/newsfirstlive-kannada/media/post_attachments/wp-content/uploads/2024/12/Kiccha-Fan.jpg)
ಚಿತ್ರದುರ್ಗ: ಭೀಕರ ರಸ್ತೆ ಅಪಘಾತದಲ್ಲಿ ನಟ ಕಿಚ್ಚ ಸುದೀಪ್​​ ಅಭಿಮಾನಿ ಸಾವನ್ನಪ್ಪಿದ್ದಾರೆ. ಭಾನುವಾರ ಚಿತ್ರದುರ್ಗದಲ್ಲಿ ನಡೆದ ನಟ ಸುದೀಪ್​​ ಅವರ ಮ್ಯಾಕ್ಸ್ ಸಿನಿಮಾ ಪ್ರೀ ರಿಲೀಸ್​ ಇವೆಂಟ್​​ ನೋಡಿ ಬರುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ಇನ್ನು, ಅಪಘಾತದಲ್ಲಿ ಅಸುನೀಗಿದ ವ್ಯಕ್ತಿ ಪಾಪೇನಹಳ್ಳಿ ಗ್ರಾಮದ ಹರಳಯ್ಯ. 28 ವರ್ಷದ ಹರಳಯ್ಯ ಆಟೋದಲ್ಲಿ ಮ್ಯಾಕ್ಸ್​​ ಸಿನಿಮಾ ಪ್ರೀ ರಿಲೀಸ್​ ಇವೆಂಟ್​ ನೋಡಲು ಚಿತ್ರದುರ್ಗಕ್ಕೆ ಬಂದಿದ್ದರು. ಚಿತ್ರದುರ್ಗದಿಂದ ಪಾಪೇನಹಳ್ಳಿಗೆ ವಾಪಸ್​ ಹೋಗುವಾಗ ವಾಹನ ಒಂದಕ್ಕೆ ಡಿಕ್ಕಿ ಹೊಡೆದಿದ್ದಾರೆ.
ಮಾರ್ಗ ಮಧ್ಯೆ ಅಪಘಾತಕ್ಕೆ ಒಳಗಾದ ಕೂಡಲೇ ಚಿಕಿತ್ಸೆಗಾಗಿ ಇವರನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಯ್ತು. ಈ ವೇಳೆ ಚಿಕಿತ್ಸೆ ಫಲಿಸದೇ ಇವರು ಜೀವಬಿಟ್ಟಿದ್ದಾರೆ. ಚಿತ್ರದುರ್ಗದ ಸೈನ್ಸ್ ಕಾಲೇಜು ಆವರಣದಲ್ಲಿ ಇವೆಂಟ್​ ನಡೆದಿತ್ತು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us