/newsfirstlive-kannada/media/post_attachments/wp-content/uploads/2025/03/Dinesh-Gundu-rao-1.jpg)
ರಾಜ್ಯದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇವತ್ತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಆರೋಗ್ಯ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದರು. ಈ ಸಭೆಯಲ್ಲಿ ಕೆಲವು ಮಹತ್ವದ ನಿರ್ಧಾರಗಳನ್ನು ಸರ್ಕಾರ ತೆಗೆದುಕೊಳ್ಳಲಾಗಿದೆ.
ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳು
- ಇನ್ಮುಂದೆ ಪಠ್ಯ ಪುಸ್ತಕದಲ್ಲಿ ಇರಲಿದೆ ಹೃದಯ ಸಂಬಂಧ ಪಾಠ
- ಖಾಸಗಿ ಕಂಪನಿಗಳಲ್ಲಿ ಪ್ರತೀ ವರ್ಷ ಹೃದಯ ತಪಾಸಣೆ ಕಡ್ಡಾಯ
- ಶಾಲೆಗಳಲ್ಲಿ 15 ವರ್ಷದ ಮಕ್ಕಳಿಗೆ ಹೃದಯ ತಪಾಸಣೆ ಕಡ್ಡಾಯ
- ಸರ್ಕಾರಿ ಸಿಬ್ಬಂದಿಗೆ ಇಲಾಖೆ ಹಂತದಲ್ಲಿ ತಪಾಸಣೆ
- ಎಲ್ಲಾ ತಾಲೂಕು ಆಸ್ಪತ್ರೆಯಲ್ಲಿ ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ ವಿಸ್ತರಣೆ
- ಯಾವುದೇ ಲಸಿಕೆಯಿಂದ ಹೃದಯ ಸಮಸ್ಯೆ ಇಲ್ಲ, mRNA ವ್ಯಾಕ್ಸಿನ್ ಮಾತ್ರ ಪ್ರತಿಕೂಲ ಪರಿಣಾಮ
ಸುದ್ದಿಗೋಷ್ಟಿಯಲ್ಲಿ ಮಾತನಾಡಿರುವ ಆರೋಗ್ಯ ಸಚಿವರು, ಕೆಲವು ತಿಂಗಳುಗಳಿಂದ ಹಠಾತ್ ಸಾವು ವಿಚಾರದಲ್ಲಿ ತಜ್ಞರ ಸಮಿತಿ ರಚನೆ ಮಾಡಿ ವರದಿ ನೀಡಬೇಕು. ಸಂಶೋಧನೆ ಮಾಡಬೇಕು ಅಂತ ಮುಖ್ಯಮಂತ್ರಿ ಆದೇಶ ಮಾಡಿದ್ದರು. ಈ ಹಿನ್ನಲೆ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕರ ನೇತೃತ್ವದಲ್ಲಿ ಸಮಿತಿ ರಚನೆಯಾಗಿ ಸಂಶೋಧನೆಯಾಗಿದೆ.
ಇದನ್ನೂ ಓದಿ: ಮತ್ತೆ ವಕ್ಕರಿಸಿದ ನಿಫಾ.. ಸೋಂಕಿತ ಮಹಿಳೆ ಸ್ಥಿತಿ ಗಂಭೀರ; ಈ 3 ಜಿಲ್ಲೆಗಳಿಗೆ ಹೈ ಅಲರ್ಟ್
ಕೋವಿಡ್ ಲಸಿಕೆ ಇದಕ್ಕೆ ಕಾರಣ ಅಲ್ಲ
ವಿಶ್ವಮಟ್ಟದಲ್ಲಿ ಏನಾಗಿದೆ, ಅದನ್ನೂ ಕೂಡ ಅವರು ಪರಿಶೀಲನೆ ಮಾಡಿದ್ದಾರೆ. ಕೊರೊನಾ ಪೂರ್ವ ಕೋವಿಡ್ ನಂತರ ಆಧಾರದ ಮೇಲೆ ಹೋಲಿಕೆ ಮಾಡಿದ್ದಾರೆ. ಕೋವಿಡ್ ಬಂದ ಬಳಿಕ ವೈರಸ್ ಅಟ್ಯಾಕ್ ಆದವರಲ್ಲಿ ಹೃದಯಾಘಾತ ಹೆಚ್ಚಾಗಿದೆ. ಕೋವಿಡ್ ಲಸಿಕೆ ಇದಕ್ಕೆ ಕಾರಣವಲ್ಲ. ಕೋವಿಡ್ ಕೂಡ ಕಾರಣ ಎಂದು ತಿಳಿದು ಬಂದಿದೆ. ಮಧುಮೇಹ ಪ್ರಕರಣ ಬಂದವರಲ್ಲಿ ಹೃದಯಾಘಾತ ಹೆಚ್ಚಾಗಿದೆ ಎಂದರು.
ಕೋವಿಡ್ ಪರಿಣಾಮ
ಕೋವಿಡ್ ಪರಿಣಾಮ ಖಂಡಿತ ಜನರ ಮೇಲೆ ಆಗಿದೆ. ಬೇರೆ ಬೇರೆ ಔಷಧಿ ಸ್ಟೆರಾಯ್ಡ್ ಬಳಕೆ ಆಗಿರುತ್ತದೆ. ಓಡಾಟ ಕಡಿಮೆ ಆಗಿರುತ್ತೆ, ದೇಹದ ಚಟುವಟಿಕೆ ಕಡಿಮೆ ಆಗಿದೆ. ಜಾಸ್ತಿ ಸಮಯ ಟಿವಿ ಕಂಪ್ಯೂಟರ್, ಫೋನ್ ಮೇಲೆ ಅವಲಂಬನೆ, ಸ್ಕ್ರೀನ್ ಟೈಮ್ ಹೆಚ್ಚಾಗಿರುವುದು ಹೃದಯಾಘಾತ ಹೆಚ್ಚಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ ಈ ಬಗ್ಗೆ ವರದಿಯಾಗಿದೆ.
ಹೃದಯಾಘಾತ ಹೆಚ್ಚಗುವುದಕ್ಕೆ ಜನರ ಜೀವನ ಶೈಲಿ, ಬದುಕಿನ ಶೈಲಿ ಹೆಚ್ಚಾಗಿ ಕಾರಣವಾಗಿದೆ. ಲಸಿಕೆಯಿಂದ ನೇರವಾಗಿ ಹೃದಯಾಘಾತ ಕಾರಣವಲ್ಲ. mRNA ವ್ಯಾಕ್ಸಿನ್ ಯಾರು ತೆಗೆದು ಕೊಂಡಿಲ್ಲ. ಇದೊಂದು ವ್ಯಾಕ್ಸಿನ್ ದುಷ್ಪರಿಣಾಮ ಬೀರಿರುವ ಸಾಧ್ಯತೆಯಿದೆ. mRNA ವ್ಯಾಕ್ಸಿನ್ ತೆಗೆದು ಕೊಂಡವರಲ್ಲಿ ಹೃದಯದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ತಿಳಿಸಿದರು.
ಇದನ್ನೂ ಓದಿ: ನಿಮಗಿದು ಗೊತ್ತೇ.. ಹೃದಯಾಘಾತ ತಡೆಯೋ ಶಕ್ತಿ ಈ ಹಣ್ಣಿಗೆ ಇದೆ.. ವಾರಕ್ಕೆ ಒಮ್ಮೆ ತಿಂದರೆ ಸಾಕು..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ