/newsfirstlive-kannada/media/post_attachments/wp-content/uploads/2025/06/Dilip_Doshi.jpg)
ಟೀಮ್ ಇಂಡಿಯಾದ ಮಾಜಿ ಸ್ಪಿನ್ ಬೌಲರ್ ದಿಲೀಪ್ ದೋಶಿ (77) ಅವರು ಹೃದಯ ಸಮಸ್ಯೆಯಿಂದ ಲಂಡನ್ನಲ್ಲಿ ನಿಧನ ಹೊಂದಿದ್ದಾರೆ. ಇವರು ಕಳೆದ ಕೆಲ ದಶಕಗಳಿಂದ ಇಂಗ್ಲೆಂಡ್ನಲ್ಲಿ ನೆಲೆಸಿದ್ದರು ಎಂದು ಹೇಳಲಾಗಿದೆ.
ದಿಲೀಪ್ ದೋಶಿ ಅವರು ತಮ್ಮ 32ನೇ ವಯಸ್ಸಿನಲ್ಲಿ ಭಾರತ ತಂಡದ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ನಾಟಿಂಗ್‌ಹ್ಯಾಮ್‌ಶೈರ್‌ನಲ್ಲಿ ವೆಸ್ಟ್ ಇಂಡೀಸ್ ದಂತಕಥೆ ಗಾರ್ಫೀಲ್ಡ್ ಸೋಬರ್ಸ್ ಅವರ ಆಟ ನೋಡಿ ಹೆಚ್ಚು ಪ್ರಭಾವಿತರಾಗಿದ್ದರು. ಹೀಗಾಗಿ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದು ಅತ್ಯುತ್ತಮ ಪ್ರದರ್ಶನ ನೀಡಿದ್ದರು.
ಇದನ್ನೂ ಓದಿ:ರೋಹಿತ್ ಶರ್ಮಾ, ರಿತಿಕಾಗೆ ಪ್ರಪೋಸ್ ಮಾಡಿದ್ದೇಗೆ.. ಈ ಸೀನ್ ಯಾವ ಮೂವಿಗೂ ಕಡಿಮೆ ಇಲ್ಲ!
[caption id="attachment_128907" align="alignnone" width="800"] ದಿಲೀಪ್ ದೋಶಿ ಅವರ ಜೊತೆ ಸುನಿಲ್ ಜೋಶಿ[/caption]
ಇವರು 1970ರ ದಶಕದಲ್ಲಿ ಟೀಮ್ ಇಂಡಿಯಾದ ಫೇಮಸ್ ಬೌಲರ್ ಆಗಿದ್ದರು. ಇದಕ್ಕೂ ಮೊದಲು ಇವರು ಸೌರಾಷ್ಟ್ರ, ಬಂಗಾಳ, ವಾರ್ವಿಕ್‌ಷೈರ್ ಮತ್ತು ನಾಟಿಂಗ್‌ಹ್ಯಾಮ್‌ಷೈರ್ ಪರ ಪ್ರಥಮ ದರ್ಜೆ (First Class Cricket) ಕ್ರಿಕೆಟ್ ಆಡಿದ್ದರು. 1980ರಲ್ಲಿ ಕ್ರಿಕೆಟ್ನಿಂದ ದೂರ ಸರಿದರು. ಬಳಿಕ ಕ್ರಿಕೆಟ್ನಲ್ಲಿ ಕಳೆದಂತ ಅತ್ಯಮೂಲ್ಯ ದಿನಗಳನ್ನು ತಮ್ಮ ಆತ್ಮಚರಿತ್ರೆ ಸ್ಪಿನ್ ಪಂಚ್ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.
33 ಟೆಸ್ಟ್ ಪಂದ್ಯಗಳನ್ನು ಆಡಿದ್ದ ಸ್ಪಿನ್ ಬೌಲರ್ ದಿಲೀಪ್ ದೋಶಿ ಅವರು, ಒಟ್ಟು 144 ವಿಕೆಟ್ಗಳನ್ನು ಕಬಳಿಸಿದ್ದರು. ಇದರಲ್ಲಿ ಅವರು 6 ಬಾರಿ 5 ವಿಕೆಟ್ಗಳ ಗೊಂಚಲು ಪಡೆದಿರುವುದು ವಿಶೇಷ ಎನಿಸಿದೆ. 15 ಒನ್ಡೇ ಪಂದ್ಯಗಳಿಂದ 22 ವಿಕೆಟ್ ಉರುಳಿಸಿದ್ದು 3.96 ಎಕನಾಮಿ ಹೊಂದಿದ್ದರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ