1,100 ರೂ. ಮಾತ್ರ.. ಮಹಾಕುಂಭಮೇಳದಲ್ಲಿ ‘ಡಿಜಿಟಲ್ ತೀರ್ಥ ಸ್ನಾನ’; ವಿಡಿಯೋ ನೋಡಿದ್ರೆ ಶಾಕ್ ಆಗ್ತೀರಾ!

author-image
admin
Updated On
1,100 ರೂ. ಮಾತ್ರ.. ಮಹಾಕುಂಭಮೇಳದಲ್ಲಿ ‘ಡಿಜಿಟಲ್ ತೀರ್ಥ ಸ್ನಾನ’; ವಿಡಿಯೋ ನೋಡಿದ್ರೆ ಶಾಕ್ ಆಗ್ತೀರಾ!
Advertisment
  • ಪ್ರಯಾಗ್‌ರಾಜ್‌ ಮಹಾಕುಂಭಮೇಳಕ್ಕೆ 55 ಕೋಟಿ ಭಕ್ತರ ಭೇಟಿ
  • 24 ಗಂಟೆಯ ಒಳಗಾಗಿ ಡಿಜಿಟಲ್ ಸ್ನಾನ ಮಾಡಿಸುವ ಸೇವೆ ಇದು!
  • ಮಹಾಕುಂಭ ಪ್ರಯಾಗ್‌ ಎಂಟರ್ಪ್ರೈಸ್‌ನ ಹೈಟೆಕ್ ಐಡಿಯಾ ಏನು ಗೊತ್ತಾ?

ವಿಶ್ವ ವಿಖ್ಯಾತ ಪ್ರಯಾಗ್‌ರಾಜ್ ಮಹಾಕುಂಭಮೇಳಕ್ಕೆ ಇನ್ನು ಕೆಲವೇ ಕೆಲವು ದಿನಗಳು ಮಾತ್ರ ಬಾಕಿ. ಫೆಬ್ರವರಿ 26ರ ಶಿವರಾತ್ರಿಯಂದು ದೈವಭೂಮಿಯಲ್ಲಿ 144 ವರ್ಷದ ಬಳಿಕ ನಡೆದ ಮಹಾಕುಂಭಮೇಳಕ್ಕೆ ವಿದ್ಯುಕ್ತ ತೆರೆ ಬೀಳುತ್ತಿದೆ.

ಪ್ರಯಾಗ್‌ರಾಜ್‌ ಮಹಾಕುಂಭಮೇಳಕ್ಕೆ ಇದುವರೆಗೂ 55 ಕೋಟಿಗೂ ಅಧಿಕ ಭಕ್ತರು ತೀರ್ಥಸ್ನಾನ ಮಾಡಿದ್ದಾರೆ. ಈ ಮಧ್ಯೆ ಭಕ್ತರ ನಂಬಿಕೆಯನ್ನೇ ಬಂಡವಾಳ ಮಾಡಿಕೊಳ್ಳೋ ಕಿಲಾಡಿಗಳು ಹಣ ಮಾಡಲು ಮುಂದಾಗಿದ್ದಾರೆ. ಇವರ ಹೈಟೆಕ್ ಐಡಿಯಾ ನೋಡಿದ್ರೆ ನಿಜಕ್ಕೂ ಬೆರಗಾಗುವಂತೆ ಆಗಿದೆ.

ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಡಿಜಿಟಲ್ ಫೋಟೋ ಸ್ನಾನ ಮಾಡಿಸುವ ಈ ವಿಡಿಯೋ ಹರಿದಾಡುತ್ತಿದೆ. ಒಬ್ಬ ವ್ಯಕ್ತಿ ಕೈಯಲ್ಲಿ ಪಾಸ್‌ಪೋರ್ಟ್‌ ಫೋಟೋಗಳನ್ನ ಹಿಡಿದುಕೊಂಡು ಪ್ರಯಾಗ್‌ರಾಜ್‌ ತ್ರಿವೇಣಿ ಸಂಗಮದಲ್ಲಿ ಮುಳುಗಿ ಮೇಲೇಳಿಸುತ್ತಿದ್ದಾನೆ.

publive-image

ಈ ವಿಡಿಯೋದಲ್ಲಿರುವ ಮಹಿಳೆ ಮತ್ತು ಆಕಾಶ್ ಬ್ಯಾನರ್ಜಿ ಎಂಬ ವ್ಯಕ್ತಿ ಇಂತಹದೊಂದು ಹೈಟೆಕ್ ಐಡಿಯಾ ಮಾಡಿದ್ದಾರೆ. ಭಕ್ತರೇ ನಿಮಗೆ ಪ್ರಯಾಗ್‌ರಾಜ್‌ಗೆ ಬಂದು ಪುಣ್ಯಸ್ನಾನ ಮಾಡಲು ಸಾಧ್ಯ ಆಗುತ್ತಿಲ್ವಾ. ಚಿಂತೆ ಮಾಡಬೇಡಿ. ನಮ್ಮ ವಾಟ್ಸ್‌ಆ್ಯಪ್‌ ನಂಬರ್‌ಗೆ ಫೋಟೋ ಕಳಿಸಿದರೆ ಸಾಕು. ನಾವು ನಿಮ್ಮ ಫೋಟೋಗೆ 24 ಗಂಟೆಯ ಒಳಗಾಗಿ ಡಿಜಿಟಲ್ ಸ್ನಾನ ಮಾಡಿಸುತ್ತೇವೆ. ಇದಕ್ಕೆ ನೀವು 1,100 ರೂಪಾಯಿ ಪಾವತಿಸಿದರೆ ಸಾಕು ಎನ್ನುತ್ತಿದ್ದಾರೆ.

ಇದನ್ನೂ ಓದಿ: ಉತ್ತರಪ್ರದೇಶ ಜೈಲಿನಲ್ಲಿರುವ 90 ಸಾವಿರ ಖೈದಿಗಳಿಗೆ ಪವಿತ್ರಾ ಗಂಗಾಜಲದಿಂದ ತೀರ್ಥಸ್ನಾನದ ಭಾಗ್ಯ! 

ಇವರಿಬ್ಬರು ಒಂದು ಸ್ಟಾರ್ಟ್‌ ಅಪ್ ಶುರು ಮಾಡಿದ್ದಾರಂತೆ. ಅದರ ಹೆಸರು ಮಹಾಕುಂಭ ಪ್ರಯಾಗ್‌ ಎಂಟರ್ಪ್ರೈಸ್. ಇದರ ಮೂಲಕ ಭಕ್ತರಿಗೆ ಡಿಜಿಟಲ್ ಫೋಟೋ ಸ್ನಾನದ ಸೇವೆ ನೀಡುತ್ತಿದ್ದೇವೆ ಎನ್ನುತ್ತಿದ್ದಾರೆ. ಕೆಲವು ಫೋಟೋಗಳನ್ನು ತ್ರಿವೇಣಿ ಸಂಗಮದಲ್ಲಿ ಮುಳುಗಿಸಿ ವಿಡಿಯೋ ಮಾಡಿ ಶೇರ್ ಮಾಡುತ್ತಿದ್ದಾರೆ.

ಇವರ ಐಡಿಯಾ ಏನೋ ನೋಡೋದಕ್ಕೆ ಸಖತ್ ಆಗಿದೆ. ಆದರೆ ಪವಿತ್ರ ಗಂಗೆಯಲ್ಲಿ ಸ್ನಾನ ಮಾಡೋ ಬದಲು ಫೋಟೋಗೆ ಸ್ನಾನ ಮಾಡಿಸಿದ್ರೆ ಪುಣ್ಯ ಸಿಗುತ್ತೋ ಇಲ್ವೋ ಗೊತ್ತಿಲ್ಲ. ಯಾವುದಕ್ಕೂ ಈ ಡಿಜಿಟಲ್ ಸ್ನಾನ ಅನ್ನೋರ ಮಾಯೆಗೆ ಮರುಳಾಗಿ ಹಣ ಕಳೆದುಕೊಳ್ಳುವ ಮುನ್ನ ಎಚ್ಚರವಾಗಿರಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment