ಕಣ್ಣಿನ ಮೇಲ್ಭಾಗದಲ್ಲಿ 7 ಸ್ಟಿಚಸ್​.. ಆದರೂ ಫೀಲ್ಡ್​ಗೆ ಇಳಿದು ಧಮಾಕ ಸೃಷ್ಟಿಸಿದ ಪಾಂಡ್ಯ..!

author-image
Bheemappa
Updated On
ಕಣ್ಣಿನ ಮೇಲ್ಭಾಗದಲ್ಲಿ 7 ಸ್ಟಿಚಸ್​.. ಆದರೂ ಫೀಲ್ಡ್​ಗೆ ಇಳಿದು ಧಮಾಕ ಸೃಷ್ಟಿಸಿದ ಪಾಂಡ್ಯ..!
Advertisment
  • 100 ರನ್​ಗಳ ಅಂತರದಿಂದ ಗೆಲುವು ಪಡೆದ ಇಂಡಿಯನ್ಸ್​
  • ಹಾರ್ದಿಕ್ ಪಾಂಡ್ಯ ಕಣ್ಣಿನ ಮೇಲ್ಭಾಗಕ್ಕೆ ಆಗಿರುವುದು ಏನು?
  • 23 ಎಸೆತ, 6 ಬೌಂಡರಿ, 1 ಸಿಕ್ಸರ್, 48 ರನ್ ಚಚ್ಚಿದ ಪಾಂಡ್ಯ

ಐಪಿಎಲ್​ನಲ್ಲಿ ಗೆಲುವಿನ ಅಲೆಯಲ್ಲಿ ತೇಲುತ್ತಿರುವ ಮುಂಬೈ ಇಂಡಿಯನ್ಸ್​ ಪಾಯಿಂಟ್ ಪಟ್ಟಿಯಲ್ಲಿ ಟಾಪ್​ನಲ್ಲಿದೆ. ರಾಜಸ್ಥಾನ್ ತಂಡವನ್ನು ಮಣಿಸಿದ ಮುಂಬೈ ಅಗ್ರಜನಾಗಿದೆ. ಪಂದ್ಯದಲ್ಲಿ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಸ್ಟೈಲೀಶ್ ಆಗಿ ಧರಿಸಿದ ಆ ಗ್ಲಾಸ್​ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಕಣ್ಣುಗಳಿಗೆ ಪಾಂಡ್ಯ ಕನ್ನಡಕ ಹಾಕಲು ಕಾರಣವೇನು?

ರಾಜಸ್ಥಾನ್ ಹಾಗೂ ಮುಂಬೈ ನಡುವಿನ ಪಂದ್ಯ ನಡೆಯುವುದಕ್ಕೂ ಮೊದಲು ಹಾರ್ದಿಕ್ ಪಾಂಡ್ಯ ಸೇರಿದಂತೆ ಎಲ್ಲ ಪ್ಲೇಯರ್ಸ್​ ಅಭ್ಯಾಸ ಮಾಡುತ್ತಿದ್ದರು. ಈ ವೇಳೆ ಹಾರ್ದಿಕ್ ಪಾಂಡ್ಯ ಭರ್ಜರಿ ಬ್ಯಾಟಿಂಗ್ ಪ್ರಾಕ್ಟೀಸ್ ಮಾಡುವಾಗ ಸ್ವೀಪ್ ಶಾಟ್ ಹೊಡೆಯಲು ಹೋಗಿದ್ದರು. ಆಗ ಚೆಂಡು ಬಲವಾಗಿ ಕಣ್ಣಿನ ಮೇಲ್ಭಾಗಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.

ಇದನ್ನೂ ಓದಿ:ರೋಹಿತ್ ಪತ್ನಿಗೆ ಕೈಜೋಡಿಸಿ ನಮಸ್ಕರಿಸಿದ IPL ಸ್ಟಾರ್.. ಆಕಾಶ್ ಮಧ್ವಾಲ್ ಸರಳತೆಗೆ ಜನ ಸೆಲ್ಯೂಟ್..!

publive-image

ತಕ್ಷಣ ಹಾರ್ದಿಕ್ ಪಾಂಡ್ಯ, ವೈದ್ಯರಿಂದ ಚಿಕಿತ್ಸೆ ಪಡೆದುಕೊಂಡಿದ್ದು ಚೆಂಡು ಬಿದ್ದ ಕಣ್ಣಿನ ಮೇಲ್ಭಾಗದಲ್ಲಿ ಒಟ್ಟು 7 ಹೊಲಿಗೆ ಹಾಕಲಾಗಿದೆ. ಕಣ್ಣಿಗೆ ತೀವ್ರವಾದ ಗಾಯವಾಗಿದ್ದರೂ ನೋವಿನಲ್ಲೇ ರಾಜಸ್ಥಾನ್ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಕಣಕ್ಕೆ ಇಳಿದು ಆರ್ಭಟಿಸಿದ್ದರು.

ಭರ್ಜರಿ ಬ್ಯಾಟಿಂಗ್ ಮಾಡಿದ ಹಾರ್ದಿಕ್ ಪಾಂಡ್ಯ 23 ಬಾಲ್​ಗಳಲ್ಲಿ 6 ಬೌಂಡರಿ, 1 ಸಿಕ್ಸರ್​ನಿಂದ 48 ರನ್​ ಗಳಿಸಿ ಅಜೇಯರಾಗಿ ಉಳಿದರು. ಒಂದು ಓವರ್ ಬೌಲಿಂಗ್ ಕೂಡ ಮಾಡಿ ಒಂದು ವಿಕೆಟ್​ ಕಬಳಿಸಿದ್ದರು. ಇನ್ನು ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ 100 ರನ್​ಗಳ ಅಂತರದಿಂದ ಅದ್ಭುತ ಗೆಲುವು ಸಾಧಿಸಿತು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment