newsfirstkannada.com

ಮೇಲ್ಮನೆ vs ಕೆಳಮನೆ: ರಾಜ್ಯಸಭೆ ಲೋಕಸಭೆಯಂತಲ್ಲ; ರಾಜ್ಯಸಭೆಯು ಲೋಕಸಭೆಗಿಂತ ಹೇಗೆ ಭಿನ್ನವಾಗಿದೆ..?

Share :

Published February 27, 2024 at 1:24pm

    ಲೋಕಸಭೆ ಅವಧಿ 5 ವರ್ಷ, ರಾಜ್ಯಸಭೆಯನ್ನು ಎಂದಿಗೂ ವಿಸರ್ಜಿಸುವುದಿಲ್ಲ

    ನಿಮಗೆ ರಾಜ್ಯಸಭೆ ಸದಸ್ಯರ ಅಧಿಕಾರದ ಅವಧಿ ಎಷ್ಟು ಅಂತಾ ಗೊತ್ತಾ?

    ರಾಜ್ಯಸಭೆ ಸದಸ್ಯರಾಗಲು ನಿಮಗೆ ಎಷ್ಟು ವರ್ಷ ಆಗಿರಬೇಕು ಗೊತ್ತಾ?

ದೇಶದ ಸಂಸದೀಯ ವ್ಯವಸ್ಥೆಯಲ್ಲಿ ಸಂಸತ್ತಿನ ಎರಡು ಸದನಗಳಿವೆ. ಮೊದಲನೇಯದು ಲೋಕಸಭೆ, ಎರಡನೇಯದು ರಾಜ್ಯಸಭೆ. ಲೋಕಸಭೆಯನ್ನು ಸಾಂವಿಧಾನಿಕವಾಗಿ House of the People ಅಥವಾ ಕೆಳಮನೆ ಎಂದು ಕರೆಯಲಾಗುತ್ತದೆ. ಅದೇ ರೀತಿ ರಾಜ್ಯಸಭೆಯನ್ನು ಸ್ಟೇಟ್ಸ್​ ಕೌನ್ಸಿಲ್ ಅಥವಾ ಮೇಲ್ಮನೆ ಎಂಬ ಹೆಸರಿನಿಂದ ಸಂಬೋಧಿಸಲಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎರಡೂ ಸದನಗಳು ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತವೆ.

ಲೋಕಸಭೆ ಚುನಾವಣೆ ಹತ್ತಿರ ಬರುತ್ತಿರುವ ಸಂದರ್ಭದಲ್ಲಿ ದೇಶದ ಮೂರು ರಾಜ್ಯಗಳಲ್ಲಿ ಇವತ್ತು ರಾಜ್ಯಸಭೆಗೆ ಚುನಾವಣೆ ನಡೆಯುತ್ತಿದೆ. ಕರ್ನಾಟಕ, ಉತ್ತರ ಪ್ರದೇಶ, ಹಿಮಾಚಲಪ್ರದೇಶದಲ್ಲಿ ರಾಜ್ಯಸಭೆಗೆ ಚುನಾವಣೆ ನಡೆಯುತ್ತಿದೆ. ಕರ್ನಾಟಕದಲ್ಲಿ ಒಟ್ಟು 4 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಪ್ರಜ್ರಾಪ್ರಭುತ್ವದಲ್ಲಿ ಎರಡೂ ಮನೆಗಳು ಪ್ರಮುಖ ಪಾತ್ರವಹಿಸಿದ್ದರೂ, ರಾಜ್ಯಸಭೆ ಮತ್ತು ಲೋಕಸಭೆಗೆ ತುಂಬಾನೇ ವ್ಯತ್ಯಾಸ ಇದೆ.

ರಾಜ್ಯಸಭೆ ಲೋಕಸಭೆಗಿಂತ ಭಿನ್ನ ಹೇಗೆ..?
ರಾಜ್ಯಸಭೆಯನ್ನು ಸಂವಿಧಾನದ 80ನೇ ವಿಧಿಯಲ್ಲಿ ಉಲ್ಲೇಖಿಸಿದ್ರೆ, ಲೋಕಸಭೆಯನ್ನು 81ನೇ ವಿಧಿಯಲ್ಲಿ ತಿಳಿಸಲಾಗಿದೆ. ಎರಡೂ ಮನೆಗಳ ಅಧಿಕಾರದ ಅವಧಿ, ವಯಸ್ಸು ಮತ್ತು ಕೆಲಸ ಮಾಡುವ ವಿಧಾನದಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ರಾಜ್ಯಸಭೆಯು ಲೋಕಸಭೆಯಂತಲ್ಲ. ಲೋಕಸಭೆಯನ್ನು ವಿಸರ್ಜಿಸಲಾಗುತ್ತದೆ. ಆದರೆ ರಾಜ್ಯಸಭೆಯನ್ನು ಎಂದಿಗೂ ವಿಸರ್ಜಿಸುವುದಿಲ್ಲ.

ಸ್ಥಾನಗಳ ಸಂಖ್ಯೆಯಲ್ಲಿ ವ್ಯತ್ಯಾಸ: ರಾಜ್ಯಸಭೆ ಮತ್ತು ಲೋಕಸಭೆ ಸ್ಥಾನಗಳಲ್ಲಿ ವ್ಯತ್ಯಾಸ ಇದೆ. ದೇಶದಲ್ಲಿ ಪ್ರಸ್ತುತ ಲೋಕಸಭೆ ಸದಸ್ಯತ್ವದ ಸ್ಥಾನ 543 ಆಗಿದೆ. ಅದರ ಗರಿಷ್ಠ ಸಂಖ್ಯೆಯ ಸದಸ್ಯರು 552 ಆಗಿದೆ. ರಾಷ್ಟ್ರಪತಿಗಳು ಆಂಗ್ಲೋ-ಇಂಡಿಯನ್ ಸಮುದಾಯದ ಇಬ್ಬರು ಸದಸ್ಯರನ್ನು ಲೋಕಸಭೆಗೆ ನಾಮನಿರ್ದೇಶನ ಮಾಡಬಹುದು. ಇನ್ನು ರಾಜ್ಯಸಭೆಯ ಸ್ಥಾನಗಳ ಸಂಖ್ಯೆ 250 ಆಗಿದೆ. ಕಲೆ, ಶಿಕ್ಷಣ, ಸಮಾಜ ಸೇವೆ, ಕ್ರೀಡೆಯಂತಹ ಕ್ಷೇತ್ರಗಳಿಂದ 12 ಸದಸ್ಯರನ್ನು ರಾಷ್ಟ್ರಪತಿಗಳು ರಾಜ್ಯಸಭೆಗೆ ನಾಮನಿರ್ದೇಶನ ಮಾಡುತ್ತಾರೆ.

ಸದಸ್ಯರ ಆಯ್ಕೆ ಹೇಗಿರುತ್ತದೆ..?
ಲೋಕಸಭೆ ಸದಸ್ಯರನ್ನು ಸಾರ್ವಜನಿಕ ಚುನಾವಣೆಯಲ್ಲಿ ನೇರವಾಗಿ ಜನರೇ ಆಯ್ಕೆ ಮಾಡಿ ಕಳುಹಿಸುತ್ತಾರೆ. ರಾಜ್ಯಸಭೆಯ ಸದಸ್ಯರನ್ನು ರಾಜ್ಯ ವಿಧಾನಸಭೆಯ ಚುನಾಯಿತ ಸದಸ್ಯರು ಆಯ್ಕೆ ಮಾಡುತ್ತಾರೆ. ಆಯ್ಕೆಯ ವಿಧಾನ ಹೇಗಿರುತ್ತದೆ ಎಂದರೆ, ರಾಜ್ಯಸಭೆ ಚುನಾವಣಾ ಪ್ರಕ್ರಿಯೆ ಇರೋದು ಪ್ರಶಾಸ್ತ್ಯದ ಮತದಾನ. ಇಲ್ಲಿ ಮತದಾರರು, ಪಕ್ಷದ ಏಜೆಂಟರ್​​ಗಳಿಗೆ ತೋರಿಸಿ ಓಪನ್ ಬ್ಯಾಲೆಟ್ ಮೂಲಕ ಮತದಾನ ಮಾಡುತ್ತಾರೆ. ಪಕ್ಷದ ಶಾಸಕರು ಯಾರಿಗೆ ವೋಟ್ ಹಾಕಿದ್ದಾರೆಂದು ತಿಳಿದುಕೊಳ್ಳಲು ಆಯಾ ಪಕ್ಷದಿಂದ ಅಧಿಕಾರಿಗಳು ನೇಮಕಗೊಂಡಿರುತ್ತಾರೆ. ಅವರಿಗಾಗಿಯೇ ಒಂದು ಪ್ರತ್ಯೇಕ ಕಂಪಾರ್ಟ್​​ಮೆಂಟ್ ಮಾಡಲಾಗಿದೆ. ಮತದಾರರು ಮತವನ್ನು ಹಾಕಲು ಬಂದ ಆಯಾ ಪಕ್ಷದ ಏಜೆಂಟ್ಸ್​ಗೆ ತೋರಿಸಿ ಮತವನ್ನು ಹಾಕಬೇಕು. ಆ ಪಾರ್ಟಿ ಬಿಟ್ಟು, ಬೇರೆ ಪಕ್ಷದ ಏಜೆಂಟ್​ಗೆ ತೋರಿಸಿದ್ರೆ ಅದು ಅಸಿಂಧು ಆಗುತ್ತದೆ.

ವಯೋಮಿತಿ, ಅಧಿಕಾರವಧಿ ಎಷ್ಟು..?
ದೇಶದ ಲೋಕಸಭೆಯನ್ನು ಪ್ರತಿನಿಧಿಸಲು ಕನಿಷ್ಠ ವಯಸ್ಸು 25 ವರ್ಷ. ಆದರೆ ಮೇಲ್ಮನೆಗೆ ಹೋಗಬೇಕು ಅಂದರೆ ಒಬ್ಬ ವ್ಯಕ್ತಿಯ ವಯಸ್ಸು 30 ವರ್ಷಗಳಾಗಿರಬೇಕು. ಇನ್ನು ಲೋಕಸಭೆಯ ಗರಿಷ್ಠ ಅಧಿಕಾರಾವಧಿಯು ಐದು ವರ್ಷಗಳು. ಆದರೆ ರಾಜ್ಯಸಭೆಯು ಶಾಶ್ವತ ಸದನವಾಗಿದೆ. ಇದನ್ನು ಎಂದಿಗೂ ವಿಸರ್ಜಿಸುವುದಿಲ್ಲ. ಇಲ್ಲಿ ಪ್ರತಿ ಎರಡು ವರ್ಷಗಳಿಗೊಮ್ಮೆ ಮೂರನೇ ಒಂದು ಭಾಗದಷ್ಟು ಸದಸ್ಯರು ನಿವೃತ್ತರಾಗುತ್ತಾರೆ. ರಾಜ್ಯಸಭೆಯ ಅಧಿಕಾರಾವಧಿ ಆರು ವರ್ಷಗಳಾಗಿದೆ.

ಅಧ್ಯಕ್ಷರು ಯಾರು..? ಲೋಕಸಭೆಗೆ ಸ್ಪೀಕರ್ ಅಧ್ಯಕ್ಷತೆ ವಹಿಸುತ್ತಾರೆ. ಸದ್ಯ ಓಂ ಬಿರ್ಲಾ ಅವರು ಲೋಕಸಭೆ ಸ್ಪೀಕರ್ ಆಗಿದ್ದಾರೆ. ರಾಜ್ಯಸಭೆಗೆ ಉಪರಾಷ್ಟ್ರಪತಿಗಳು ಅಧ್ಯಕ್ಷರಾಗಿರುತ್ತಾರೆ. ಲೋಕಸಭೆಯ ಶಾಸಕಾಂಗವು ಶಾಸನಗಳ ರಚನೆ, ಹಣಕಾಸಿನ ವಿಷಯಗಳು, ಚುನಾವಣೆ ಮತ್ತು ಸಾರ್ವಜನಿಕ ಅಧಿಕಾರಿಗಳ ಜವಾಬ್ದಾರಿ ಇರುತ್ತದೆ. ಲೋಕಸಭೆಯಲ್ಲಿ ಮಾತ್ರ ಹಣದ ಮಸೂದೆಗಳನ್ನು (ಬಜೆಟ್) ಮಂಡಿಸಬಹುದು. ಈ ಸದನವು ಸರ್ಕಾರ ನಡೆಸಲು ಹಣವನ್ನು ಮೀಸಲಿಡುತ್ತದೆ. ಇಲ್ಲಿ ರಾಜ್ಯಸಭೆಗೆ ಅಷ್ಟೊಂದು ಅಧಿಕಾರ ಇಲ್ಲ.

ರಾಜ್ಯಸಭೆಯು ಬಜೆಟ್ ಮೇಲೆ ಚರ್ಚಿಸಬಹುದು ಮತ್ತು ಅನುದಾನದ ಬೇಡಿಕೆಗಳ ಮೇಲೆ ಮತ ಚಲಾಯಿಸುವ ಹಕ್ಕನ್ನು ಹೊಂದಿಲ್ಲ. ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಕೊನೆಗೊಳಿಸುವ ನಿರ್ಣಯವನ್ನು ಲೋಕಸಭೆಯು ಅಂಗೀಕರಿಸಬಹುದು. ರಾಜ್ಯಸಭೆಗೆ ಎರಡು ವಿಶೇಷ ಅಧಿಕಾರ ಇದೆ. ಆರ್ಟಿಕಲ್ 249ರ ಅಡಿಯಲ್ಲಿ ರಾಜ್ಯ ಪಟ್ಟಿಯಿಂದ ಕಾನೂನುಗಳನ್ನು ಮಾಡಲು ಸಂಸತ್ತಿಗೆ ಅಧಿಕಾರ ನೀಡಬಹುದು. ಆರ್ಟಿಕಲ್ 312ರ ಅಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಎರಡಕ್ಕೂ ಹೊಸ ಅಖಿಲ ಭಾರತ ಸೇವೆಯನ್ನು (All India Services) ರಚಿಸಲು ಸಂಸತ್ತಿಗೆ ಅಧಿಕಾರ ನೀಡಬಹುದಾಗಿದೆ. ಜೊತೆಗೆ ಬಜೆಟ್ ಮಸೂದೆಗಳನ್ನು ಹೊರತುಪಡಿಸಿ ಲೋಕಸಭೆಯಲ್ಲಿ ಅಂಗೀಕರಿಸುವ ಮಸೂದೆಗಳನ್ನು ಅಂಗೀಕರಿಸುವ ಅಧಿಕಾರ ರಾಜ್ಯಸಭೆಗೂ ಇದೆ. ಒಂದು ಮಸೂದೆಯನ್ನು ಎರಡು ಸದನಗಳು ಅಂಗೀಕರಿಸಿದರೆ ಮಾತ್ರ ಅದು ಕಾನೂನು ಆಗುತ್ತದೆ.

ಒಟ್ಟಾರೆ, ಶಾಸಕಾಂಗ ವ್ಯವಸ್ಥೆಯಲ್ಲಿ ಎರಡೂ ಮನೆಗಳು ವಿವಿಧ ಉದ್ದೇಶಗಳನ್ನು ಪೂರೈಸುತ್ತವೆ. ವೈವಿದ್ಯಮಯ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ರಾಜ್ಯಸಭೆ ಮತ್ತು ಲೋಕಸಭೆ ಪ್ರಮುಖ ಪಾತ್ರವಹಿಸುತ್ತವೆ. ಇಲ್ಲಿ ಚರ್ಚಿಸಿ, ವಿಶ್ಲೇಷಿಸಿ ನಿರ್ಧಾರಗಳನ್ನು ದೃಢೀಕರಿಸಲು ದೋಷಗಳನ್ನು ತಡೆಯುವಲ್ಲಿ ಎರಡೂ ಸದನಗಳು ಮುಖ್ಯವಾಗಿವೆ. ಜನರಿಂದ ನೇರವಾಗಿ ಲೋಕಸಭೆ ಸದಸ್ಯರು ಆಯ್ಕೆ ಆಗಿರೋದ್ರಿಂದ ಲೋಕಸಭೆ ಹೆಚ್ಚು ಶಕ್ತಿಯುತವಾಗಿದೆ. ಇದೇ ಕಾರಣಕ್ಕೆ ಲೋಕಸಭೆ ಸದಸ್ಯರು ನೇರವಾಗಿ ರಾಜ್ಯದ ಪ್ರತಿನಿಧಿಗಳಾಗಿ ಕಾಣುತ್ತಾರೆ. ಜನರಿಗೆ ಹತ್ತಿರವಾಗಿರುತ್ತಾರೆ. ಮೇಲ್ಮನೆಯು ರಾಜ್ಯಗಳ ಹಿತಾಸಕ್ತಿಗಳನ್ನು ಮಿತಿ ಮೀರಿದ ಹಸ್ತಕ್ಷೇಪದ ವಿರುದ್ಧ ರಕ್ಷಿಸಿಸುವ ತಾಖತು ಇದೆ.

ವಿಶೇಷ ವರದಿ: ಗಣೇಶ ಕೆರೆಕುಳಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೇಲ್ಮನೆ vs ಕೆಳಮನೆ: ರಾಜ್ಯಸಭೆ ಲೋಕಸಭೆಯಂತಲ್ಲ; ರಾಜ್ಯಸಭೆಯು ಲೋಕಸಭೆಗಿಂತ ಹೇಗೆ ಭಿನ್ನವಾಗಿದೆ..?

https://newsfirstlive.com/wp-content/uploads/2024/02/RAJYASBHE.jpg

Load More