/newsfirstlive-kannada/media/post_attachments/wp-content/uploads/2024/12/CTR_DICHCHI_2.jpg)
ಆ ಊರಲ್ಲಿ ಅತ್ತಿಗೆಯವರು ಕಂಡ ನಾದಿನಿಯರು, ನಾದಿನಿಯರನ್ನ ಕಂಡ ಅತ್ತಿಗೆಯರು ತಲೆ ತಲೆ ಹಿಡಿದು ಜಿದ್ದಿಗೆ ಬಿದ್ದವರಂತೆ ಡಿಕ್ಕಿ ಹೊಡೆಯುತ್ತಾರೆ. ಆದರೆ ಇದು ಯಾವುದೋ ಸೇಡು ಅಥವಾ ಜಗಳದಿಂದಲ್ಲ. ಬದಲಾಗಿ ಅತ್ತೆ ಸೊಸೆಯರು ಡಿಕ್ಕಿ ಹೊಡೆಯುವ ವಿಶೇಷ ಹಬ್ಬದ ಆಚರಣೆ ಅಲ್ಲಿ ಜೀವಂತವಾಗಿದೆ. ಯಾಕೆ ಹೀಗೆ? ಈ ಹಬ್ಬದ ವಿಶೇಷತೆ ಏನು ಗೊತ್ತಾ?.
ಅತ್ತಿಗೆ, ನಾದಿನಿಯರು ಪರಸ್ಪರ ತಲೆಗಳನ್ನ ಹಿಡಿದುಕೊಂಡು ಡಿಕ್ಕಿ ಹೊಡೆಯುವ ಹಬ್ಬವನ್ನು ಗ್ರಾಮಸ್ಥರು ಏಂಜಾಯ್ ಮಾಡುತ್ತಾರೆ. ಗ್ರಾಮ ದೇವರ ಸಮ್ಮುಖದಲ್ಲಿ ಹೆಣ್ಣುಮಕ್ಕಳು-ಸೊಸೆಯಂದಿರು ತಲೆ ಹಿಡಿದು ಡಿಚ್ಚಿ ಹೊಡೆದುಕೊಳ್ಳುತ್ತಾರೆ. ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಸಿ.ಎನ್. ಮಾಳಿಗೆ ಗ್ರಾಮದಲ್ಲಿ ಇಂತಹ ಸಂಭ್ರಮದ ಹಬ್ಬ ಆಚರಣೆ ಮಾಡಲಾಗುತ್ತದೆ.
ಗ್ರಾಮ ದೇವರ ಜಾತ್ರೆ.. ಅತ್ತಿಗೆ - ನಾದಿನಿಯರ ಡಿಚ್ಚಿ ಹಬ್ಬ!
ಈ ಗ್ರಾಮದಲ್ಲಿ ಪ್ರತಿ ಕಾರ್ತಿಕ ಮಾಸದಲ್ಲಿ ಬುಡಕಟ್ಟು ಜನಾಂಗದ ಆರಾಧ್ಯ ದೈವ ಅಹೋಬಲ ನರಸಿಂಹಸ್ವಾಮಿ ಜಾತ್ರೆ ಆಚರಣೆ ಮಾಡುತ್ತಾರೆ, ಆದ್ರೆ, ಅತ್ತಿಗೆ-ನಾದಿನಿಯರು ಡಿಕ್ಕಿ ಹಬ್ಬ ಇಲ್ಲಿನ ವಿಶೇಷವಾಗಿದೆ. ಹೀಗೆ ಡಿಕ್ಕಿ ಹೊಡೆಯುವ ಮೂಲಕ ತಮ್ಮ ಕುಟುಂಬದಲ್ಲಾದ ಹಳೆ ವೈಷಮ್ಯ ಮರೆತು ಸುಖಜೀನವ ನಡೆಸಲಿ ಎಂಬುದು ನಾಯಕ್ ಸಮುದಾಯದ ಹಿರಿಯರು ಪರಂಪರಾಗತವಾಗಿ ನಡೆಸಿಕೊಂಡು ಬಂದ ವಿಶಿಷ್ಟ ಪದ್ಧತಿ ಇದಾಗಿದೆ.
ಇನ್ನೂ ಪುರಾತನ ಕಾಲದಿಂದಲೂ ಈ ಹಬ್ಬವನ್ನು ಗ್ರಾಮದಲ್ಲಿ ಆಚರಣೆ ಮಾಡುತ್ತಿದ್ದು, ಗ್ರಾಮದ ಯುವಕರು ಹೆಣ್ಣುಮಕ್ಕಳನ್ನು ಕುಣಿಯುತ್ತ ಕಾರ್ಯಕ್ರಮಕ್ಕೆ ಬರಮಾಡಿಕೊಳ್ಳುತ್ತಾರೆ. ದೇವರಿಗೆ ಹರಕೆ ಹೊತ್ತಂತೆ, ಮಣೇವು ಕಾರ್ಯಕ್ರಮ ನೆರವೇರಿಸಿ, ಯುವಕರು ಬಾಳೆಹಣ್ಣು ಬೆಲ್ಲದ ಪ್ರಸಾದ ಸ್ವೀಕರಿಸಿ ಗ್ರಾಮಸ್ಥರಿಗೆ ಪ್ರಸಾದ ಹಂಚುತ್ತಾರೆ. ಈ ರೀತಿ ಭಕ್ತರ ಹರಕೆ ನೆರವೇರಿಸುವ ನರಸಿಂಹಸ್ವಾಮಿಗೆ ಭಕ್ತರು ಸಾಮೂಹಿಕವಾಗಿ ಬಾಳೆಹಣ್ಣಿನ ಗೊನೆ ಸಮರ್ಪಣೆ ಮಾಡುತ್ತಾರೆ. ಈ ಮೂಲಕ ಗ್ರಾಮದ ಸಮುದಾಯದ ಎಲ್ಲಾ ಜನತೆ ಒಂದೆಂಬ ಭಾವನೆಯೊಂದಿಗೆ ಸೇರಿ ಜಾತ್ರೆ ಮಾಡ್ತಾರೆ. ಈ ಜಾತ್ರೆಯನ್ನು ಕಣ್ತುಂಬಿಕೊಳ್ಳಲು ದೂರದೂರುಗಳಿಂದ ನಾದಿನಿಯರು ಬಂದ್ರೆ, ಅಕ್ಕಪಕ್ಕದ ಗ್ರಾಮಸ್ಥರೂ ಭಾಗಿಯಾಗುವುದು ಇನ್ನೂ ವಿಶೇಷವಾಗಿದೆ.
ಇದನ್ನೂ ಓದಿ:Zakir Hussain; ಝಾಕೀರ್ ಹುಸೇನ್ ಇನ್ನಿಲ್ಲ, ತಬಲಾ ಮಾಂತ್ರಿಕ ಜೀವನ ಹೇಗಿತ್ತು?
ಆಧುನಿಕತೆಯ ನಡುವೆಯೂ ಬುಡಕಟ್ಟು ಆಚರಣೆಗಳು ಕೋಟೆನಾಡಲ್ಲಿ ಇಂದಿಗೂ ಜೀವಂತವಾಗಿವೆ. ಅತ್ತಿಗೆ-ನಾದಿನಿಯರು ಸೇರಿದರೆ ಸಾಕು ಜಗಳ ಆಗುತ್ತೆ ಅನ್ನೋ ಕಾಲದಲ್ಲಿ, ಡಿಚ್ಚಿ ಹಬ್ಬ ಅವರ ನಡುವಿನ ವೈ ಮನಸ್ಸು ದೂರ ಮಾಡುವ ಪ್ರೇಮದ ಸಂಕೇತವಾಗಿ ಉಳಿದಿರುವುದು ಸಂತಸದ ವಿಷಯ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ