/newsfirstlive-kannada/media/post_attachments/wp-content/uploads/2025/03/Salt_Kohli.jpg)
ಇತ್ತೀಚೆಗೆ ಕೋಲ್ಕತ್ತಾದ ಈಡನ್ ಗಾರ್ಡನ್ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಕೆಕೆಆರ್​ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಗೆದ್ದು ಬೀಗಿದೆ. ಈ ಮೂಲಕ ಆರ್​​ಸಿಬಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಕೊಡಲಿ ಪೆಟ್ಟು ನೀಡಿತ್ತು.
ಇನ್ನು, ಆರ್​​ಸಿಬಿ 2025ರ ಐಪಿಎಲ್​ನಲ್ಲಿ ಗೆಲುವಿನ ಶುಭಾರಂಭ ಮಾಡಿದೆ. ಪಾಯಿಂಟ್ಸ್​ ಟೇಬಲ್​ನಲ್ಲಿ ಆರ್​ಸಿಬಿ 2ನೇ ಸ್ಥಾನದಲ್ಲಿದೆ. ಆರ್​​ಸಿಬಿ ಗೆಲುವಿಗೆ ಪ್ರಮುಖ ಕಾರಣ ಸ್ಟಾರ್​ ವಿಕೆಟ್​ ಕೀಪರ್​ ಬ್ಯಾಟರ್​​ ಫಿಲ್​ ಸಾಲ್ಟ್​​. ಇವರು ತನ್ನ ಮೊದಲ ಪಂದ್ಯದಲ್ಲೇ ಆರ್​​ಸಿಬಿ ಪರ ಅಬ್ಬರಿಸಿದರು.
ಫಿಲ್​ ಸಾಲ್ಟ್​ ಅಬ್ಬರ
ಆರ್​​​ಸಿಬಿ ಪರ ಮೊದಲ ಪಂದ್ಯದಲ್ಲೇ ಫಿಲ್​​ ಸಾಲ್ಟ್​​ ಅಬ್ಬರಿಸಿದರು. ತಾನು ಆಡಿದ 31 ಬಾಲ್​​ನಲ್ಲಿ ಬರೋಬ್ಬರಿ 9 ಫೋರ್​​, 2 ಭರ್ಜರಿ ಸಿಕ್ಸರ್​ ಸಮೇತ 56 ರನ್​​ ಸಿಡಿಸಿದರು. ಇವರ ಬ್ಯಾಟಿಂಗ್​ ಸ್ಟ್ರೈಕ್​ ರೇಟ್​​ ಬರೋಬ್ಬರಿ 180ಕ್ಕೂ ಹೆಚ್ಚಿತ್ತು.
ದಿನೇಶ್​ ಕಾರ್ತಿಕ್​ ಏನಂದ್ರು?
ಇನ್ನು, ಫಿಲ್​ ಸಾಲ್ಟ್​ ಬಗ್ಗೆ ದಿನೇಶ್​ ಕಾರ್ತಿಕ್​ ಮಾತಾಡಿರೋ ವಿಡಿಯೋ ಒಂದು ಆರ್​​ಸಿಬಿ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಪೋಸ್ಟ್​ ಆಗಿದೆ. ಆರ್‌ಸಿಬಿ ವಿದೇಶಿ ಆರಂಭಿಕ ಆಟಗಾರನ ಹುಡುಕಾಟ ನಡೆಸಿತ್ತು. ನಮಗೆ ಉತ್ತಮ ಸ್ಟ್ರೈಕ್ ರೇಟ್​​ನೊಂದಿಗೆ ದೊಡ್ಡ ಇನಿಂಗ್ಸ್ ಕಟ್ಟುವ ಸ್ಟಾರ್ ಆಟಗಾರರ ಬೇಕಿತ್ತು. ಈ ರೀತಿಯ ಸ್ಫೋಟಕ ಇನಿಂಗ್ಸ್​ಗೆ ಹೆಸರು ವಾಸಿ ಫಿಲ್ ಸಾಲ್ಟ್. ಭಾರತದ ಪರ ಇಶಾನ್ ಕಿಶನ್ ಬಿಗ್ ಸ್ಕೋರ್ ಕಲೆ ಹಾಕಬಲ್ಲ ಪ್ಲೇಯರ್. ಆದರೆ ನಮ್ಮ ತಂಡ ಆರಂಭಿಕರಾಗಿ ವಿದೇಶಿ ಆಟಗಾರರನ್ನು ಮನಸ್ಸಿನಲ್ಲಿ ಇಟ್ಟುಕೊಂಡಿತ್ತು. ಹಾಗಾಗಿ ಇವರನ್ನು ಖರೀದಿ ಮಾಡಿದೆವು ಎಂದರು ದಿನೇಶ್​ ಕಾರ್ತಿಕ್.
ಇವರು ಇಂಗ್ಲೆಂಡ್ ತಂಡದ ಪರ 38 ಟಿ20 ಪಂದ್ಯಗಳಲ್ಲಿ 165.32 ಸ್ಟ್ರೈಕ್ ರೇಟ್‌ನಲ್ಲಿ 1106 ರನ್ ಸಿಡಿಸಿದ್ದಾರೆ. ಅದರಲ್ಲೂ ಇವರ ಟ್ರ್ಯಾಕ್​ ರೆಕಾರ್ಡ್​ ನೋಡಿ ಆರ್​​ಸಿಬಿ ಖರೀದಿ ಮಾಡಿದೆ. ಸಾಲ್ಟ್​​ ತನ್ನ ಕರಿಯರ್​ನಲ್ಲೇ ಶೇ. 28ರಷ್ಟು ಸಮಯ ಒಂದು ಓವರ್​​ನಲ್ಲಿ 6-8 ರನ್​​ ಗಳಿಸುತ್ತಾರೆ. ಶೇ. 30ರಷ್ಟು ಸಮಯ 1 ಓವರ್​​ನಲ್ಲಿ 12-15 ರನ್​​ ಕಲೆ ಹಾಕುತ್ತಾರೆ. 4 ಓವರ್​​ಗಳ ಪೈಕಿ 1ರಲ್ಲಿ 16ಕ್ಕೂ ಹೆಚ್ಚು ರನ್​​​ ಸಿಡಿಸುತ್ತಾರೆ. ಆವರೇಜ್​​ 2 ಓವರ್​​ಗೆ ಒಮ್ಮೆ 12 ರನ್​​ ಬಾರಿಸೋ ಸಾಮರ್ಥ್ಯ ಇದೆ. ಇದು ಹೇಗೆ ಸಾಧ್ಯ? ಎಂದು ದಿನೇಶ್ ಕಾರ್ತಿಕ್​ ಅಚ್ಚರಿ ವ್ಯಕ್ತಪಡಿಸಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us