newsfirstkannada.com

RCB ಸ್ಟಾರ್​​ ಫಿನಿಶರ್​​​ ದಿನೇಶ್​ ಕಾರ್ತಿಕ್​ಗೆ ಹೊಸ ಜವಾಬ್ದಾರಿ; ಇಂಗ್ಲೆಂಡ್​​ ಬ್ಯಾಟಿಂಗ್​​​ ಕೋಚ್​ ಆಗಿ ಆಯ್ಕೆ

Share :

Published January 11, 2024 at 5:31pm

Update January 11, 2024 at 5:33pm

  ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ತಂಡದ ಸ್ಟಾರ್​​ ಫಿನಿಶರ್​ ದಿನೇಶ್

  ದಿನೇಶ್​ ಕಾರ್ತಿಗ್​ಗೆ ಅಂತರಾಷ್ಟ್ರೀಯ ತಂಡದಲ್ಲಿ ಹೊಸ ಜವಾಬ್ದಾರಿ..!

  ಇಂಗ್ಲೆಂಡ್​​ ಟೀಮ್​ನಿಂದ​​​ ದಿನೇಶ್​​ ಕಾರ್ತಿಕ್​ಗಾಗಿ ಹೊಸ ಹುದ್ದೆ ಸೃಷ್ಟಿ

ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ತಂಡದ ಸ್ಟಾರ್​​ ಫಿನಿಶರ್​ ದಿನೇಶ್ ಕಾರ್ತಿಕ್​. ಇವರು 2022ರಲ್ಲಿ ನಡೆದ ಟಿ20 ವಿಶ್ವಕಪ್​ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಫಿನಿಶರ್​ ರೋಲ್​ ಸಿಕ್ಕರೂ ತಂಡದ ಪರ ಹೇಳಿಕೊಳ್ಳುವಂತಹ ಪ್ರದರ್ಶನವೇನು ನೀಡಿರಲಿಲ್ಲ. ಇದಾದ ಬಳಿಕ ಭಾರತ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ ಆದ್ರೂ ಇಂಗ್ಲೆಂಡ್​​ ಟೀಮ್​​​ ದಿನೇಶ್​​ಗಾಗಿ ಹೊಸ ಹುದ್ದೆ ಸೃಷ್ಟಿಸಿದೆ.

ಹೌದು, ಜನವರಿ 25ನೇ ತಾರೀಕಿನಿಂದ ಟೀಂ ಇಂಡಿಯಾ, ಇಂಗ್ಲೆಂಡ್​ ಮಧ್ಯೆ ಟೆಸ್ಟ್ ಸರಣಿ ಶುರುವಾಗಲಿದೆ. ಇದಕ್ಕೂ ಮುನ್ನ ಭಾರತ ಎ ಮತ್ತು ಇಂಗ್ಲೆಂಡ್ ಲಯನ್ಸ್ ನಡುವೆ ಅಭ್ಯಾಸ ಪಂದ್ಯಗಳು ನಡೆಯಲಿವೆ. ಇದಾದ ಬಳಿಕ ಜ. 17ರಿಂದ 20ರವರೆಗೆ 4 ದಿನಗಳ ಪಂದ್ಯ ನಡೆಯಲಿದೆ. ಇದಕ್ಕೆ ದಿನೇಶ್ ಕಾರ್ತಿಕ್ ಅವರನ್ನು ಇಂಗ್ಲೆಂಡ್ ಲಯನ್ಸ್ ತಂಡದ ಬ್ಯಾಟಿಂಗ್ ಕೋಚ್​ ಆಗಿ ಆಯ್ಕೆ ಮಾಡಲಾಗಿದೆ.

ಇನ್ನು, ದಿನೇಶ್​ ಕಾರ್ತಿಕ್​​​ ಜ. 18ರವರೆಗೆ ಈ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಇಯಾನ್ ಬೆಲ್ ಬದಲಿಗೆ ಕಾರ್ತಿಕ್ ಈ ಜವಾಬ್ದಾರಿ ಹೊತ್ತಿದ್ದಾರೆ. ಬಿಗ್ ಬ್ಯಾಷ್ ಲೀಗ್‌ನಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್‌ ತಂಡದಲ್ಲಿ ಕೆಲಸ ಮಾಡುತ್ತಿರೋ ಬೆಲ್ ನ. 18ರ ನಂತರ ತಂಡ ಸೇರಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

RCB ಸ್ಟಾರ್​​ ಫಿನಿಶರ್​​​ ದಿನೇಶ್​ ಕಾರ್ತಿಕ್​ಗೆ ಹೊಸ ಜವಾಬ್ದಾರಿ; ಇಂಗ್ಲೆಂಡ್​​ ಬ್ಯಾಟಿಂಗ್​​​ ಕೋಚ್​ ಆಗಿ ಆಯ್ಕೆ

https://newsfirstlive.com/wp-content/uploads/2023/07/Kohli_Dinesh.jpg

Load More