ಫಿಲ್ ಸಾಲ್ಟ್​ ಅವರ ಗೆಳತಿಗೆ ಗಂಡು ಮಗು ಜನಿಸಿತಾ.. SALT Jr ರೆಡ್​ ಟೀಶರ್ಟ್ ಏನಿದು..? ​

author-image
Bheemappa
Updated On
ಫಿಲ್ ಸಾಲ್ಟ್​ ಅವರ ಗೆಳತಿಗೆ ಗಂಡು ಮಗು ಜನಿಸಿತಾ.. SALT Jr ರೆಡ್​ ಟೀಶರ್ಟ್ ಏನಿದು..? ​
Advertisment
  • ಪಂಜಾಬ್ ಗೆಲುವಿಗೂ ಮೊದಲೇ ಸಾಲ್ಟ್​ಗೆ ಗುಡ್​ನ್ಯೂಸ್​ ಸಿಕ್ಕಿತಾ?
  • ತವರಿಗೆ ಹೋಗಿ ಫೈನಲ್ ಆಡಲು ವಾಪಸ್​ ಬಂದಿದ್ದ ಫಿಲ್ ಸಾಲ್ಟ್​
  • ಪ್ರಿಯಾಂಶ್ ಆರ್ಯ ಅವರ ಅತ್ಯದ್ಭುತವಾದ ಕ್ಯಾಚ್​ ಹಿಡಿದಿದ್ದರು

ರಾಯಲ್ ಚಾಲೆಂಜರ್ಸ್​ ಬೆಂಗಳೂರು, ಪಂಜಾಬ್ ವಿರುದ್ಧ ಭರ್ಜರಿಯಾಗಿ ಗೆದ್ದು ಬೀಗಿದೆ. ಐಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿರುವ ಆರ್​ಸಿಬಿ ಸದ್ಯ ಸಂಭ್ರಮದಲ್ಲಿ ಮುಳುಗಿದೆ. ಇದೇ ಖುಷಿಯಲ್ಲಿರುವ ತಂಡದ ಸ್ಫೋಟಕ ಬ್ಯಾಟರ್ ಫಿಲ್ ಸಾಲ್ಟ್ ಅವರಿಗೆ ಡಬಲ್​ ಧಮಾಕ. ಏಕೆಂದರೆ ಅವರು ಗಂಡು ಮಗುವಿಗೆ ತಂದೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಫಿಲ್ ಸಾಲ್ಟ್ ಅವರು ಫೈನಲ್​ ಪಂದ್ಯದ ಆರಂಭಕ್ಕೂ ಮೊದಲು ಎರಡು ದಿನ ಅಭ್ಯಾಸದಲ್ಲಿ ತೊಡಗಿಕೊಳ್ಳದೇ ತವರಿಗೆ ಹೋಗಿ ವಾಪಸ್​ ಬಂದಿದ್ದರು. ಸಾಲ್ಟ್ ಅವರ ಗೆಳತಿ ಅಬಿ ಮೆಕ್ಲಾವೆನ್ (Abi McLaven) ಮೊದಲ ಮಗುವಿಗೆ ಜನ್ಮ ನೀಡಿದ್ದಾರೆ. ಇದು ಗಂಡು ಮಗು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲವಾದರೂ ರೆಡ್​ ಟೀಶರ್ಟ್​ ಫೋಟೋ ವೈರಲ್ ಆಗುತ್ತಿದೆ.

ಇದನ್ನೂ ಓದಿ:IPL ಫೈನಲ್​ನಲ್ಲಿ ಅತಿ ಹೆಚ್ಚು ಬಾರಿ ಸೋತ ಟೀಮ್ ಯಾವುದು..? ಲಿಸ್ಟ್​ನಲ್ಲಿ ಆರ್​ಸಿಬಿಯೂ ಇದೆ!

publive-image

ಸೋಶಿಯಲ್ ಮೀಡಿಯಾದಲ್ಲಿ ರೆಡ್​ ಟೀಶರ್ಟ್​ ಫೋಟೋವೊಂದು ವೈರಲ್ ಆಗುತ್ತಿದ್ದು ಇದರ ಮೇಲೆ ಜೂನಿಯರ್ ಸಾಲ್ಟ್ ಎಂದು ಇಂಗ್ಲಿಷ್​ನಲ್ಲಿ ಬರೆಯಲಾಗಿದೆ. ಹೀಗಾಗಿ ನೆಟ್ಟಿಗರೆಲ್ಲ ಕಂಗ್ರಾಟ್ಸ್​ ಹೇಳುತ್ತಿದ್ದಾರೆ. ಸಾಲ್ಟ್ ಅವರು ಗಂಡು ಮಗುವಿಗೆ ಅಪ್ಪನಾದ ಖುಷಿ ಒಂದ್ಕಡೆ ಆದ್ರೆ, ಆರ್​ಸಿಬಿ ಟ್ರೋಫಿ ಎತ್ತಿ ಹಿಡಿದಿರುವ ಸಂತಸ ಇನ್ನೊಂದು ಕಡೆ. ಹೀಗಾಗಿ ಡಬಲ್ ಸೆಲೆಬ್ರೆಷನ್ ಫಿಲ್ ಸಾಲ್ಟ್ ಎಂದು ಕಾಮೆಂಟ್ಸ್ ಮಾಡುತ್ತಿದ್ದಾರೆ.

ಫೈನಲ್​ ಪಂದ್ಯದಲ್ಲಿ ಆರಂಭಿಕರಾಗಿ ಬ್ಯಾಟ್ ಬೀಸಿದ್ದ ಫಿಲ್ ಸಾಲ್ಟ್ ಕೇವಲ 9 ಬಾಲ್​ಗಳಲ್ಲಿ 1 ಸಿಕ್ಸರ್​ 2 ಬೌಂಡರಿಗಳಿಂದ 16 ರನ್​ ಗಳಿಸಿದ್ದರು. ಬ್ಯಾಟಿಂಗ್ ನಂತರ ಮೈದಾನದಲ್ಲಿ ಬೌಂಡರಿ ಲೈನ್​ ಬಳಿ ಫೀಲ್ಡಿಂಗ್ ಮಾಡುವಾಗ ಪಂಜಾಬ್ ಕಿಂಗ್ಸ್ ಓಪನರ್​ ಪ್ರಿಯಾಂಶ್ ಆರ್ಯ ಬಾರಿಸಿದ್ದ ಬಾಲ್​ ಅನ್ನು ಯಾರೂ ಊಹಿಸದ ರೀತಿಯಲ್ಲಿ ಅಮೋಘವಾಗಿ ಸಾಲ್ಟ್ ಕ್ಯಾಚ್ ಹಿಡಿದಿದ್ದರು. ​

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment