RCB ಫ್ಯಾನ್ಸ್​ಗೆ ಗುಡ್​​ನ್ಯೂಸ್​​.. ಐಪಿಎಲ್ ನಿವೃತ್ತಿ ಬೆನ್ನಲ್ಲೇ ದಿನೇಶ್​​ ಕಾರ್ತಿಕ್​​ಗೆ ಹೊಸ ಜವಾಬ್ದಾರಿ!

author-image
Ganesh Nachikethu
Updated On
ಕಾರ್ತಿಕ್ ಬದುಕಲ್ಲಿ ಒಂದು ರಾತ್ರಿ ನಡೆದಿತ್ತು ಭಯಾನಕ ಅಚ್ಚರಿ.. ಬೆಚ್ಚಿಬಿದ್ದಿದ್ದ ಸ್ಟೋರಿ ರಿವೀಲ್..!
Advertisment
  • ಐಪಿಎಲ್​​ನಿಂದ ನಿವೃತ್ತಿಯಾದ ಬೆನ್ನಲ್ಲೇ ದಿನೇಶ್​ ಕಾರ್ತಿಕ್​ಗೆ ಗುಡ್​ನ್ಯೂಸ್​​!
  • ಸ್ಟಾರ್​​ ಪ್ಲೇಯರ್​ ದಿನೇಶ್​ ಕಾರ್ತಿಕ್​ಗೆ ಟಿ20 ವಿಶ್ವಕಪ್​​ನಲ್ಲಿ ಹೊಸ ಜವಾಬ್ದಾರಿ
  • ಟಿ20 ವಿಶ್ವಕಪ್​​ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿರುವ ದಿನೇಶ್​​ ಕಾರ್ತಿಕ್​​

ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​​ 17ನೇ ಸೀಸನ್​​ ಇಂದಿಗೆ ಮುಗಿಯಲಿದೆ. ಈಗಾಗಲೇ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು ಎಲಿಮಿನೇಟರ್​ ಪಂದ್ಯದಲ್ಲಿ ರಾಜಸ್ಥಾನ್​ ರಾಯಲ್ಸ್​ ವಿರುದ್ಧ ಸೋತು ಟೂರ್ನಿಯಿಂದಲೇ ಹೊರಬಿದ್ದಿದೆ. ಬೇಜಾರಿನ ವಿಚಾರ ಎಂದರೆ ಆರ್​​ಸಿಬಿ ಸ್ಟಾರ್​ ಫಿನಿಶರ್​​ ದಿನೇಶ್​ ಕಾರ್ತಿಕ್​ ಅವರಿಗೆ ಇದು ಕೊನೇ ಸೀಸನ್​​.

ಸ್ಟಾರ್​ ಫಿನಿಶರ್​ ದಿನೇಶ್​ ಕಾರ್ತಿಕ್​​ ಬರೋಬ್ಬರಿ 17 ಸೀಸನ್​ಗಳ ಬಳಿಕ ಐಪಿಎಲ್​​ನಿಂದ ನಿವೃತ್ತಿಯಾಗಿದ್ದಾರೆ. ಇದು ಆರ್​​​ಸಿಬಿ ಟೀಮ್​ಗೆ ಬಹಳ ಶಾಕಿಂಗ್​ ಆಗಿದ್ದು, ಈ ಮಧ್ಯೆ ಫ್ಯಾನ್ಸ್​ಗೆ ​ದಿನೇಶ್​ ಕಾರ್ತಿಕ್​​ ಗುಡ್​ನ್ಯೂಸ್​ ಒಂದು ನೀಡಿದ್ದಾರೆ. ಐಪಿಎಲ್​ ಬೆನ್ನಲ್ಲೇ ಟಿ20 ವಿಶ್ವಕಪ್​ ನಡೆಯಲಿದ್ದು, ಇಲ್ಲಿ ದಿನೇಶ್​ ಕಾರ್ತಿಕ್​ ದರ್ಶನವಾಗಲಿದೆ.

ಹೌದು, ಇನ್ನೆರಡು ವಾರದಲ್ಲಿ ಟಿ20 ವಿಶ್ವಕಪ್​ ಶುರುವಾಗಲಿದೆ. ಯುಎಸ್​​, ವೆಸ್ಟ್​ ಇಂಡೀಸ್​ನಲ್ಲಿ ನಡೆಯಲಿರೋ ಐಸಿಸಿ ಮೆಗಾ ಟೂರ್ನಿಗೆ ಈಗಾಗಲೇ ಬಲಿಷ್ಠ ಟೀಮ್​ ಇಂಡಿಯಾ ವಿಮಾನಕ್ಕೆ ಹತ್ತಿದೆ. ಟಿ20 ವಿಶ್ವಕಪ್​​ನಲ್ಲಿ ಟೀಮ್​ ಇಂಡಿಯಾದ ಪ್ರತಿನಿಧಿಯಾಗಿ ಫುಲ್​​ ಟೈಮ್​​ ಕಾಮೆಂಟೇಟರ್​​​​ ಆಗಿ ದಿನೇಶ್​ ಕಾರ್ತಿಕ್​ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ:IPL ಫೈನಲ್​​ಗೆ ಮುನ್ನ ಹೈದರಾಬಾದ್​​ಗೆ ಬಿಗ್​ ಶಾಕ್​​.. ಕೆಕೆಆರ್​​ಗೆ ಇದು ಗುಡ್​ನ್ಯೂಸ್​!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment