/newsfirstlive-kannada/media/post_attachments/wp-content/uploads/2024/01/Shoaib-Malik.jpg)
ಭಾರೀ ವಿವಾದದ ಮಧ್ಯೆ ಪಾಕಿಸ್ತಾನದ ಮಾಜಿ ಕ್ರಿಕೆಟರ್​​ ಶೋಯೆಬ್ ಮಲಿಕ್ ನಟಿ ಸನಾ ಜಾವೇದ್ ಅವರನ್ನು 3ನೇ ಮದುವೆ ಆಗಿದ್ದಾರೆ. ಈ ಮೂಲಕ ಮತ್ತೊಮ್ಮೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸದ್ಯ ಸಾನಿಯಾ ಮಿರ್ಜಾ ಅವರಿಗೆ ಶೋಯೆಬ್​​​​ ಮೂರನೇ ಮದುವೆ ಬಗ್ಗೆ ಮೊದಲೇ ಗೊತ್ತಿತ್ತಾ? ಅನ್ನೋ ಚರ್ಚೆ ಶುರುವಾಗಿದೆ.
ಶೋಯೆಬ್​ ಮದುವೆ ಬಗ್ಗೆ ಸಾನಿಯಾಗೆ ಮೊದಲೇ ತಿಳಿದಿತ್ತಾ?
ಹೌದು, ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಸಾನಿಯಾ ಮಿರ್ಜಾಗೆ ಶೋಯೆಬ್ ಮಲಿಕ್ ಮದುವೆ ಆಗುವ ವಿಚಾರ ಮೊದಲೇ ಗೊತ್ತಿತ್ತೇ? ಎಂಬ ಚರ್ಚೆಗಳು ಜೋರಾಗಿವೆ. ಇದಕ್ಕೆ ಕಾರಣ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ತನ್ನ ಇನ್​ಸ್ಟಾದಲ್ಲಿ ಹಾಕಿದ್ದ ಪೋಸ್ಟ್​​. ಮದುವೆ ಕಷ್ಟ, ವಿಚ್ಛೇದನವೂ ಕಷ್ಟ ಎಂದು ಸಾನಿಯಾ ಮಿರ್ಜಾ ಪೋಸ್ಟ್​ ಹಾಕಿದ್ದು, ಈ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಿದೆ.
ಇನ್ನು, ಶೋಯೆಬ್ ಮಲಿಕ್ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರನ್ನು ಎರಡನೇ ಮದುವೆಯಾಗಿದ್ದರು. ಕಳೆದ 12 ವರ್ಷಗಳಿಂದ ಶೋಯೆಬ್ ಮತ್ತು ಸಾನಿಯಾ ಪರಸ್ಪರ ಜೊತೆಯಲ್ಲೇ ಇದ್ದರು. ಇಬ್ಬರಿಗೂ ಒಬ್ಬ ಮಗ ಕೂಡ ಇದ್ದಾನೆ. ಸದ್ಯ ಶೋಯೆಬ್ ಮಲಿಕ್ ಮತ್ತು ಸಾನಿಯಾ ಮಿರ್ಜಾ ವಿಚ್ಛೇದನ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us