/newsfirstlive-kannada/media/post_attachments/wp-content/uploads/2024/11/Anjeer-Soaked-Milk.jpg)
ಕೆಲವರು ಪಕ್ಕಾ ಸಸ್ಯಾಹಾರಿಗಳು ಇರುತ್ತಾರೆ. ಸುರಕ್ಷಿತ ಸಸ್ಯಾಹಾರಕ್ಕಾಗಿ ಹೆಚ್ಚು ಅವಲಂಬಿಸುವುದು ಹಣ್ಣು ಹಾಗೂ ತರಕಾರಿ. ಜಗತ್ತಿನಲ್ಲಿ ಸಿಗುವ ಎಲ್ಲ ತರಹದ ಹಣ್ಣುಗಳು ಸಸ್ಯಾಹಾರವೇ ಎಂಬ ಒಂದು ನಂಬಿಕೆಯೊಂದಿದೆ. ಆದರೆ ನಿಸರ್ಗ ನಾವು ಅಂದುಕೊಂಡಂತೆ ಇಲ್ಲ. ಪ್ರಕೃತಿಯಲ್ಲಿ ಹಲವು ವೈಚಿತ್ರ್ಯಗಳಿವೆ. ಕೆಲವು ಪ್ರಶ್ನೆಗಳಿಗೆ ಇಲ್ಲಿ ಸದಾಕಾಲ ಉತ್ತರವೇ ಸಿಗಲ್ಲ. ಅದರಲ್ಲಿ ಒಂದು ಹಣ್ಣಿನ ಬಗ್ಗೆ ಇಂದಿಗೂ ಚರ್ಚೆಯೊಂದು ಜಾರಿಯಲ್ಲಿಯೇ ಇದೆ. ಅದು ಅಂಜೂರ ಹಣ್ಣು. ಇದು ಸಸ್ಯಹಾರಿಗಳಿಗೆ ಸೇವಿಸುವ ಒಂದು ಸಸ್ಯಾಹಾರ ಎಂದೇ ಎಲ್ಲರೂ ಹೇಳುತ್ತಾರೆ ಅಸಲಿಗೆ ಇದು ಸಸ್ಯಾಹಾರ ಹಣ್ಣು ಅಲ್ಲವೆಂದು ಕೆಲವರು ವಾದಿಸುತ್ತಾರೆ.
ಇದನ್ನೂ ಓದಿ:ಅಂಜೂರ ನೆನೆಯಿಟ್ಟ ಹಾಲನ್ನು ಕುಡಿಯುವುದರಿಂದ ಇವೆ ಒಟ್ಟು 5ಲಾಭಗಳು; ಯಾವುವು?
ಅಂಜೂರ ಹಣ್ಣು ಪಶ್ಚಿಮ ಏಷ್ಯಾ, ಉತ್ತರ ಆಫ್ರಿಕಾ, ಹಾಗೂ ಯುರೋಪ್ಗಳಲ್ಲಿ ಅತಿಹೆಚ್ಚಾಗಿ ಬೆಳೆಯುವ ಹಣ್ಣು. ಇದನ್ನು ಸಾಮಾನ್ಯವಾಗಿ ಹಣ್ಣುಗಳಲ್ಲಿಯ ಒಂದು ವಿಧ ಎಂದು ಗುರುತಿಸಲಾಗುತ್ತದೆ. ಅಂಜೂರ ನಿಜವಾಗಿ ಹೇಳಬೇಕು ಅಂದ್ರೆ ಅದು ಒಂದು ಹೂವಿನ ಪ್ರಕಾರ. ಅದರೊಳಗೆ ಬೀಜಕೋಶಗಳು ಇರುತ್ತವೆ. ಹೊರಭಾಗ ಹಳದಿ ಹಾಗೂ ಹಸಿರು ಬಣ್ಣದಿಂದ ಕೂಡಿರುತ್ತದೆ. ಒಳಭಾಗದಲ್ಲಿ ರುಚಿಯಾದ ಕೆಂಪುಬಣ್ಣದ ಹಣ್ಣು ನಮಗೆ ತಿನ್ನಲು ಸಿಗುತ್ತದೆ. ಈ ಒಂದು ಹಣ್ಣು ಹೆಚ್ಚು ನೀರಿನ ಅಂಶ ಹಾಗೂ ಕಾರ್ಬೋಹೈಡ್ರೆಟ್ಸ್ಗಳನ್ನು ಹೊಂದಿರುತ್ತದೆ. ಇವುಗಳನ್ನು ನೇರವಾಗಿ ತಿನ್ನಬಹುದು ಇಲ್ಲವೇ ಜಾಮ್ ರೂಪದಲ್ಲಿಯೂ ಕೂಡ ತಿನ್ನಬಹುದು
ಅಂಜೂರ ಒಂದು ಮಾಂಸಾಹಾರ ಪದಾರ್ಥ, ಹೇಗೆ..?
ಈ ಸಮಸ್ಯೆಯ ಬೇರು ಇರುವುದೇ ಅಂಜೂರ ಹೇಗೆ ಪರಾಗಸ್ಪರ್ಶ ಹಾಗೂ ಜೇನುಗಳ ನಡುವಿನ ಪಾಲುದಾರಿಕೆಯಲ್ಲಿಯೇ ಇದೆ. ಈ ಎರಡರ ನಡುವಿನ ಸಂಬಂಧದಿಂದಲೇ ಅಂಜೂರ ಹಣ್ಣು ಉತ್ಪಾದನೆ ಆಗುತ್ತದೆ. ಯಾವಾಗ ಅಂಜೂರ ಸಸ್ಯ ಪರಾಗಸ್ಪರ್ಶ ಹೊಂದುತ್ತದೆಯೋ ಆಗ ಜೇನುನೊಣ ಈ ಅಂಜೂರದಲ್ಲಿ ಪ್ರವೇಶ ಪಡೆಯುತ್ತದೆ. ಈ ಪ್ರಕ್ರಿಯೆಯಲ್ಲಿ ತನ್ನ ರೆಕ್ಕೆಗಳನ್ನು ಅದು ಕಳೆದುಕೊಳ್ಳುತ್ತದೆ. ಪರಾಗ ಹೀರಿದ ಬಳಿಕ ಅದು ಅಲ್ಲಿಂದ ಹಾರಿ ಹೋಗುವಲ್ಲಿ ವಿಫಲವಾಗುತ್ತದೆ. ಅದು ತನ್ನ ಮೊಟ್ಟೆಗಳನ್ನು ಅಂಜೂರ ಹಣ್ಣಿನಲ್ಲಿಯೇ ಇಟ್ಟು ಕೊನೆ ಉಸಿರು ಎಳೆಯುತ್ತದೆ. ಯಾವಾಗ ಮೊಟ್ಟೆಯೊಡೆದು ಮರಿಯಾಗುತ್ತವೆಯೋ ಗಂಡು ಜೇನುನೊಣ ಹಾಗೂ ಹೆಣ್ಣು ಜೇನು ನೋಣ ಅಲ್ಲಿಯೇ ಕೂಡಿಕೆ ಮಾಡುತ್ತವೆ ಮತ್ತು ಅಲ್ಲಿಂದ ಎಸ್ಕೇಪ್ ಆಗಲು ಸಣ್ಣದೊಂದು ಸುರಂಗ ಸೃಷ್ಟಿಸಿ ಹೆಣ್ಣು ಜೇನುನೊಣಗಳು ಹಾರಿ ಹೋಗುತ್ತವೆ ಮತ್ತು ಗಂಡು ಜೇನುನೊಣಗಳು ಅಲ್ಲಿಯೇ ಸಾಯುತ್ತವೆ. ಮತ್ತೆ ಗರ್ಭ ಧರಿಸಿದ ಹೆಣ್ಣು ನೊಣಗಳು ಅಂಜೂರ ಹಣ್ಣಿನ ಪರಾಗಸ್ಪರ್ಶಕ್ಕೆ ಹೊರಟು ನಿಲ್ಲುತ್ತವೆ, ಈ ಒಂದು ಚಕ್ರ ಹೀಗೆಯೇ ಸಾಗುತ್ತದೆ.
ಇದನ್ನೂ ಓದಿ:ಮಾವಿನ ಎಲೆಯಲ್ಲಿವೆ ಹಲವು ಔಷಧಿ ಗುಣಗಳು! ಇದರ ಸೇವನೆಯಿಂದ ಏನೆಲ್ಲಾ ತಡೆಯಬಹುದು ಗೊತ್ತಾ?
ಈ ಒಂದು ಪ್ರಕ್ರಿಯೆಯಿಂದ ಗೊತ್ತಾಗುತ್ತದೆ ಅಂಜೂರ ಹಣ್ಣು ಮೃತಪಟ್ಟ ನೊಣಗಳ ಒಂದು ಸಂಗ್ರಹ ಎಂದು, ಈ ವಿಧಾನದಿಂದ ಈ ಹಣ್ಣನ್ನು ಮಾಂಸಾಹಾರ ಹಣ್ಣು ಎಂದು ಗುರುತಿಸಲಾಗುತ್ತದೆ. ಹಾಗಂತ ನೀವು ಅಂಜೂರ ಹಣ್ಣು ತಿನ್ನುವಾಗಲೆಲ್ಲಾ ನಾನು ಮೃತಪಟ್ಟ ಜೇನುನೊಣಗಳ ಹಣ್ಣನ್ನು ತಿನ್ನುತ್ತಿದ್ದೇವೆ ಎಂದು ಭಾವಿಸಬೇಡಿ. ಹಣ್ಣಿನ ಕಿಣ್ವಗಳು ಸಂಪೂರ್ಣವಾಗಿ ಜೇನುನೊಣಗಳ ಇರುವಿಕೆಯನ್ನು ತೊಡೆದು ಹಾಕಿರುತ್ತವೆ. ಆದ್ರೆ ಈ ನೈಸರ್ಗಿಕ ಪರಾಗಸ್ಪರ್ಶದ ಪ್ರಕ್ರಿಯೆ ಅಂಜೂರ ಹಣ್ಣು ಸಸ್ಯಾಹಾರವಾ ಮಾಂಸಾಹಾರವಾ ಎಂಬ ಒಂದು ಚರ್ಚೆಯನ್ನು ಮುಂದಿಟ್ಟಿದೆ ಅಷ್ಟೇ. ಜೇನುನೊಣಗಳ ಅಲ್ಲಿಯೇ ಉಳಿದು ಅಳಿದು ಹೋಗುವುದರಿಂದ ಇದನ್ನು ಮಾಂಸಾಹಾರ ಎಂದು ಕೆಲವರ ವಾದಿಸುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ