newsfirstkannada.com

ನಿವೃತ್ತಿಯ ನೋವಿನಲ್ಲೂ ಆರ್​ಸಿಬಿ ಅಭಿಮಾನಿಗಳ ಮರೆಯದ ದಿನೇಶ್ ಕಾರ್ತಿಕ್.. ಏನಂದ್ರು ಫ್ಯಾನ್ಸ್​ ಬಗ್ಗೆ..?

Share :

Published May 25, 2024 at 1:44pm

Update May 25, 2024 at 2:27pm

    ಕ್ರಿಕೆಟ್ ಜರ್ನಿಗೆ ಗುಡ್ ಬೈ ಹೇಳಿರುವ ದಿನೇಶ್ ಕಾರ್ತಿಕ್

    ಐಪಿಎಲ್​ನಲ್ಲಿ 2024ರ ಎಲಿಮಿನೇಟರ್ ಕೊನೆಯ ಪಂದ್ಯ

    ರಾಜಸ್ಥಾನ್ ವಿರುದ್ಧ ಸೋತು ವಿದಾಯ ಹೇಳಿದ DK ಬಾಸ್

IPL 2024: ಎಲಿಮಿನೇಟರ್‌ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸಿತು. ಈ ಮೂಲಕ ಆರ್​ಸಿಬಿ 2024ರ ಐಪಿಎಲ್ ಜರ್ನಿಯನ್ನು ಕೊನೆಗೊಳಿಸಿತು. ಸೋಲಿನ ಆಘಾತದ ಜೊತೆಗೆ RCB ತಂಡದ ವಿಕೆಟ್ ಕೀಪರ್, ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ನಿವೃತ್ತಿ ಘೋಷಿಸಿದರು.

ನಿವೃತ್ತಿ ಬೆನ್ನಲ್ಲೇ ದಿನೇಶ್ ಕಾರ್ತಿಕ್ ಆರ್​ಸಿಬಿ ಅಭಿಮಾನಿಗಳನ್ನು ನೆನಪಿಸಿಕೊಂಡಿದ್ದಾರೆ. ‘ನಾನು ಆರ್​ಸಿಬಿ ಅಭಿಮಾನಿಗಳಿಂದಾಗಿ ಟೀಂ ಇಂಡಿಯಾಗೆ ಪುನರಾಗಮನ ಮಾಡಲು ಸಾಧ್ಯವಾಯಿತು. 2022ರ ಟಿ 20 ವಿಶ್ವಕಪ್‌ಗೆ ನನ್ನನ್ನು ಟೀಮ್ ಇಂಡಿಯಾದ ಭಾಗವಾಗಿ ಮಾಡಲಾಯಿತು. ಈ ಮೂಲಕ ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದೆ. ಇದು ಆರ್​ಸಿಬಿ ಅಭಿಮಾನಿಗಳಿಂದಲೇ ಸಾಧ್ಯವಾಯಿತು ಎಂದು ನಾನು ನಂಬುತ್ತೇನೆ’ ಎಂದು ಕಾರ್ತಿಕ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:ನಿಂದನೆ, ಅವಮಾನ.. ಕುಸಿದು ಹೋದ ಪಾಂಡ್ಯ.. ಒಂದೂವರೆ ತಿಂಗಳು ಟೂರ್ನಿಯ ಅವಧಿಯಲ್ಲಿ ನತಾಶಾ ಮಾಡಿದ್ದೇನು?

ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಅಭಿಮಾನಿಗಳು ನನ್ನನ್ನು ಟಿ 20 ವಿಶ್ವಕಪ್​ಗೆ ಆಯ್ಕೆ ಮಾಡಿಬೇಕು ಎಂಬ ಆಗ್ರಹ ಮಾಡಿದ್ದರು. ಪರಿಣಾಮ 37ನೇ ವಯಸ್ಸಿನಲ್ಲಿದ್ದ ನಾನು ಟೀಂ ಇಂಡಿಯಾಗೆ ಎಂಟ್ರಿ ನೀಡಲು ಸಾಧ್ಯವಾಯಿತು. ಇದನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಆರ್​ಸಿಬಿ ಅಭಿಮಾನಿಗಳು ನನ್ನ ವೃತ್ತಿ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎನ್ನುತ್ತ ಕಾರ್ತಿಕ್ ಭಾವುಕರಾಗಿದ್ದಾರೆ.

ಇದನ್ನೂ ಓದಿ:ಆರ್​ಸಿಬಿ ಅಭಿಮಾನಿಗಳಿಗಾಗಿ ಸ್ಪೆಷಲ್ ಪೋಸ್ಟ್​ ಮಾಡಿದ ವಿರಾಟ್ ಕೊಹ್ಲಿ.. ಏನಂದ್ರು..?

ಅಂದ್ಹಾಗೆ ಕಾರ್ತಿಕ್ 2004ರಲ್ಲಿ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದರು. ಸುಮಾರು 20 ವರ್ಷಗಳ ಕಾಲ ವೃತ್ತಿಪರ ಕ್ರಿಕೆಟ್ ಆಡುವುದನ್ನು ಮುಂದುವರೆಸಿದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೊರತುಪಡಿಸಿ ಮುಂಬೈ ಇಂಡಿಯನ್ಸ್, ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರವಾಗಿ ಆಡಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರರ ಪಟ್ಟಿಯಲ್ಲಿ ಕಾರ್ತಿಕ್ ಹೆಸರು ಇದೆ.

ಇದನ್ನೂ ಓದಿ:RCB Retention List: ಈ ನಾಲ್ಕು ಆಟಗಾರರನ್ನು ಮಾತ್ರ ಉಳಿಸಿಕೊಳ್ಳಲು ಆರ್​ಸಿಬಿ ಪ್ಲಾನ್

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ನಿವೃತ್ತಿಯ ನೋವಿನಲ್ಲೂ ಆರ್​ಸಿಬಿ ಅಭಿಮಾನಿಗಳ ಮರೆಯದ ದಿನೇಶ್ ಕಾರ್ತಿಕ್.. ಏನಂದ್ರು ಫ್ಯಾನ್ಸ್​ ಬಗ್ಗೆ..?

https://newsfirstlive.com/wp-content/uploads/2024/05/DINESH-KARTHIK-5-1.jpg

Load More