/newsfirstlive-kannada/media/post_attachments/wp-content/uploads/2024/05/RCB_DK_SIRAJ.jpg)
ಎಂ.ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂ​ನ ಹೈವೋಲ್ಟೇಜ್​​ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​​​ ವಿರುದ್ಧ 27 ರನ್​ಗಳಿಂದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಜಯಭೇರಿ ಬಾರಿಸಿತು. ಈ ಮೂಲಕ ಗ್ರ್ಯಾಂಡ್ ಆಗಿ ಪ್ಲೇ ಆಫ್​ಗೂ ಎಂಟ್ರಿ ಕೊಟ್ಟಿದೆ. ಚೆನ್ನೈ ವಿರುದ್ಧ ಗೆಲುವು ಸಾಧಿಸುತ್ತಿದ್ದಂತೆ ಸ್ಟೇಡಿಯಂನಲ್ಲಿದ್ದ ಆರ್​ಸಿಬಿ ಆಟಗಾರರು, ಅಭಿಮಾನಿಗಳ ಸಂತಸ ಹೇಳತೀರದಾಗಿತ್ತು. ಮುಗಿಲು ಮುಟ್ಟುವ ಸಂಭ್ರಮದಲ್ಲಿ ಆರ್​ಸಿಬಿ ವಿಕೆಟ್ ಕೀಪರ್ ದಿನೇಶ್​ ಕಾರ್ತಿಕ್​, ಸ್ಪೇಸ್​ ಬೌಲರ್​ ಸಿರಾಜ್ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ.
ಇದನ್ನೂ ಓದಿ: ಅಂಜಲಿ ಕೇಸ್‌ನ ಪಿನ್ ಟು ಪಿನ್ ಮಾಹಿತಿ ಪಡೆದ ADGP.. ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್
ಚೆನ್ನೈ ಜೊತೆ ರಾಯಲ್​ ಚಾಲೆಂಜರ್ಸ್​ ಟೀಮ್ ಗೆದ್ದ ಮೇಲೆ ಮೈದಾನದಲ್ಲಿ ಐಪಿಎಲ್​ ಕಪ್​ ಗೆದ್ದಂತಹ ಸೆಲೆಬ್ರೆಷನ್​ ಇತ್ತು ಎಂದು ಹೇಳಬಹುದು. ಏಕೆಂದರೆ ಆರ್​ಸಿಬಿ ಫ್ಯಾನ್ಸ್​ಗೆ ಚೆನ್ನೈ ವಿರುದ್ಧ ಗೆಲುವುದೊಂದೇ ಬೇಕಿತ್ತು. ಅದರಂತೆ ಚೆನ್ನೈಯನ್ನು ಆರ್​ಸಿಬಿ ಬಗ್ಗು ಬಡಿಯಿತು. ಆದರೆ ಗೆಲುವಿನ ನಂತರ ಸಂಭ್ರಮದಲ್ಲಿದ್ದ ಆರ್​​ಸಿಬಿ ಸ್ಟಾರ್ಸ್​ ಕುಣಿದು ಕುಪ್ಪಳಿಸಿದರು. ಇದೇ ವೇಳೆ ವಿಕೆಟ್ ಕೀಪರ್ ದಿನೇಶ್​ ಕಾರ್ತಿಕ್​ ಹಾಗೂ ಸ್ಪೇಸ್​ ಬೌಲರ್ ಮೊಹಮ್ಮದ್​ ಸಿರಾಜ್ ಪರಸ್ಪರ ಭುಜದ ಮೇಲೆ ಕೈಗಳನ್ನು ಹಾಕಿ ಭರ್ಜರಿ ಸ್ಟಿಪ್ಸ್​ ಹಾಕಿದ್ದಾರೆ.
Me seeing Cskians crying on tl ? pic.twitter.com/g6zovowiHA
— Wellu (@Wellutwt)
Me seeing Cskians crying on tl 😂 pic.twitter.com/g6zovowiHA
— Wellu (@Wellutwt) May 19, 2024
">May 19, 2024
ಸ್ಟೇಡಿಯಂನಲ್ಲಿ ಹಾಕಿದ್ದ ಮ್ಯೂಸಿಕ್​ಗೆ ದಿನೇಶ್​ ಕಾರ್ತಿಕ್,​ ಮೊಹಮ್ಮದ್​ ಸಿರಾಜ್ ಡ್ಯಾನ್ಸ್​ ಮಾಡಿದ್ದಾರೆ. ಒಬ್ಬರ ಹೆಗಲ ಮೇಲೆ ಒಬ್ಬರು ಕೈ ಹಾಕಿ ಪಕ್ಕಾ ಲೋಕಲ್​ ಹುಡುಗರರಂತೆ ಸ್ಟೆಪ್ಸ್​ಗಳನ್ನು ಹಾಕಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು ಆರ್​ಸಿಬಿ ಫ್ಯಾನ್ಸ್​ ವೆಲ್​ ಕಮ್​ ಬಿಗ್​ ಬ್ಯಾಕ್ ಎಂದು ಕಮೆಂಟ್​​ಗಳನ್ನ ಮಾಡುತ್ತಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us