯಾಟರ್ ಕಿಂಗ್​ ಕೊಹ್ಲಿ.. ಲಿಸ್ಟ್​ನಲ್ಲಿ ಯಾರು ಯಾರ್ ಇದ್ದಾರೆ?

publive-image

ಬೆಲ್ಜಿಯಂನಲ್ಲಿ ವಾಸಿಸಲು ಹಕ್ಕು ಪಡೆಯುವ ವೇಳೆ ಮೆಹುಲ್ ಚೋಕ್ಸಿ ತಪ್ಪಾದ ದಾಖಲೆಗಳನ್ನು ನೀಡಿದ್ದಾರೆ. ಅರ್ಜಿಯಲ್ಲಿ ತನ್ನ ರಾಷ್ಟ್ರೀಯತೆಯನ್ನು ತಪ್ಪಾಗಿ ಹೇಳಿ ಇಷ್ಟು ದಿನ ತಪ್ಪಿಸಿಕೊಂಡಿದ್ದರು. ಭಾರತ ಹಾಗೂ ಆಂಟಿಗುವಾದಲ್ಲಿ ಇರುವ ಬಗ್ಗೆ ಪೌರತ್ವ ವಿವರಗಳನ್ನು ಬಹಿರಂಗ ಪಡಿಸಿರಲಿಲ್ಲ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ ಎನ್ನಲಾಗಿದೆ.

ಭಾರತದ ಪ್ರತಿಷ್ಠಿತ ಬ್ಯಾಂಕ್​ಗೆ 13,000 ಕೋಟಿ ರೂಪಾಯಿಗಳನ್ನು ವಂಚನೆ ಮಾಡಿರುವ ಮೆಹುಲ್​ ಚೋಕ್ಸಿಯನ್ನು ಸದ್ಯ ಬೆಲ್ಜಿಯಂನಲ್ಲಿ ಅರೆಸ್ಟ್ ಮಾಡಲಾಗಿದೆ. ಬಂಧನ ಪ್ರಕ್ರಿಯೆಗಳು ಬಳಿಕ ಸದ್ಯದಲ್ಲೇ ಅವರನ್ನು ಭಾರತಕ್ಕೆ ಗಡಿಪಾರು ಮಾಡಲು ಇನ್ನಿತರ ಕಾನೂನು ಪ್ರಕ್ರಿಯೆ ನಡೆಸಲಾಗುತ್ತದೆ ಎಂದು ತಿಳಿದು ಬಂದಿದೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment