ಡಿವೈಡರ್ಗೆ ಸ್ಕೂಟರ್ ಡಿಕ್ಕಿ, ವಿದ್ಯಾರ್ಥಿನಿ ಸ್ಥಳದಲ್ಲೇ ಸಾವು
ಕನಕಗಿರಿ ನಿವಾಸಿ ನಾಗರಾಜು ಪುತ್ರಿ ಕವನಾ ಮೃತಪಟ್ಟಿದ್ದಾಳೆ
ವಿವಿಪುರಂ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಮೈಸೂರು: ರಸ್ತೆ ವಿಭಜಕಕ್ಕೆ ಸ್ಕೂಟರ್ ಡಿಕ್ಕಿಯಾಗಿ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಕೂರ್ಗಳ್ಳಿಯ ಬೆಮೆಲ್ ಮುಂಭಾಗ ನಡೆದಿದೆ. ಕನಕಗಿರಿ ನಿವಾಸಿ ನಾಗರಾಜು ಪುತ್ರಿ ಕವನಾ(18) ಮೃತ ವಿದ್ಯಾರ್ಥಿನಿ.
ಬಿಜಿಎಸ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ಓದುತ್ತಿದ್ದಳು. ನಿನ್ನೆ ಬೆಳಗ್ಗೆ ಸ್ನೇಹಿತರ ಜತೆ ಹೋಗುತ್ತಿದ್ದ ವೇಳೆ ಸ್ಕೂಟರ್ ಡಿವೈಡರ್ಗೆ ಡಿಕ್ಕಿಯಾಗಿದೆ. ಡಿಕ್ಕಿಹೊಡೆದ ರಭಸಕ್ಕೆ ಕವನಾಗೆ ತೀವ್ರ ಪೆಟ್ಟು ಬಿದ್ದಿತ್ತು. ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಇನ್ನು ಇವರ ತಂದೆ ಮೂರು ತಿಂಗಳ ಹಿಂದೆ ಮನೆಬಿಟ್ಟು ಹೋಗಿದ್ದಾರೆ. ಒಂದು ದಿನದ ಮಟ್ಟಿಗೆ ಮೃತದೇಹವನ್ನು ಕುಟುಂಬ ಕಾಯ್ದಿರಿಸಿದೆ. ಎಲ್ಲಿಯೇ ಇದ್ದರೂ ಮಗಳ ಅಂತ್ಯಕ್ರಿಯೆಗೆ ಬರುವಂತೆ ಮನವಿ ಮಾಡಿಕೊಂಡಿದ್ದಾರೆ. ಮನೆ ಬಿಟ್ಟು ಹೋದ ತಂದೆ ಬರುವಿಕೆಗಾಗಿ ಮೃತದೇಹ ಕಾಯ್ದಿರಿಸಿದ್ದಾರೆ.
ಇದನ್ನೂ ಓದಿ:‘ಕೊಹ್ಲಿ, ರೋಹಿತ್ ಅಗತ್ಯವೇ ಇರಲಿಲ್ಲ’ ಗೌತಮ್ ಗಂಭೀರ್ ವಿರುದ್ಧ ನೆಹ್ರಾ ವಾಗ್ದಾಳಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ