/newsfirstlive-kannada/media/post_attachments/wp-content/uploads/2024/12/Dinesh-Karthik_Ishan-Kishan.jpg)
2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಟಾರ್ ಆಟಗಾರರನ್ನೇ ಖರೀದಿ ಮಾಡುವ ಮೂಲಕ ಬಲಿಷ್ಠ ತಂಡವನ್ನು ಕಟ್ಟಿದೆ. ಆರ್‌ಸಿಬಿ ಓಪನಿಂಗ್ ಸ್ಲಾಟ್ಗೆ ಟೀಮ್ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ಗೆ ಕನ್ಸಿಡರ್ ಮಾಡಿದ್ರು. ಆದರೆ, ಇವರನ್ನು ಆರ್‌ಸಿಬಿ ಖರೀದಿ ಮಾಡಲು ಮುಂದಾಗಲಿಲ್ಲ. ಇದರ ಮಧ್ಯೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಇಶಾನ್ ಕಿಶನ್ ಅವರನ್ನು ಏಕೆ ಖರೀದಿ ಮಾಡಲಿಲ್ಲ ಎಂದು ಬಿಚ್ಚಿಟ್ಟಿದ್ದಾರೆ.
ಅದರಲ್ಲೂ ಇಂಗ್ಲೆಂಡ್ ತಂಡದ ಸ್ಫೋಟಕ ಬ್ಯಾಟರ್ ಫಿಲ್ ಸಾಲ್ಟ್ ಅವರನ್ನು ಖರೀದಿ ಮಾಡುವಲ್ಲಿ ಆರ್‌ಸಿಬಿ ಯಶಸ್ವಿಯಾಗಿದೆ. ಇವರಿಗೆ ಬರೋಬ್ಬರಿ 11.50 ಕೋಟಿ ನೀಡಿ ಆರ್‌ಸಿಬಿ ತಂಡಕ್ಕೆ ಬರಮಾಡಿಕೊಂಡಿತು. ಇವರ ಖರೀದಿಗೆ ಕಾರಣ ಏನು? ಎಂದು ಆರ್‌ಸಿಬಿ ಮೆಂಟರ್ ಮತ್ತು ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಬಿಚ್ಚಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಇಶಾನ್ ಕಿಶನ್ ಬಗ್ಗೆ ದಿನೇಶ್ ಕಾರ್ತಿಕ್ ಮಾತಾಡಿದ್ದಾರೆ.
ಏನಂದ್ರು ದಿನೇಶ್ ಕಾರ್ತಿಕ್?
ಈ ಸಂಬಂಧ ಮಾತಾಡಿದ ದಿನೇಶ್ ಕಾರ್ತಿಕ್ ಅವರು, ಆರ್‌ಸಿಬಿ ವಿದೇಶಿ ಆರಂಭಿಕ ಆಟಗಾರನ ಹುಡುಕಾಟ ನಡೆಸಿತ್ತು. ನಮಗೆ ಉತ್ತಮ ಸ್ಟ್ರೈಕ್ ರೇಟ್ನೊಂದಿಗೆ ದೊಡ್ಡ ಇನಿಂಗ್ಸ್ ಕಟ್ಟುವ ಸ್ಟಾರ್ ಆಟಗಾರರ ಬೇಕಿತ್ತು. ಈ ರೀತಿಯ ಸ್ಫೋಟಕ ಇನಿಂಗ್ಸ್ಗೆ ಹೆಸರು ವಾಸಿ ಫಿಲ್ ಸಾಲ್ಟ್. ಭಾರತದ ಪರ ಇಶಾನ್ ಕಿಶನ್ ಬಿಗ್ ಸ್ಕೋರ್ ಕಲೆ ಹಾಕಬಲ್ಲ ಪ್ಲೇಯರ್. ಆದರೆ, ಇಶಾನ್ ಕಿಶನ್ ಅವರನ್ನು ಖರೀದಿ ಮಾಡಲು ಇರೋ ಸಮಸ್ಯೆ ಏನಂದ್ರೆ ಅವರಲ್ಲಿ ಪವರ್ ಇಲ್ಲ. ಪವರ್ ಹಿಟ್ಟಿಂಗ್ ಇಲ್ಲ ಎಂದಮೇಲೆ ಖರೀದಿ ಮಾಡಬೇಕು. ನಮ್ಮ ತಂಡ ಆರಂಭಿಕರಾಗಿ ವಿದೇಶಿ ಆಟಗಾರರನ್ನು ಮನಸ್ಸಿನಲ್ಲಿ ಇಟ್ಟುಕೊಂಡಿತ್ತು. ಹಾಗಾಗಿ ಇವರನ್ನು ಖರೀದಿ ಮಾಡಿದೆವು ಎಂದಿದ್ದಾರೆ.
ಇದನ್ನೂ ಓದಿ: ನ್ಯೂಜಿಲೆಂಡ್ ವಿರುದ್ಧ ರೋಚಕ ಜಯ; ಭಾರತದ ಗೆಲುವಿಗೆ ಕಾರಣ ಬಿಚ್ಚಿಟ್ಟ ಕ್ಯಾಪ್ಟನ್ ರೋಹಿತ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ