/newsfirstlive-kannada/media/post_attachments/wp-content/uploads/2024/08/Tajmahal-Agra.jpg)
ತಾಜ್ ಮಹಲ್ ಪ್ರೇಮದ ಗುರುತಾಗಿ ಈ ದೇಶದಲ್ಲಿ ಶತಮಾನಗಳಿಂದಲೂ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಪ್ರಮುಖ ತಾಣ. ಯುನೆಸ್ಕೋದ ವಿಶ್ವಪಾರಂಪರಿಕ ತಾಣಗಳಲ್ಲಿ ಗುರುತಿಸಿಕೊಂಡ ಭವ್ಯವಾದ ಕಟ್ಟಡ. ಪ್ರಪಂಚದ ಏಳು ಅದ್ಭುತಗಳಲ್ಲಿ ತಾಜ್​ ಮಹಲ್ ಕೂಡ ಒಂದು. ಹೀಗೆ ಅನೇಕ ರೀತಿಯ ಪ್ರಸಿದ್ಧಿಯನ್ನು ಪಡೆದಿರುವ ತಾಜ್ ಹಿಂದೆ ಹಲವು ರಹಸ್ಯಗಳು ಅಡಗಿವೆ. ತನ್ನ ಪ್ರಿಯತಮೆಗಾಗಿಯೇ ಮೊಘಲ ರಾಜ ಶಾಜಹಾನ್ ಇದನ್ನು ಕಟ್ಟಿಸಿದ್ದ. ಈ ಒಂದು ತಾಜ್ ಮಹಲ್ ನಿರ್ಮಾಣವಾಗಲು 22 ವರ್ಷಗಳು ಬೇಕಾದವು. ಅಷ್ಟು ವರ್ಷಗಳ ಶ್ರಮದಿಂದಾಗಿಯೇ ಇಂತಹದೊಂದು ಅದ್ಭುತ ಸೃಷ್ಟಿಯಾಗಿದ್ದು.
ತಾಜ್​ ಮಹಲ್​ ಇತಿಹಾಸವನ್ನು ಕೆದಕುತ್ತಾ ಹೋದಂತೆ ನಮಗೆ ಹಲವು ಹುದುಗಿರುವ ಸತ್ಯಗಳ ಅನಾವರಣ ಆಗುತ್ತದೆ. ತಾಜ್​ಗೆ ಸುಮಾರು 400 ವರ್ಷಗಳ ಕಾಲದ ಇತಿಹಾಸವಿದೆ. ಈ ತಾಜ್​ ಮಹಲ್ ನಿರ್ಮಾಣವಾದ ಬಳಿಕ ಇದರ ಗುಮ್ಮಟದ ಮೇಲೆ ಸುಮಾರು 466 ಕೆಜಿ ತೂಕವುಳ್ಳ ಬಂಗಾರದ ಕಳಶ ಅಥವಾ ಕಿರೀಟವನ್ನು ಜೋಡಿಸಲಾಗಿತ್ತು. ಆದ್ರೆ ಈಗ ನಾವು ತಾಜ್ ಮಹಲ್ ನೋಡಲು ಹೋದಾಗ ಆ ಬಂಗಾರದ ಕಿರೀಟ ಕಾಣುವುದಿಲ್ಲ. ಅದರ ಬದಲಿಗೆ ತಾಮ್ರದ ಕಿರೀಟವಿರುವುದು ನಾವು ಕಾಣುತ್ತೇವೆ. ಹಾಗಿದ್ದರೆ ಆ 466 ಕೆಜಿ ಬಂಗಾರದ ಕಿರೀಟಕ್ಕೆ ಏನಾಯ್ತು. ಕಾಣೆಯಾಗಿದ್ದು ಹೇಗೆ ಎಂದು ನೋಡುತ್ತಾ ಹೋಗುವುದಾದ್ರೆ ನಾವು ಮತ್ತೆ ಬ್ರಿಟಿಷ್ ಆಡಳಿತದ ಇತಿಹಾಸಕ್ಕೆ ಬರಬೇಕಾಗುತ್ತದೆ.
ಇದನ್ನೂ ಓದಿ: ರಾಜ್ಯದಲ್ಲಿ ಮತ್ತೊಂದು ಘೋರ ದುರಂತ.. ಕರೆಂಟ್ ಶಾಕ್‌ಗೆ ಯುವತಿ ದಾರುಣ ಸಾವು
/newsfirstlive-kannada/media/post_attachments/wp-content/uploads/2025/03/TAJ-MAHAL-GOLD-CROWN.jpg)
ತಾಜ್ ಮಹಲ್ ಗುಮ್ಮಟದ ಮೇಲೆ ಅರ್ಧಚಂದ್ರಾಕೃತಿಯ ಹಾಗೂ ನಕ್ಷತ್ರವಿರುವ ಬಂಗಾರದ ಕಿರೀಟವನ್ನು ಜೋಡಿಸಲಾಗಿತ್ತು. ಸದ್ಯ ಅದು ನಮಗೆ ಈಗ ತಾಜ್​ ಮಹಲ್​ನಲ್ಲಿ ನೋಡಲು ಸಿಗುವುದಿಲ್ಲ. ಹೀಗಾಗಿ ಇದು ಕಾಣೆಯಾಗಲು ಕಾರಣವೇನು ಎಂಬ ಪ್ರಶ್ನೆಯೊಂದು ಹುಟ್ಟಿಕೊಳ್ಳುತ್ತದೆ. ಇದಕ್ಕೆ ಕಾರಣ ಈಗಾಗಲೇ ಹೇಳಿದಂತೆ ಬ್ರಿಟಿಷ ಆಡಳಿತ.
ಇದನ್ನೂ ಓದಿ:ಭಾರತದ ಅತ್ಯಂತ ಸ್ವಚ್ಛ ಗ್ರಾಮ ಎಂಬ ಹೆಗ್ಗಳಿಕೆ ಪಡೆದ 5 ಹಳ್ಳಿಗಳು ಇವು! ಇದನ್ನು ಸಾಧಿಸಿದ್ದು ಹೇಗೆ?
1810ನೇ ಇಸ್ವಿಯಲ್ಲಿ ಜೊಸೇಫ್ ಟೇಲರ್ ಎಂಬ ಬ್ರಿಟಿಷ್ ಅಧಿಕಾರಿ ತಾಜ್ ಮಹಲ್ ಮೇಲಿದ್ದ 466ಕೆಜಿ ಬಂಗಾರದ ಕಿರೀಟವನ್ನು ಇಳಿಸಿದ್ದನೆಂದು ಎಂದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಆ ಬಂಗಾರದ ಕಿರೀಟವಿಳಿಸಿ ಆ ಜಾಗದಲ್ಲಿ ಬಂಗಾರದ ಕಿರೀಟವನ್ನೇ ಹೋಲುವ ತಾಮ್ರದ ಕಿರೀಟವನ್ನು ಜೋಡಿಸಿದ ಎಂದು ಹೇಳಲಾಗುತ್ತದೆ. ಹೀಗೆ ತಾಜ್​ ಮಹಲ್ ಗುಮ್ಮಟದ ಮೇಲಿದ್ದ ಬಂಗಾರದ ಕಳಸ ಮಾಯವಾಯಿತು. ಅದರ ಜಾಗಕ್ಕೆ ತಾಮ್ರದ ಕಳಶ ಬಂದು ಕುಳಿತುಕೊಂಡಿತು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us