/newsfirstlive-kannada/media/post_attachments/wp-content/uploads/2025/02/Nency-tyagi.jpg)
ಇತ್ತೀಚಿನ ದಿನಗಳಲ್ಲಿ ಯಾರು ಯಾವಾಗ ಫೇಮಸ್ ಆಗುತ್ತಾರೆ ಅಂತ ಹೇಳಲು ಅಸಾಧ್ಯ. ಹೀಗೆ ಸಾಮಾಜಿಕ ಜಾಲತಾಣದಲ್ಲಿ ಬಗೆ ಬಗೆಯ ತುಂಡುಗಳಿಂದ ಭಿನ್ನ ವಿಭಿನ್ನವಾಗಿ ಅದರಲ್ಲೂ ಎಲ್ಲರ ಕಣ್ಣು ಕುಕ್ಕುವಂತೆ ಸ್ಟಿಚ್ ಮಾಡುತ್ತಿದ್ದ ಯುವತಿ ಈಗ ವಿಶ್ವವಿಖ್ಯಾತ ಖ್ಯಾತಿ ಪಡೆದುಕೊಂಡಿದ್ದಾಳೆ.
ಇದನ್ನೂ ಓದಿ:ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್‌ನಲ್ಲಿ ಟಾಕ್ಸಿಕ್ ಹವಾ; ಹೊಸ ದಾಖಲೆ ಬರೆಯಲು ಸಜ್ಜಾದ ಯಶ್ ಸಿನಿಮಾ!
ಸಾಕಷ್ಟು ಜನಕ್ಕೆ ನ್ಯಾನ್ಸಿ ತ್ಯಾಗಿ ಯಾರು ಅಂತ ಗೊತ್ತಿಲ್ಲ. ದೆಹಲಿ ಮೂಲದ ಫ್ಯಾಷನ್ ಬ್ಲಾಗರ್ ಅಂತಲೇ ಗುರುತಿಸಿಕೊಂಡಿರೋ ನ್ಯಾನ್ಸಿ ತ್ಯಾಗಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ಹಾಟ್ ಟಾಪಿಕ್ ಆಗಿರುತ್ತಾರೆ. ಕೇವಲ ಇನ್ಸ್ಟಾಗ್ರಾಮ್ನಲ್ಲಿ ಸೆಲೆಬ್ರಿಟಿಗಳು ತೊಡುವ ಉಡುಪುಗಳನ್ನು ರೀ ಕ್ರಿಯೇಟ್ ಮಾಡಿ ತಾನೇ ಹೊಲಿಗೆ ಯಂತ್ರದಿಂದ ರೆಡಿ ಮಾಡಿ ಎಕ್ಸಿಕ್ಯೂಟ್ ಮಾಡ್ತಾ ಇದ್ದರು.
ಈಗಂತೂ ನ್ಯಾನ್ಸಿ ತ್ಯಾಗಿ ಅವರು ಬಹು ಬೇಡಿಕೆಯ ಸೆಲೆಬ್ರಿಟಿ ಆಗಿದ್ದಾರೆ. ಅದರಲ್ಲೂ ಮೊದಲನೇ ಬಾರಿಗೆ ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗಿಯಾಗಿ ಸಖತ್ ಫೇಮಸ್ ಆಗಿದ್ದರು. ಆ ಈವೆಂಟ್ನಲ್ಲಿ ನ್ಯಾನ್ಸಿ ತ್ಯಾಗಿ ಸುಮಾರು 1,000 ಮೀಟರ್‌ಗಿಂತಲೂ ಹೆಚ್ಚು ಫ್ಯಾಬ್ರಿಕ್ ಬಟ್ಟೆಯನ್ನು ಬಳಸಿ ತಯಾರಿಸಿದ ಬ್ಯೂಟಿಫುಲ್ ಆಗಿದ್ದ ಗುಲಾಬಿ ಬಣ್ಣದ ಗೌನ್ ಧರಿಸಿದ್ದರು.
ಈ ಡ್ರೆಸ್ ಅನ್ನು ಸ್ವತಃ ಅವರೇ ತಯಾರಿಸಿದ್ದರು. ಈ ಹಿಂದೆ ಬಾಲಿವುಡ್ ಸ್ಟಾರ್ ನಟಿ ಅನನ್ಯಾ ಪಾಂಡೆಗೆ ಬ್ಯೂಟಿಫುಲ್ ಗಿಫ್ಟ್ವೊಂದನ್ನು ಕೊಟ್ಟು ಮತ್ತಷ್ಟು ಸುದ್ದಿಯಾಗಿದ್ದರು. ಇದೀಗ ನ್ಯಾನ್ಸಿ ತ್ಯಾಗಿ ಮತ್ತೊಂದು ಡಿಫರೆಂಟ್ ಲುಕ್ನಲ್ಲಿ ಕಾಣಿಸಿಕೊಂಡು ನೆಟ್ಟಿಗರ ಕಣ್ಮನ ಸೆಳೆದಿದ್ದಾರೆ. ಹೊಸ ಲುಕ್ನಲ್ಲಿ ಕಾಣಿಸಿಕೊಂಡ ನ್ಯಾನ್ಸಿ ತ್ಯಾಗಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದೇ ಲುಕ್ ನೋಡಿ ಫ್ಯಾನ್ಸ್ ಫುಲ್ ಶಾಕ್ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ