/newsfirstlive-kannada/media/post_attachments/wp-content/uploads/2024/08/Tajmahal-Agra.jpg)
ಆಗ್ರಾದಲ್ಲಿ ನಿರ್ಮಾಣವಾಗಿರುವ ತಾಜ್ ಮಹಲ್ ವಿಶ್ವದ ಅತ್ಯಂತ ಪ್ರಸಿದ್ಧ ಸ್ಮಾರಕಗಳಲ್ಲಿ ಒಂದು. ಇದನ್ನು ಮೊಘಲ ಸಾಮ್ರಾಜ್ಯದ ದೊರೆ ಶಹ ಜಹಾನ್ ತನ್ನ ಪತ್ನಿ ಮುಮ್ತಾಜ್ಳ ಪ್ರೀತಿಯ ನೆನಪಿಗಾಗಿ ಕಟ್ಟಿಸಿದ ಎಂದು ಇತಿಹಾಸದಲ್ಲಿ ಹೇಳಲಾಗಿದೆ. ಅಪ್ಪಟ ಶ್ವೇತ ಬಣ್ಣದ ಮಾರ್ಬಲ್ನಲ್ಲಿ ನಿರ್ಮಾಣಗೊಂಡಿರುವ ಈ ತಾಜ್ ಮಹಲ್ ವಿಶ್ವ ಪಾರಂಪರಿಕ ಕಟ್ಟಡಗಳಲ್ಲಿ ಒಂದಾಗಿದೆ.
ತಾಜ್ಮಹಲ್ ನಿರ್ಮಾಣಕ್ಕೆ ಬಳಸಲಾದ ವಾಸ್ತುಶಿಲ್ಪದ ಶೈಲಿಯೇ ಒಂದು ಅದ್ಭುತ ಪ್ರಕ್ರಿಯೆ. ಪರ್ಷಿಯನ್, ಒಟ್ಟೊಮನ್, ಭಾರತ ಹಾಗೂ ಇಸ್ಲಾಮಿಕ್ ಶೈಲಿಯ ಮಿಶ್ರಿತ ವಾಸ್ತುಶಿಲ್ಪದಲ್ಲಿ ವಿನ್ಯಾಸ ಮಾಡಿ ಕಟ್ಟಲಾದ ಸ್ಮಾರಕ ಇದು. ಇದನ್ನು 1632ರಲ್ಲಿ ಕಟ್ಟಲು ಆರಂಭಿಸಿ 1648ರಲ್ಲಿ ಕಾಮಗಾರಿಯನ್ನು ಮುಗಿಸಲಾಯ್ತು. ಸದ್ಯ ಇದು ತಾಜ್ ಮಹಲ್ ಎಂಬ ಹೆಸರನಲ್ಲಿಯೇ ವಿಶ್ವ ಪ್ರಸಿದ್ಧಿಯಾಗಿದೆ. ಆದ್ರೆ ಈ ಸ್ಮಾರಕವನ್ನು ಮೊದಲು ಏನೆಂದು ಕರೆಯುತ್ತಿದ್ದರು ಗೊತ್ತಾ. ಬಹುತೇಕ ಜನರಿಗೆ ಇದರ ಬಗ್ಗೆ ಗೊತ್ತಿಲ್ಲ.
ಇದನ್ನೂ ಓದಿ: ಸುಧಾ ಮೂರ್ತಿಗೆ ಮೋದಿ ವಿಶೇಷ ಮನವಿ.. ಆನಂದ್ ಮಹೀಂದ್ರಾ ಸೇರಿ 10 ಗಣ್ಯರಿಗೆ ಸ್ಪೆಷಲ್ ಟಾಸ್ಕ್..!
ಈಗಾಗಲೇ ಹೇಳಿದಂತೆ ವಾಸ್ತುಶಿಲ್ಪದ ಕ್ಷೇತ್ರದಲ್ಲಿ ತಾಜ್ ಮಹಲ್ನ್ನು ಅತ್ಯಂತ ಶ್ರೇಷ್ಠವಾಗಿ ನೋಡಲಾಗುತ್ತದೆ. 1998ರಲ್ಲಿ ಇದು ಯುನೆಸ್ಕೊದ ವಿಶ್ವ ಪಾರಂಪರಿಕ ಕಟ್ಟಗಳಲ್ಲಿ ಸೇರಲ್ಪಟ್ಟಿತು. ವಿಶ್ವದ ಏಳು ಅದ್ಭುತಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ತಾಜ್ ಮಹಲ್ ಈ ಹಿಂದೆ ಬೇರೆಯದ್ದೇ ಹೆಸರಿನಿಂದ ಕರೆಯಲ್ಪಡುತ್ತಿತ್ತು.
ಇದನ್ನೂ ಓದಿ: ಮಹಾಕುಂಭಕ್ಕೆ ಹೋಗಿದ್ದ ವಾಹನ ಭೀಕರ ಅಪಘಾತ; ಕರ್ನಾಟಕದ 6 ಭಕ್ತರು ಸಾವು
ನಿಮಗೆ ಗೊತ್ತಾ ಈ ಸ್ಮಾರಕವನ್ನು ಅಂದು ಅತ್ಯಂತ ಪ್ರಸಿದ್ಧವಾದ ಹೆಸರಿನಿಂದ ಕರೆಯುತ್ತಿದ್ದರು. ತಾಜ್ ಮಹಲ್ನ ಅಸಲಿ ಹೆಸರು ರೋಜಾ-ಎ- ಮುನವ್ವರಾ. ಪರ್ಷಿಯನ್ ಭಾಷೆಯಲ್ಲಿ ಇದರ ಅರ್ಥ ಅನನ್ಯವಾದ ಕಟ್ಟಡ ಎಂದು. ಹೌದು, ಆರಂಭದಲ್ಲಿ ತಾಜ್ ಮಹಲ್ನ್ನು ರೋಜಾ-ಎ.ಮುನವ್ವರಾ ಎಂದು ಗುರುತಿಸಲಾಗುತ್ತಿತ್ತು. ಅಂದರೆ ಇನ್ನೊಂದು ಅರ್ಥದಲ್ಲಿ ಅದು ಪ್ರಕಾಶಿಸುತ್ತಿರುವ ಸಮಾಧಿ ಅಂತ. ಮುಂದೆ ಕಾಲಮಾನ ಬದಲಾದ ಹಾಗೆ ಈ ಒಂದು ಹೆಸರಿಗೆ ತಾಜ್ ಮಹಲ್ ಎಂಬ ಹೆಸರು ಬಂತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ