newsfirstkannada.com

ರಾತ್ರಿ 7 ಗಂಟೆ ಒಳಗೆ ಹೀಗೆ ಊಟ ಮಾಡಿದ್ರೆ 90-100 ವರ್ಷ ಬದುಕುತ್ತೀರಾ! ದೀರ್ಘಾಯುಷ್ಯದ ಸೀಕ್ರೆಟ್ ಇಲ್ಲಿದೆ ನೋಡಿ

Share :

20-11-2023

    ಎಲ್'ಅಕ್ವಿಲಾದ ವಿಜ್ಞಾನಿಗಳು ಹೇಳುವ ಪ್ರಕಾರ ನೀವು ಹೀಗೆ ಮಾಡಿ

    ಆ ಪ್ರದೇಶದಲ್ಲಿ ಹೆಚ್ಚಿನ ಜನರು 90-100 ವರ್ಷದವರೆಗೆ ಬದುಕುತ್ತಾರೆ

    ದೀರ್ಘಾಯುಷ್ಯರಾಗಿ ಬದುಕುತ್ತಿದ್ದಕ್ಕೆ ಅಧ್ಯಯನ ಕೈಗೊಂಡಿದ್ದ ಸಂಸ್ಥೆ

ಭಾರತೀಯ ಆಹಾರ ವಿವಿಧ ಮಸಾಲೆಗಳಿಂದೆ ರುಚಿಕರವಾಗಿ ತಯಾರಿಸಲಾಗುತ್ತದೆ. ಹಲವು ಖಾದ್ಯಗಳು, ತರಕಾರಿಗಳು ಆರೋಗ್ಯಕ್ಕೆ ಮುಖ್ಯವಾಗಿವೆ. ಆದರೂ ಜನರಲ್ಲಿ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ. ಹೀಗಾಗಿ ದೀರ್ಘಾಯುಷ್ಯರಾಗಿ ಬದುಕುವವರ ಸಂಖ್ಯೆ ಕಡಿಮೆಯಾಗಿದೆ. ಆದರೆ ಇಟಲಿಯ ಸಂಶೋಧನೆಯೊಂದರ ಪ್ರಕಾರ ದೀರ್ಘಾಯುಷ್ಯರಾಗಿ ಜೀವನ ನಡೆಸಲು ಸಂಜೆ 7:13ರ ರೊಳಗೆ ಊಟ ಮಾಡಬೇಕಂತೆ. ಹೀಗೆ ಮಾಡಿದ್ರೆ 90 ವರ್ಷಕ್ಕೂ ಅಧಿಕವಾಗಿ ಬದುಕಬಹುದು ಎನ್ನುತ್ತೆ ಸಂಶೋಧನೆ.

ಇಟಲಿಯಲ್ಲಿನ ಎಲ್’ಅಕ್ವಿಲಾ ಎನ್ನುವ ಅಧ್ಯಯನ ಕೇಂದ್ರ ನಡೆಸಿದ ಸಂಶೋಧನೆ ಪ್ರಕಾರ, ಇಟಲಿಯ ಅಬ್ರುಝೋ ಪ್ರದೇಶದಲ್ಲಿನ ಹೆಚ್ಚಿನ ಜನರು 90 ರಿಂದ 99 ವರ್ಷ ಹಾಗೂ ಶತಾಯುಷಿಗಳಾಗಿ ಸುಖ ಸಂಸಾರ ನಡೆಸಿದ್ದಾರೆ. ಕೆಲವೊಬ್ಬರು 100 ವರ್ಷ ಆದ್ರೂ ಇನ್ನು ಸುಖವಾಗಿದ್ದರಿಂದ ಇದು ಹೇಗೆ ಸಾಧ್ಯವೆಂದು ಅಲ್ಲಿನ 68 ಜನರನ್ನು ಎಲ್’ಅಕ್ವಿಲಾ ಕೇಂದ್ರ ಅಧ್ಯಯನಕ್ಕೆ ಒಳಪಡಿಸಿತ್ತು.

ಸಂಜೆಯ ಊಟ ಗಣನೆಗೆ ತೆಗೆದುಕೊಂಡ ವಿಜ್ಞಾನಿಗಳು

ಅಧ್ಯಯನದ ವೇಳೆ ಅವರ ಆಹಾರ ಪದ್ಧತಿಗಳನ್ನು ಪ್ರಮುಖವಾಗಿ ಪರಿಗಣಿಸಿದ್ದು ಅದರಲ್ಲಿ ವಿಶೇಷವಾಗಿ ಸಂಜೆಯ ಊಟವನ್ನು ಗಣನೆಗೆ ತೆಗೆದುಕೊಂಡಿದೆ. ಅವರು ಸಂಜೆಯಾಗುತ್ತಿದ್ದಂತೆ 7:13ರೊಳಗೆ ಊಟ ಮಾಡುತ್ತಿದ್ದರು. ಈ ವೇಳೆ ಕಟ್ಟುನಿಟ್ಟಿನ ಆಹಾರ ಪದ್ಧತಿ ಅನುಸರಿಸಿದ್ದು ಕಡಿಮೆ ಕ್ಯಾಲೋರಿ ಆಹಾರ ತಿಂದು ಮರು ದಿನ ಊಟದವರೆಗೆ ಹಾಗೇ ಇರುತ್ತಿದ್ದರು. ಅಧ್ಯಯನಕ್ಕೆ ಒಳಪಟ್ಟವರು ಧಾನ್ಯಗಳು, ತರಕಾರಿಗಳು, ಹಣ್ಣುಗಳು ಮತ್ತು ದ್ವಿದಳ ಧಾನ್ಯಗಳಿಂದ ಮಾಡಿದ ಸಮೃದ್ಧವಾದ ಆಹಾರ ತಿಂದಿದ್ದಾರೆ. ಆದರೆ ಮಾಂಸ, ಫ್ರಿಡ್ಜ್​ನಲ್ಲಿ ಸಂಗ್ರಹಿಸಿಟ್ಟ ಮಾಂಸ, ಮೊಟ್ಟೆಗಳು ಮತ್ತು ಸಿಹಿ ತಿಂಡಿಗಳನ್ನು ತೀರ ಕಡಿಮೆ ಪ್ರಮಾಣದಲ್ಲಿ ತಿಂದಿದ್ದಾರೆ. ಕೆಲವೊಬ್ಬರಂತೂ ಅವುಗಳನ್ನು ಮುಟ್ಟಕ್ಕೆ ಹೋಗಿಲ್ಲ. ಹೀಗಾಗಿ ಇವರು ದೀರ್ಘಾಯುಷ್ಯರಾಗಿ ಬದುಕಲು ಆಹಾರ ಪ್ರಮುಖವಾದ ಅಂಶವಾಗಿದೆ ಎಂದು ಎಲ್’ಅಕ್ವಿಲಾದ ವಿಜ್ಞಾನಿಗಳು ಹೇಳುತ್ತಾರೆ.

ಸಂಜೆ ಬೇಗ ಊಟ ಮಾಡುವುದರ ಜೊತೆಗೆ ಆಹಾರ ಪದ್ಧತಿ ಪಾಲಿಸಿ

ಸಂಜೆ 7:13ರ ಒಳಗೆ ಕಡಿಮೆ ಕ್ಯಾಲೊರಿಯ ಸಸ್ಯಾಹಾರ ತಿನ್ನುವುದರಿಂದ ಹೊಟ್ಟೆಯಲ್ಲಿನ ಒತ್ತಡವನ್ನು ಕಡಿಮೆಗೊಳಿಸುತ್ತವೆ. ಚಯಾಪಚಯ ಕ್ರಿಯೆಯನ್ನು ಉತ್ತಮವಾಗಿರಿಸುತ್ತವೆ. ಎಲ್’ಅಕ್ವಿಲಾದ ವಿಜ್ಞಾನಿಗಳ ಅಧ್ಯಯನವು ಹೇಳುವಂತೆ ಸಂಜೆ ಬೇಗ ಊಟ ಮಾಡುವುದರ ಜೊತೆಗೆ ಆಹಾರ ಪದ್ಧತಿ ಪಾಲಿಸುವುದು ದೀರ್ಘಾಯುಷ್ಯರನ್ನಾಗಿ ಮಾಡುತ್ತದೆ ಎಂದು ಸ್ಪಷ್ಟ ಪಡಿಸಿದೆ.

ಈಗಿನ ಜನರೇಷನ್​ ಯುವಕರು ಬ್ರೇಡ್‌, ಜಾಮೂನ್, ಪಿಜ್ಜಾ ಅದು, ಇದು ಎಂದು ಬೇಕರಿ ಐಟಮ್ಸ್​ ತಿಂದು ಜೀವನ ಸಾಗಿಸುತ್ತಿದ್ದಾರೆ. ಈ ರೀತಿ ಆಹಾರ ತಿಂದರೆ ದೀರ್ಘಾಯುಷ್ಯಗಳು ಆಗಲು ಸಾಧ್ಯವೇ ಇಲ್ಲ. ಅದಕ್ಕೆ ಕಟ್ಟುನಿಟ್ಟಿನ ಆಹಾರ ಪದ್ಧತಿ ಪಾಲನೆ ಮಾಡೋದು ಮುಖ್ಯ. ಹಾಗಂತ ಮಾಂಸ, ಮೊಟ್ಟೆಗಳನ್ನು ತಿಂದರೂ ಆರೋಗ್ಯ ಕೆಡಲಿದೆ. ಆದರೆ ಇನ್ನೇನು ಮಾಡಬೇಕು ಎನ್ನುತ್ತೀರಾ?. ದೀರ್ಘಾಯುಷಿಗಳಾಗಿ ಬದುಕಲು ಇಷ್ಟ ಪಡುವವರು ಆಹಾರ ಪದ್ಧತಿ ಜೊತೆಗೆ ಸುಸ್ಥಿರವಾದ ವ್ಯಾಯಾಮ, ನಿದ್ದೆಯನ್ನು ಸರಿಯಾಗಿ ಪಾಲನೆ ಮಾಡಬೇಕು ಎಂಬುದು ಸಂಶೋಧನೆಯ ಮುಖ್ಯ ಅಂಶಗಳಾಗಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾತ್ರಿ 7 ಗಂಟೆ ಒಳಗೆ ಹೀಗೆ ಊಟ ಮಾಡಿದ್ರೆ 90-100 ವರ್ಷ ಬದುಕುತ್ತೀರಾ! ದೀರ್ಘಾಯುಷ್ಯದ ಸೀಕ್ರೆಟ್ ಇಲ್ಲಿದೆ ನೋಡಿ

https://newsfirstlive.com/wp-content/uploads/2023/11/FOOD_2.jpg

Load More