/newsfirstlive-kannada/media/post_attachments/wp-content/uploads/2024/04/Dinesh-Karthik-1-2.jpg)
ಐಪಿಎಲ್‌ನಲ್ಲಿ ಅದ್ಭುತ ಫಾರ್ಮ್‌ನಲ್ಲಿ ಮಿಂಚಿರುವ ಭಾರತ ತಂಡದ ಅನುಭವಿ ವಿಕೆಟ್ ಕೀಪರ್-ಬ್ಯಾಟರ್ ದಿನೇಶ್ ಕಾರ್ತಿಕ್ ಮತ್ತೇ ತಂಡಕ್ಕೆ ಹಿಂದಿರುಗೋಕೆ ಸಜ್ಜಾಗಿದ್ದಾರೆ. ಈ ಬಗ್ಗೆ ಭಾರತ ತಂಡದ ನಾಯಕ ರೋಹಿತ್​ ಶರ್ಮ ಹಾಗೂ ರಾಹುಲ್​ ದ್ರಾವಿಡ್​ಗೆ ನೇರ ಸಂದೇಶವನ್ನು ಕಳುಹಿಸಿದ್ದಾರೆ.
2022 ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ T20 ವಿಶ್ವಕಪ್‌ನ ಕೊನೆಯ ಆವೃತ್ತಿಯಲ್ಲಿ ಟೀಮ್ ಇಂಡಿಯಾ ಪರ ಆಟವಾಡಿದ್ದು, ದಿನೇಶ್​ ಕಾರ್ತಿಕ್​ ಮತ್ತೊಮ್ಮೆ ತಂಡಕ್ಕೆ ಮರಳಲಿದ್ದು ಹೊಸ ಭರವಸೆಗಳನ್ನು ಅಭಿಮಾನಿಗಳಲ್ಲಿ ಮೂಡಿಸಿದ್ದಾರೆ.
ಇದನ್ನೂ ಓದಿ: ಕೆಲಸ ಹುಡುಕುತ್ತಿರೋ ಯುವಕರಿಗೆ ಗುಡ್​ನ್ಯೂಸ್​, Apple ಸಂಸ್ಥೆಯಿಂದ ಭರ್ಜರಿ ಪ್ಲಾನ್..!
/newsfirstlive-kannada/media/post_attachments/wp-content/uploads/2023/11/BCCI-3.jpg)
ನನ್ನ ಜೀವನದಲ್ಲಿ ಭಾರತವನ್ನು ಪ್ರತಿನಿಧಿಸೋದು ಮಹಾದಾಸೆ. ನಾನು ತುಂಬಾ ಉತ್ಸುಕನಾಗಿದ್ದೇನೆ. ಈ ಬಾರಿ ವಿಶ್ವಕಪ್​​ನಲ್ಲಿ ಭಾರತವನ್ನು ಪ್ರತಿನಿಧಿಸುವುದಕ್ಕಿಂತ ದೊಡ್ಡದು ನನ್ನ ಜೀವನದಲ್ಲಿ ಮತ್ತೊಂದು ಇಲ್ಲ. ಟಿ20 ವಿಶ್ವಕಪ್​​ಗೆ ಭಾರತ ತಂಡವನ್ನು ಪ್ರಕಟಿಸಲು ರಾಹುಲ್ ದ್ರಾವಿಡ್, ಅಜಿತ್ ಅಗರ್ಕರ್ ಮತ್ತು ರೋಹಿತ್ ಶರ್ಮಾ ಸಮರ್ಥರಿದ್ದಾರೆ. ಅವರು ಅತ್ಯಂತ ಪ್ರಮಾಣಿಕ ವ್ಯಕ್ತಿಗಳಾಗಿದ್ದಾರೆ.
ಇದನ್ನೂ ಓದಿ: ಇಸ್ರೇಲ್​ನ ಭೀಕರ ಯುದ್ಧಕ್ಕೆ ಸಾವನ್ನಪ್ಪಿದ ತಾಯಿ, ಗರ್ಭದಲ್ಲಿದ್ದ ಮಗು ರಕ್ಷಣೆ ಆಗಿದ್ದೇ ದೊಡ್ಡ ಪವಾಡ..!
ನಾನು ಸಂಪೂರ್ಣವಾಗಿ ಅವರೊಂದಿಗೆ ಇದ್ದೇನೆ. ಅವರು ಯಾವುದೇ ನಿರ್ಧಾರ ತೆಗೆದುಕೊಂಡರೂ ನಾನು ಗೌರವಿಸುತ್ತೇನೆ. ಆದರೆ ನಾನು 100 ಪರ್ಸೆಂಟ್ ರೆಡಿ ಎಂದು ಅವರಿಗೆ ಹೇಳಬಲ್ಲೆ. ವಿಶ್ವಕಪ್​ಗಾಗಿ ಆ ಪ್ಲೈಟ್​​​ನಲ್ಲಿ ಇರಲು ನಾನು ಏನು ಬೇಕಾದರೂ ಮಾಡುತ್ತೇನೆ ಎಂದಿದ್ದಾರೆ. ದಿನೇಶ್ ಕಾರ್ತಿಕ್ ಅವರ ಮಾತು ಕೇಳಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಆದಷ್ಟು ಬೇಗ ತಮ್ಮ ನೆಚ್ಚಿನ ಆಟಗಾರ ಟಿ-20 ವಿಶ್ವಕಪ್ ಆಡಲಿ, ಬಿಸಿಸಿಐ ಅವರನ್ನು ಸೆಲೆಕ್ಟ್ ಮಾಡಿಕೊಳ್ಳಲಿ ಎಂದು ಆಶಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us