/newsfirstlive-kannada/media/post_attachments/wp-content/uploads/2025/05/Digvesh_Rathi-1.jpg)
ಸನ್​ ರೈಸರ್ಸ್​ ಹೈದ್ರಾಬಾದ್​ ಬ್ಯಾಟರ್​​ ಅಭಿಷೇಕ್ ಶರ್ಮಾ ಜೊತೆ ವಾಗ್ವಾದಕ್ಕೆ ಇಳಿದಿದ್ದರಿಂದ ಲಕ್ನೋ ಸೂಪರ್ ಜೈಂಟ್ಸ್​ ತಂಡದ ಸ್ಪಿನ್ನರ್ ದಿಗ್ವೇಶ್ ರಾಥಿ ಅವರನ್ನು ಐಪಿಎಲ್​ನ 1 ಪಂದ್ಯದಿಂದ ಅಮಾನತು ಮಾಡಲಾಗಿದೆ.
ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಲಕ್ನೋ ಸೂಪರ್ ಜೈಂಟ್ಸ್​ ಹಾಗೂ ಸನ್​ರೈಸರ್ಸ್​ ಹೈದ್ರಾಬಾದ್ ನಡುವೆ ನಡೆದ ಪಂದ್ಯದಲ್ಲಿ ಇಬ್ಬರ ಮಧ್ಯೆ ಘರ್ಷಣೆ ನಡೆದಿತ್ತು. ಪಂದ್ಯದಲ್ಲಿ ಅಭಿಷೇಕ್ ಶರ್ಮಾ ವಿಕೆಟ್​ ಪಡೆಯುತ್ತಿದ್ದಂತೆ ದಿಗ್ವೇಶ್ ರಾಥಿ, ನೋಟ್​ ಬುಕ್ ಸೆಲೆಬ್ರೆಷನ್ ಮಾಡಿದ್ದರು. ಇದರಿಂದ ಕೆರಳಿದ್ದ ಅಭಿಷೇಕ್​ ಶರ್ಮಾ ಮೈದಾನದಲ್ಲಿ ತಿರುಗೇಟು ನೀಡಿದ್ದರು.
ಈ ವೇಳೆ ಅಭಿಷೇಕ್ ಶರ್ಮಾ ಮತ್ತು ದಿಗ್ವೇಶ್ ರಾಥಿ ನಡುವೆ ವಾಗ್ವಾದ ಜೋರಾಗಿ ನಡೆದಿತ್ತು. ತಕ್ಷಣ ಓಡೋಡಿ ಬಂದ ಅಂಪೈರ್​ಗಳು ಹಾಗೂ ಸಹ ಆಟಗಾರರು ಇಬ್ಬರ ಜಗಳ ಬಿಡಿಸಿದ್ದರು. ಈ ವೇಳೆ ವಿಕೆಟ್​ ಪಡೆದು ನೋಟ್​ ಬುಕ್ ಸೆಲೆಬ್ರೆಷನ್ ಮಾಡಿದ್ದ ಹಾಗೂ ಅಭಿಷೇಕ್ ಶರ್ಮಾ ಜೊತೆ ವಾಗ್ವಾದಕ್ಕೆ ಇಳಿದ ಹಿನ್ನೆಲೆಯಲ್ಲಿ ದಿಗ್ವೇಶ್ ರಾಥಿಗೆ ಇದೀಗ ಶಿಕ್ಷೆ ನೀಡಲಾಗಿದೆ. ಎಲ್​ಎಸ್​ಜಿ ತಂಡದ ಮುಂದಿನ ಐಪಿಎಲ್​ ಪಂದ್ಯದಿಂದ ಸಂಸ್ಪೆಂಡ್ ಮಾಡಲಾಗಿದೆ ಎಂದು ಹೇಳಲಾಗಿದೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನ ನೀತಿ ಸಂಹಿತೆಯನ್ನು ಪದೇ ಪದೇ ಉಲ್ಲಂಘಿಸಿದ್ದಕ್ಕಾಗಿ ಐಪಿಎಲ್ ಆಡಳಿತ ಮಂಡಳಿಯು ದಿಗ್ವೇಶ್ ರಾಥಿಯನ್ನು ಒಂದು ಪಂದ್ಯದಿಂದ ಅಮಾನತು ಮಾಡಿ ಶಿಕ್ಷೆ ವಿಧಿಸಿದೆ. ವಿಕೆಟ್​ ಪಡೆದ ಸಂದರ್ಭದಲ್ಲಿ ದಿಗ್ವೇಶ್ ರಾಥಿ ಅತಿಯಾಗಿ ರಂಜಿಸಿದ್ದಕ್ಕಾಗಿ ಈಗಾಗಲೇ ಎರಡು ಬಾರಿ ಶಿಕ್ಷೆಗೆ ಒಳಗಾಗಿದ್ದು ಇದು 3ನೇ ಬಾರಿ ಆಗಿದೆ. ಅದರಂತೆ ಮೇ 22 ರಂದು ಸಂಜೆ 7:30ಕ್ಕೆ ನಡೆಯುವ ಗುಜರಾತ್ ಟೈಟಾನ್ಸ್ ವಿರುದ್ಧದ ಎಲ್‌ಎಸ್‌ಜಿಯ ಮುಂದಿನ ಪಂದ್ಯದಿಂದ ಹೊರಗುಳಿಯಲಿದ್ದಾರೆ.
ಇದನ್ನೂ ಓದಿ: ಸ್ಫೋಟಕ ಬ್ಯಾಟರ್​ ಅಭಿಷೇಕ್ ಶರ್ಮಾ ಜೊತೆ ರಾಥಿ ಗಲಾಟೆ.. ಔಟ್ ಆಗ್ತಿದ್ದಂತೆ ಹೀಗೆ ಮಾಡಬಹುದಾ?
ಇದರ ಜೊತೆಗೆ ದಿಗ್ವೇಶ್ ರಾಥಿ ಪಂದ್ಯ ಶುಲ್ಕದ ಶೇಕಡಾ 50 ರಷ್ಟು ದಂಡ ಕೂಡ ಕಟ್ಟಬೇಕು. ಪಂಜಾಬ್​ ಕಿಂಗ್ಸ್​ ಹಾಗೂ ಮುಂಬೈ ಜೊತೆ ಆಡುವಾಗಲೂ ಇದೇ ರೀತಿ ಮಾಡಿದಾಗ 3 ಡಿಮೇರಿಟ್ ಪಾಯಿಂಟ್ ಪಡೆದುಕೊಂಡಿದ್ದರು. ಇದೀಗ ಹೈದ್ರಾಬಾದ್​ ಬ್ಯಾಟರ್​ನನ್ನ ಕೆಣಕಿ 2 ಡಿಮೇರಿಟ್ ಪಾಯಿಂಟ್ ಪಡೆದುಕೊಂಡಿದ್ದು ಈ ಸೀಸನ್​ನಲ್ಲಿ ಒಟ್ಟು 5 ಡಿಮೇರಿಟ್ ಪಾಯಿಂಟ್ ಪಡೆದಿದ್ದಾರೆ. ಇನ್ನು ಅಭಿಷೇಕ್​ ಶರ್ಮಾಗೂ ಶೇ.25 ರಷ್ಟು ದಂಡ ಹಾಕಲಾಗಿದೆ​ ಎಂದು ಐಪಿಎಲ್ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ