ಬಾಂಗ್ಲಾ ವಿರುದ್ಧ ಟೆಸ್ಟ್​​.. ಕ್ಯಾಪ್ಟನ್​​ ರೋಹಿತ್​​, ಕೋಚ್​ ಗಂಭೀರ್​​ ಖಡಕ್​ ವಾರ್ನಿಂಗ್​​; ಕಾರಣವೇನು?

author-image
Ganesh Nachikethu
Updated On
ತಂಡದಿಂದ ರೋಹಿತ್​ ಶರ್ಮಾರನ್ನೇ ಕೈ ಬಿಟ್ಟ ಭಾರತದ ಮುಖ್ಯ ಕೋಚ್​​ ಗಂಭೀರ್​​; ಕಾರಣವೇನು?
Advertisment
  • ಶ್ರೀಲಂಕಾ ವಿರುದ್ಧ ಏಕದಿನ ಸರಣಿಯಲ್ಲಿ ಟೀಮ್​ ಇಂಡಿಯಾ ಹೀನಾಯ ಸೋಲು
  • ಮುಂದಿನ ದಿನಗಳಲ್ಲಿ ಟೀಮ್​ ಇಂಡಿಯಾ ಬಾಂಗ್ಲಾದೇಶದ ವಿರುದ್ಧ ಟೆಸ್ಟ್​ ಸರಣಿ..!
  • ಕ್ಯಾಪ್ಟನ್​ ರೋಹಿತ್​ ಶರ್ಮಾ ಮತ್ತು ಮುಖ್ಯ ಕೋಚ್​​ ಗಂಭೀರ್​ಗೆ ಖಡಕ್​ ವಾರ್ನಿಂಗ್​​​

ಇತ್ತೀಚೆಗಷ್ಟೇ ಶ್ರೀಲಂಕಾ ವಿರುದ್ಧ ಏಕದಿನ ಸರಣಿಯಲ್ಲಿ ಟೀಮ್​ ಇಂಡಿಯಾ ಹೀನಾಯ ಸೋಲು ಕಂಡಿದೆ. ಟಿ20 ಸರಣಿಯಲ್ಲಿ ಮುಖ್ಯ ಕೋಚ್​ ಗೌತಮ್​ ಗಂಭೀರ್​​​, ಕ್ಯಾಪ್ಟನ್​ ಸೂರ್ಯಕುಮಾರ್​​ ಯಾದವ್​​​ ಕಾಂಬಿನೇಷನ್​ ವರ್ಕೌಟ್​ ಆಗಿತ್ತು. ಆದರೆ, ಏಕದಿನ ಸರಣಿಯಲ್ಲಿ ಕ್ಯಾಪ್ಟನ್​ ರೋಹಿತ್​ ಶರ್ಮಾ ಮತ್ತು ಮುಖ್ಯ ಕೋಚ್​ ಗಂಭೀರ್​​​ ಕಾಂಬಿನೇಷನ್​ ವರ್ಕೌಟ್​ ಆಗಲಿಲ್ಲ. ಹೀಗಿರುವಾಗ ಮುಂದಿನ ದಿನಗಳಲ್ಲಿ ಟೀಮ್​ ಇಂಡಿಯಾ ಬಾಂಗ್ಲಾದೇಶದ ವಿರುದ್ಧ ಟೆಸ್ಟ್​ ಸರಣಿ ಆಡಲಿದ್ದು, ಎಲ್ಲರ ಕಣ್ಣು ಈ ಟೂರ್ನಿಯತ್ತ ನೆಟ್ಟಿದೆ. ಇದರ ಮಧ್ಯೆ ಟೀಂ ಇಂಡಿಯಾದ ಲಗ್ಗಜ ಆಟಗಾರ ದಿನೇಶ್​​ ಕಾರ್ತಿಕ್​​​ ಕ್ಯಾಪ್ಟನ್​ ರೋಹಿತ್​ ಶರ್ಮಾ ಮತ್ತು ಮುಖ್ಯ ಕೋಚ್​​ ಗಂಭೀರ್​ಗೆ ಸಲಹೆಯೊಂದು ನೀಡಿದ್ದಾರೆ.

ಈ ಸಂಬಂಧ ಮಾತಾಡಿದ ದಿನೇಶ್​ ಕಾರ್ತಿಕ್​​, ಟೀಮ್​ ಇಂಡಿಯಾ ಮುಂದಿನ ದಿನಗಳಲ್ಲಿ ಸಾಲು ಸಾಲು ಟೆಸ್ಟ್​ ಆಡಲಿದೆ. ಬಾಂಗ್ಲಾದೇಶ, ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್​ ಸರಣಿ ಆಡಲಿದ್ದು, ಎಲ್ಲಾ ಮೈದಾನಗಳು ಸ್ಪಿನ್ನರ್ಸ್​ಗೆ ಫೇವರ್​ ಆಗಿವೆ. ಹೀಗಾಗಿ ರವೀಂದ್ರ ಜಡೇಜಾ ಮತ್ತು ಆರ್​. ಅಶ್ವಿನ್​ ಇಬ್ಬರನ್ನೂ ಕಣಕ್ಕಿಳಿಸುವುದು ಬೆಸ್ಟ್​ ಎಂದಿದ್ದಾರೆ.

ಕ್ಯಾಪ್ಟನ್​​ ರೋಹಿತ್​ ಶರ್ಮಾ, ಕೋಚ್​ ಗಂಭೀರ್​ ಅಶ್ವಿನ್​ ಮತ್ತು ಜಡೇಜಾ ಇಬ್ಬರಲ್ಲಿ ಒಬ್ಬರನ್ನು ಟೀಂ ಇಂಡಿಯಾ ಪರ ಆಡಿಸಬಹುದು. ಇದು ತಪ್ಪು ನಿರ್ಧಾರ. ಕಾರಣ ಎಲ್ಲಾ ಮೈದಾನಗಳು ಸ್ಪಿನ್ನರ್ಸ್​ಗೆ ಫೇವರ್​ ಆಗಿವೆ. ಹೀಗಾಗಿ ಜಡೇಜಾ, ಅಶ್ವಿನ್​ ಇಬ್ಬರನ್ನು ಆಡಿಸಿ. ಇದು ನನ್ನ ಸಲಹೆ, ಉಳಿದದ್ದು ಟೀಂ ಇಂಡಿಯಾ ಸೆಲೆಕ್ಟರ್ಸ್​​ ನಿರ್ಧಾರ ಎಂದರು.

ಇದನ್ನೂ ಓದಿ: ಫ್ಯಾನ್ಸ್​ಗೆ ಗುಡ್​​ನ್ಯೂಸ್​​​ ಕೊಟ್ಟ ಆರ್​​ಸಿಬಿ.. ಈ ಆಟಗಾರನನ್ನು ಉಳಿಸಿಕೊಳ್ಳಲು ಮೆಗಾ ಪ್ಲಾನ್​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment