Advertisment

ಸೋಲಿನೊಂದಿಗೆ DK ವಿದಾಯ.. ಭಾವುಕರಾದ ವಿರಾಟ್ ಕೊಹ್ಲಿ.. VIDEO

author-image
AS Harshith
Updated On
ನಿವೃತ್ತಿಯ ನೋವಿನಲ್ಲೂ ಆರ್​ಸಿಬಿ ಅಭಿಮಾನಿಗಳ ಮರೆಯದ ದಿನೇಶ್ ಕಾರ್ತಿಕ್.. ಏನಂದ್ರು ಫ್ಯಾನ್ಸ್​ ಬಗ್ಗೆ..?
Advertisment
  • ರಾಜಸ್ಥಾನ್​ ರಾಯಲ್ಸ್​ ಎದುರು RCBಗೆ ಸೋಲು
  • ಅಧಿಕೃತವಾಗಿ ಐಪಿಎಲ್​ಗೆ ಗುಡ್​​​​ಬೈ ಹೇಳಿದ ಡಿಕೆ
  • ಮ್ಯಾಚ್​ ಫಿನಿಶರ್​ ಎಂಬ ಖ್ಯಾತಿ ಪಡೆದಿದ್ದ ದಿನೇಶ್​ ಕಾರ್ತಿಕ್

ರಾಜಸ್ಥಾನ್​ ಎದುರಿನ ಸೋಲಿನೊಂದಿಗೆ ಆರ್​ಸಿಬಿಯ ಕಪ್​​ ಕನಸು ಛಿದ್ರವಾಗಿದೆ. ಸತತ 6 ಪಂದ್ಯ ಗೆದ್ದು 7ನೇ ಪಂದ್ಯದಲ್ಲಿ ಮುಗ್ಗರಿಸಿದ ಆರ್​​ಸಿಬಿ ಸೀಸನ್​ 17ಕ್ಕೆ ಸೋಲಿನ ವಿದಾಯ ಹೇಳಿದೆ. ಇದೇ ಸೋಲಿನೊಂದಿಗೆ ತಂಡದ ಅಪ್ರತಿಮ ಹೋರಾಟಗಾರನ ಕರಿಯರ್​ ಕೂಡ ಅಂತ್ಯ ಕಂಡಿದೆ.

Advertisment

ಸತತ ಸೋಲುಗಳನ್ನ ಕಂಡು ಕಂಗೆಟ್ಟಿದ್ದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಆರ್ಮಿ ರಣರೋಚಕ ರೀತಿಯಲ್ಲಿ ಕಮ್​ಬ್ಯಾಕ್​ ಮಾಡಿತ್ತು. ಸತತ 6 ಪಂದ್ಯಗಳನ್ನ ಬ್ಯಾಕ್​ ಟು ಬ್ಯಾಕ್​ ಗೆದ್ದು ಎಲ್ಲರನ್ನ ದಂಗಾಗಿಸಿತ್ತು. ಪ್ಲೇ ಆಫ್​ಗೆ ಎಂಟ್ರಿ ಕೊಟ್ಟ ರೀತಿಯಂತೂ ಅತ್ಯದ್ಭುತವಾಗಿತ್ತು. ಹೀಗಾಗಿ ರಾಜಸ್ಥಾನ್​ ವಿರುದ್ಧವೂ ಆರ್​​ಸಿಬಿ ಗೆದ್ದೇ ಗೆಲ್ಲುತ್ತೆ ಅನ್ನೋದು ಅಭಿಮಾನಿಗಳ ಆತ್ಮವಿಶ್ವಾಸವಾಗಿತ್ತು. ಆದ್ರೆ, ಅಂತಿಮವಾಗಿ ನಿರಾಸೆ ಎದುರಾಗಿದೆ.

publive-image

ಸೋಲಿನೊಂದಿಗೆ ಆರ್​​ಸಿಬಿ ಅಭಿಯಾನ ಅಂತ್ಯ.!

ಆರಂಭದಲ್ಲಿ ಆರ್​​ಸಿಬಿಯ ಆಟ ನೋಡಿದ ಫ್ಯಾನ್ಸ್​, ಈ ಸಲನೂ ಕಪ್​ ನಮ್ದಲ್ಲ ಅನ್ನೋ ತಿರ್ಮಾನ ಮಾಡಿದ್ರು. ಆದ್ರೆ, ಭರ್ಜರಿ ಪರ್ಫಾಮೆನ್ಸ್ ನೀಡಿ ಕಮ್​ಬ್ಯಾಕ್​ ಮಾಡಿದ್ದ ಆರ್​​ಸಿಬಿ​ ಕಪ್​ ಗೆಲುವಿನ ಕನಸನ್ನ ಮತ್ತೆ ಅಭಿಮಾನಿಗಳಲ್ಲಿ ಬಿತ್ತಿತ್ತು. ಆದ್ರೆ, ಎಲಿಮಿನೇಟರ್​ ಪಂದ್ಯದ ರಾಜಸ್ಥಾನ್​ ಎದುರಿನ ಸೋಲು ಕನಸನ್ನ ನುಚ್ಚು ನೂರು ಮಾಡಿದೆ. ಈ ಸೋಲಿನೊಂದಿಗೆ ಸೀಸನ್​ 17ರಲ್ಲಿ ಆರ್​​ಸಿಬಿ ಅಭಿಯಾನ ಅಂತ್ಯಕಂಡಿದೆ. ಜೊತೆಗೆ ಆರ್​​ಸಿಬಿ ಪಡೆಯ ಅಪ್ರತಿಮ ಹೋರಾಟಗಾರ, ಅಭಿಮಾನಿಗಳ ನೆಚ್ಚಿನ ಡಿಕೆ ಬಾಸ್ ಕರಿಯರ್​ ಕೂಡ ಅಂತ್ಯ ಕಂಡಿದೆ.

ಐಪಿಎಲ್​ ಅಂತ್ಯ.. ಕ್ರಿಕೆಟ್​ಗೆ ಕಾರ್ತಿಕ್​ ಗುಡ್​ ಬೈ

38 ವರ್ಷದ ದಿನೇಶ್​ ಕಾರ್ತಿಕ್​ ಈ ಸೀಸನ್​ ಆರಂಭಕ್ಕೂ ಮುನ್ನ ಇದೇ ಕೊನೆಯ ಐಪಿಎಲ್​ ಟೂರ್ನಿ ಎಂಬ ಸುಳಿವು ಕೊಟ್ಟಿದ್ರು. ಸಂದರ್ಶನವೊಂದರಲ್ಲೂ ವಿದಾಯ ಹೇಳೋ ಪರೋಕ್ಷ ಸೂಚನೆ ನೀಡಿದ್ರು. ಇದೀಗ ಈ ಸೀಸನ್​ ಐಪಿಎಲ್​ನಲ್ಲಿ ಆರ್​​ಸಿಬಿ ಆಟ​ ಅಂತ್ಯ ಕಂಡಿದೆ. ದಿನೇಶ್​ ಕಾರ್ತಿಕ್​ ಅಧಿಕೃತವಾಗಿ ಐಪಿಎಲ್​ಗೆ ಗುಡ್​​​​ಬೈ ಹೇಳಿದ್ದಾರೆ.

Advertisment


">May 22, 2024

ಡಿಕೆ ಬಾಸ್​ ಕಮ್​​ಬ್ಯಾಕ್​ ಕಥೆ.. ಎಲ್ಲರಿಗೂ ಸ್ಪೂರ್ತಿ.!

ಛಲದಂಕ ಮಲ್ಲ ದಿನೇಶ್​ ಕಾರ್ತಿಕ್​ ಕಮ್​ಬ್ಯಾಕ್​ ಕಥೆ ಎಂತವರಿಗೂ ಸ್ಪೂರ್ತಿ. 2015ರಲ್ಲಿ ಮೊದಲು ಆರ್​​ಸಿಬಿ ಪರ ಆಡಿದ್ದ ದಿನೇಶ್​ ಕಾರ್ತಿಕ್​ರನ್ನ 2022ರಲ್ಲಿ ಮತ್ತೆ ಕಮ್​ಬ್ಯಾಕ್​ ಮಾಡಿದ್ರು. ಹರಾಜಿನಲ್ಲಿ ಡಿಕೆನ ಖರೀದಿಸಿದಾಗ ಎಲ್ರೂ ಟೀಕಿಸಿದ್ರು. ಆ ಟೀಕೆಗಳಿಗೆಲ್ಲಾ ಕಾರ್ತಿಕ್​, ತಮ್ಮ ಬ್ಯಾಟ್​ನಿಂದಲೇ ಉತ್ತರ ಕೊಟ್ರು. ಫಿನಿಷರ್​​ ಆಗಿ ಮಿಂಚು ಹರಿಸಿದ ಡಿಕೆ ಬಾಸ್​​ ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿದ್ರು. ಎಬಿಡಿ ಅಲಭ್ಯತೆಯ ಕೊರತೆ ಕಾಡದಂತೆ ತಮ್ಮ ರೋಲ್​ನ ಸ್ಪಷ್ಟವಾಗಿ ನಿಭಾಯಿಸಿದ್ರು.

https://x.com/DKSureshINC/status/1793527386308522151

publive-image

ಈ ಸೀಸನ್​ ಐಪಿಎಲ್​ನಲ್ಲೂ ಬೊಂಬಾಟ್​​ ಆಟ.!

ಈ ಸೀಸನ್​ನ ಐಪಿಎಲ್​ನಲ್ಲೂ ದಿನೇಶ್​ ಕಾರ್ತಿಕ್​ ಬೊಂಬಾಟ್​ ಆಟವಾಡಿದ್ರು. ಬ್ಯಾಟ್​ ಹಿಡಿದು ಘರ್ಜಿಸಿದ್ದ ಡಿಕೆ ಬಾಸ್​​​, ಬೌಲರ್​ಗಳ ಮೇಲೆ ಸವಾರಿ ಮಾಡಿದ್ರು. ಬೌಂಡರಿ, ಸಿಕ್ಸರ್​​ಗಳನ್ನ ಚಚ್ಚಿ ಫ್ಯಾನ್ಸ್​ಗೆ ಭರ್ಜರಿ ಎಂಟರ್​ಟೈನ್​ಮೆಂಟ್​ ನೀಡಿದ್ರು. ಒತ್ತಡದ ನಡುವೆ ಡಿಕೆಯ ಸಾಲಿಡ್​ ಆಟವನ್ನ ಕ್ರಿಕೆಟ್​ ಲೋಕವೇ ಕೊಂಡಾಡಿತ್ತು. ಎಸ್​​ಆರ್​ಹೆಚ್​​ ವಿರುದ್ಧ ಹೈಯೆಸ್ಟ್​ ರನ್​ ಚೇಸ್​ ಮಾಡೋ ವೇಳೆ ಡಿಕೆ ಮಾಡಿದ ಬ್ಯಾಟಿಂಗ್​ ಅಂತೂ ಅತ್ಯದ್ಭುತವಾಗಿತ್ತು.

Advertisment

https://x.com/rajasthanroyals/status/1793531523091898673

publive-image

ಸೀಸನ್​ 17ರ ಐಪಿಎಲ್​ನಲ್ಲಿ ಕಾರ್ತಿಕ್​

ಇನ್ನಿಂಗ್ಸ್​ 13
ರನ್​ 317
ಬೆಸ್ಟ್​ 83
4/6 26/22
SR 193.29

ಸೀಸನ್​ 17ರ ಐಪಿಎಲ್​ನಲ್ಲಿ 13 ಇನ್ನಿಂಗ್ಸ್​ಗಳಲ್ಲಿ ಬ್ಯಾಟಿಂಗ್​ ನಡೆಸಿದ ಕಾರ್ತಿಕ್​ 317 ರನ್​ಗಳಿಸಿದ್ರು. 83 ಬೆಸ್ಟ್​ ಸ್ಕೋರ್​ ಆಗಿದ್ದು, 26 ಬೌಂಡರಿ, 22 ಸಿಕ್ಸರ್​ ಸಿಡಿಸಿದ್ರು. ಬರೋಬ್ಬರಿ 193.29ರ ಸ್ಟ್ರೈಕ್​ರೇಟ್​ನಲ್ಲಿ ಘರ್ಜಿಸಿದ್ರು.

publive-image

ಐಪಿಎಲ್​ ಸೀಸನ್​ 17ರಲ್ಲಿ ಆರ್​​ಸಿಬಿ ಗೆಲ್ಲಲಿಲ್ಲ ನಿಜ. ಆದ್ರೆ, ಆರ್​​ಸಿಬಿ ಕಮ್​​ಬ್ಯಾಕ್​​, ಪ್ಲೇ ಆಫ್​ಗೆ ಎಂಟ್ರಿ ಕೊಟ್ಟ ರೀತಿ​ ಎಲ್ಲರ ಮನಗೆದ್ದಿದ್ದಂತೂ ಸುಳ್ಳಲ್ಲ. ಇದ್ರ ಜೊತೆಗೆ ದಿನೇಶ್​ ಕಾರ್ತಿಕ್​ರ ಆಟ ಕೂಡ ಫ್ಯಾನ್ಸ್​ಗೆ ಭರ್ಜರಿ ಟ್ರೀಟ್​ ನೀಡ್ತು. ಇದೀಗ ಈ ಐಪಿಎಲ್​ನಲ್ಲಿ ಆರ್​​ಸಿಬಿಯ ಆಟವೂ ಅಂತ್ಯ ಕಂಡಿದೆ. ದಿನೇಶ್​ ಕಾರ್ತಿಕ್ ಆಟವೂ ಕೊನೆಗೊಂಡಿದೆ. ಡಿಕೆ ಬಾಸ್​​ರ ಸೆಕೆಂಡ್​ ಇನ್ನಿಂಗ್ಸ್​ ಅದ್ಭುತವಾಗಿರಲಿ ಅನ್ನೋದು ಫ್ಯಾನ್ಸ್​ ಹಾರೈಕೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment