Advertisment

ಪೋಷಕರೇ ಎಚ್ಚರ.. ಶಾಲೆಗೆ ನಿಮ್ಮ ಮಕ್ಕಳು ಸ್ಮಾರ್ಟ್ ವಾಚ್ ಹಾಕ್ಕೊಂಡು ಹೋಗ್ತಿದ್ದಾರಾ? ಈ ಸ್ಟೋರಿ ತಪ್ಪದೇ ಓದಿ!

author-image
Bheemappa
Updated On
ಪೋಷಕರೇ ಎಚ್ಚರ.. ಶಾಲೆಗೆ ನಿಮ್ಮ ಮಕ್ಕಳು ಸ್ಮಾರ್ಟ್ ವಾಚ್ ಹಾಕ್ಕೊಂಡು ಹೋಗ್ತಿದ್ದಾರಾ? ಈ ಸ್ಟೋರಿ ತಪ್ಪದೇ ಓದಿ!
Advertisment
  • ಸ್ಮಾರ್ಟ್ ವಾಚ್ ಪ್ರಿಯರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿ ಆಗ್ತಿದೆ
  • ಎಲ್ಲಾ ಶಾಲೆಗಳ ನಿರ್ಧಾರಕ್ಕೆ ಪೋಷಕರು ಒಪ್ಪಿಕೊಂಡಿದ್ದಾರಾ, ಇಲ್ವಾ?
  • ಶಾಲೆಗಳಲ್ಲಿ ವಿದ್ಯಾರ್ಥಿಗಳು ಡಿಜಿಟಲ್ ವಾಚ್ ಹಾಕೋ ಹಾಗಿಲ್ವಾ?

ಡಿಜಿಟಲ್ ದುನಿಯಾದಲ್ಲಿ ಜನರು ದಿನದಿಂದ ದಿನಕ್ಕೆ ಹೈಟೆಕ್ ತಂತ್ರಜ್ಞಾನದ ಮೊರೆ ಹೋಗ್ತಾ ಇದ್ದಾರೆ. ಈ ಮಧ್ಯೆ ಹಳ್ಳಿಯಿಂದ ಸಿಟಿವರೆಗೂ ಜನ ಸ್ಮಾರ್ಟ್ ವಾಚ್ ಬಳಕೆ ಜಾಸ್ತಿ ಆಗ್ತಿದ್ದು ಸಿಕ್ಕಾಪಟ್ಟೆ ಡಿಮ್ಯಾಂಡ್ ಜಾಸ್ತಿಯಾಗಿದೆ. ಈ ಬಗ್ಗೆಯೇ ಈಗ ನಗರದಲ್ಲಿ ಬಿಸಿ, ಬಿಸಿ ಚರ್ಚೆ ಶುರುವಾಗಿದೆ. ಆ ಬಗ್ಗೆ ಡಿಟೇಲ್ಸ್ ಇಲ್ಲಿದೆ.

Advertisment

ಇದನ್ನೂ ಓದಿ:KL ರಾಹುಲ್ ಹೇಳಿದ್ದೇನು.. ಕೋಚ್ ಹುದ್ದೆಯಿಂದ ಮಾಜಿ ಕ್ರಿಕೆಟರ್ ಹಿಂದೆ ಸರಿಯಲು ಕನ್ನಡಿಗ ಕಾರಣನಾ?

ಸ್ಮಾರ್ಟ್ ವಾಚ್.. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಸ್ಮಾರ್ಟ್ ವಾಚ್ ಕ್ರೇಜ್ ಜಾಸ್ತಿ ಇದೆ. ಯುವಕ-ಯುವತಿಯರು ಅನ್ನೋ ಲಿಂಗ ಭೇದವಿಲ್ಲದೇ, ದೊಡ್ಡವರು ಚಿಕ್ಕವರು ಅನ್ನೋ ವಯಸ್ಸಿನ ಭೇದವು ಇಲ್ಲದೆ ಸ್ಮಾರ್ಟ್ ವಾಚ್ ಪ್ರಿಯರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿ ಆಗ್ತಿದೆ. ಸದ್ಯ ಇದೇ ವಿಚಾರ ಖಾಸಗಿ ಶಾಲೆಗಳ ಕೆಂಗಣ್ಣಿಗೆ ಕಾರಣವಾಗಿದ್ದು ಡಿಜಿಟಲ್ ವಾಚ್ ಧರಿಸಿ ವಿದ್ಯಾರ್ಥಿಗಳು ಶಾಲೆಗೆ ಬಂದ್ರೆ dont come ಎಂದು ಕಾಲೇಜು ಶಿಕ್ಷಕರು ಅಂತಿದ್ದಾರೆ. ಯಾಕೆ?

ಇದನ್ನೂ ಓದಿ: ಕೊಹ್ಲಿ ಲಕ್ ಕಂಪ್ಲೀಟ್ ಚೇಂಜ್​.. 16 ವರ್ಷಗಳ ಕರಿಯರ್​ನಲ್ಲಿ ವಿರಾಟ್​ಗೆ ಇದು ಅನ್​ಲಕ್ಕಿ ಇಯರ್; ಯಾಕೆ?

Advertisment

publive-image

ಶಾಲೆಗಳಲ್ಲಿ ವಿದ್ಯಾರ್ಥಿಗಳು ಡಿಜಿಟಲ್ ವಾಚ್ ಹಾಕೋ ಹಾಗಿಲ್ವಾ? ಹೀಗೊಂದು ಪ್ರಶ್ನೆ ಇಟ್ಟರೆ ನಗರದ ಅನೇಕ ಖಾಸಗಿ ಶಾಲೆಗಳು ನೋ ಅಂತಿವೆ. ಈಗಾಗಲೇ ಹಲವು ಖಾಸಗಿ ಶಾಲೆಗಳಿಂದ ಮಕ್ಕಳಿಗೆ ಸ್ಮಾರ್ಟ್ ವಾಚ್ ಬಳಕೆ ನಿಷೇಧದ ಬಗ್ಗೆ ಮಾಹಿತಿ ಕೊಡಲಾಗಿದೆ. ಡಿಜಿಟಲ್ ವಾಚ್ ಮಕ್ಕಳ ಡಿಸ್ಟ್ರ್ಯಾಕ್ಟ್ ಮಾಡುತ್ತೆ ಜೊತೆಗೆ ಮಕ್ಕಳ ಮಧ್ಯೆ ಸುರಕ್ಷತೆಗೆ ಈ ಸ್ಮಾರ್ಟ್ ವಾಚ್ ಮಾರಕ ಆಗುತ್ತೆ. ಮಕ್ಕಳು ಪಾಠ ಕೇಳೋ ಬದಲು ವಾಚ್ ಅಲ್ಲೇ ಮುಳುಗುವ ಸಾಧ್ಯತೆ ಇದೇ ಅಂತ ನಿಷೇಧ ಹೇರಿವೆ. ಖಾಸಗಿ ಶಾಲೆಗಳ ಒಕ್ಕೂಟ ಕ್ಯಾಮ್ಸ್ ಕೂಡ ಧ್ವನಿಗೂಡಿಸಿದೆ.

ಶಾಲೆಗಳಲ್ಲಿ ಸ್ಮಾರ್ಟ್ ವಾಚ್ ನಿಷೇಧ ಅನಿವಾರ್ಯ

ಡಿಜಿಟಲ್ ವಾಚ್​​​ಗಳಲ್ಲಿ ಎಲ್ಲ ರೀತಿಯ ಫೆಸಿಲಿಟಿಗಳು ಲಭ್ಯ ಇವೆ. ಶಾಲೆಗಳಲ್ಲಿ ಸ್ಮಾರ್ಟ್ ವಾಚ್ ನಿಷೇಧ ಅನಿವಾರ್ಯ ಕ್ಯಾಮೆರಾ, ಸೋಶಿಯಲ್ ಮೀಡಿಯಾ ಇರುತ್ತೆ. ಶಾಲೆಯ ವಾತಾವರಣದಲ್ಲಿ ಮಕ್ಕಳ ಮಧ್ಯೆ ಆರೋಗ್ಯಕರ ವ್ಯವಸ್ಥೆ ಇರಲ್ಲ. ಇದ್ರಿಂದ ಮಕ್ಕಳ ಮನಸ್ಸು ಕಲಿಕೆಯತ್ತ ವಾಲದೆ ವಾಚ್ ಮೇಲೆ ಕಾನ್ಸಂಟ್ರೇಷನ್ ಹೋಗುವ ಸಾಧ್ಯತೆ ಇದೆ. ಜೊತೆಗೆ ಅತಿಯಾದ ಆಧುನಿಕ ಫೀಚರ್ ಇರೋದ್ರಿಂದ ಮಕ್ಕಳು ದಾರಿ ತಪ್ಪುವ ಸಾಧ್ಯತೆ ಇದೆ ಅಂತಾರೆ ಪೋಷಕರು.

ಇದನ್ನೂ ಓದಿ: ಅಂಬಾನಿ ಫ್ಯಾಮಿಲಿ ಒಟ್ಟು ಆಸ್ತಿ ₹25750000000000; ಈ 3 ಫ್ಯಾಮಿಲಿಗಳೇ ಭಾರತದ ಟಾಪ್ ಶ್ರೀಮಂತರು!

Advertisment

publive-image

ಈಗಾಗಲೇ ಹಲವು ಶಾಲೆಗಳು ಡಿಜಿಟಲ್ ವಾಚ್ ಬ್ಯಾನ್

ನಗರದಲ್ಲಿ ಈಗ ಡಿಜಿಟಲ್ ವಾಚ್ ಬಳಕೆ ಮಾಡಬೇಕಾ? ಬೇಡ್ವಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದ್ದು ಈಗಾಗಲೇ ಹಲವು ಶಾಲೆಗಳು ಡಿಜಿಟಲ್ ವಾಚ್ ಬ್ಯಾನ್ ಕೂಡ ಮಾಡಲಾಗಿದೆ. ಶಾಲೆ ನಿರ್ಧಾರಕ್ಕೆ ಪೋಷಕರು ಹಾಗೂ ಖಾಸಗಿ ಶಾಲೆಗಳ ಒಕ್ಕೂಟ ಮುಕ್ತವಾಗಿ ಸ್ವಾಗತಿಸುತ್ತಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment