newsfirstkannada.com

ಟಿ20 ವಿಶ್ವಕಪ್​​.. ದ್ರಾವಿಡ್​​, ರೋಹಿತ್​ ಶರ್ಮಾಗೆ ವಾರ್ನಿಂಗ್​ ಕೊಟ್ಟ ದಿನೇಶ್​ ಕಾರ್ತಿಕ್​

Share :

Published January 25, 2024 at 6:25pm

Update January 25, 2024 at 6:19pm

    ಇಂಡಿಯನ್​ ಪ್ರೀಮಿಯರ್​ ಲೀಗ್​ ಬೆನ್ನಲ್ಲೇ ಟಿ20 ವಿಶ್ವಕಪ್​​

    ವೆಸ್ಟ್​ ಇಂಡೀಸ್​​​, ಯುಎಸ್​​ನಲ್ಲಿ ನಡೆಯಲಿದೆ ಮೆಗಾ ಟೂರ್ನಿ

    ಕೋಚ್​ ಡ್ರಾವಿಡ್​​, ರೋಹಿತ್​ ಶರ್ಮಾಗೆ ದಿನೇಶ್​ ವಾರ್ನಿಂಗ್​!

ಸದ್ಯದಲ್ಲೇ ಇಂಡಿಯನ್​ ಪ್ರೀಮಿಯರ್​​ ಲೀಗ್​ ಸೀಸನ್​​ 17 ಶುರುವಾಗಲಿದೆ. ಇದಾದ ಬೆನ್ನಲ್ಲೇ 2024ರ ಟಿ20 ವಿಶ್ವಕಪ್​ ನಡೆಯಲಿದೆ. ಇದೇ ಜೂನ್​​ 5ನೇ ತಾರೀಕಿನಿಂದ ಶುರುವಾಗೋ ಈ ಪ್ರತಿಷ್ಠಿತ ಟೂರ್ನಿಯಲ್ಲಿ ಟೀಂ ಇಂಡಿಯಾ ಸೇರಿದಂತೆ 20 ದೇಶಗಳು ಭಾಗಿಯಾಗಲಿವೆ. ಹೀಗಾಗಿ ಎಲ್ಲರ ಕಣ್ಣು ವಿಶ್ವ ಕ್ರಿಕೆಟ್‌ನತ್ತ ನೆಟ್ಟಿದೆ. ಹೀಗಿರುವಾಗಲೇ ಟೀಂ ಇಂಡಿಯಾದ ದಿಗ್ಗಜ ಆಟಗಾರ ದಿನೇಶ್​​ ಕಾರ್ತಿಕ್​​​ ಕ್ಯಾಪ್ಟನ್​ ರೋಹಿತ್​ ಶರ್ಮಾ ಮತ್ತು ಮುಖ್ಯ ಕೋಚ್​​ ರಾಹುಲ್​ ದ್ರಾವಿಡ್​​ಗೆ ಸಲಹೆಯೊಂದು ನೀಡಿದ್ದಾರೆ.

ಈ ಸಂಬಂಧ ಮಾತಾಡಿದ ದಿನೇಶ್​ ಕಾರ್ತಿಕ್​​, ಟಿ20 ವಿಶ್ವಕಪ್​​ ಯುಎಸ್​​, ವೆಸ್ಟ್​ ಇಂಡೀಸ್​ನಲ್ಲಿ ನಡೆಯಲಿದೆ. ಇಲ್ಲಿರೋ ಮೈದಾನಗಳು ಸ್ಪಿನ್ನರ್ಸ್​ಗೆ ಫೇವರ್​ ಆಗಿವೆ. ಹೀಗಾಗಿ ರವೀಂದ್ರ ಜಡೇಜಾ ಮತ್ತು ಆರ್​. ಅಶ್ವಿನ್​ ಇಬ್ಬರನ್ನೂ ಕಣಕ್ಕಿಳಿಸುವುದು ಬೆಸ್ಟ್​ ಎಂದಿದ್ದಾರೆ.

ಕ್ಯಾಪ್ಟನ್​​ ರೋಹಿತ್​ ಶರ್ಮಾ, ಕೋಚ್​ ರಾಹುಲ್​ ದ್ರಾವಿಡ್​​ ಅಶ್ವಿನ್​ ಮತ್ತು ಜಡೇಜಾ ಇಬ್ಬರಲ್ಲಿ ಒಬ್ಬರನ್ನು ಟೀಂ ಇಂಡಿಯಾ ಪರ ಆಡಿಸಬಹುದು. ಇದು ತಪ್ಪು ನಿರ್ಧಾರ. ಕಾರಣ ಎಲ್ಲಾ ಮೈದಾನಗಳು ಸ್ಪಿನ್ನರ್ಸ್​ಗೆ ಫೇವರ್​ ಆಗಿವೆ. ಹೀಗಾಗಿ ಜಡೇಜಾ, ಅಶ್ವಿನ್​ ಇಬ್ಬರನ್ನು ಆಡಿಸಿ. ಜತೆಗೆ ಟೀಂ ಇಂಡಿಯಾದ ಫಾಸ್ಟ್​ ಬೌಲರ್​ ಶಾರ್ದೂಲ್​​ ಠಾಕೂರ್​​​ ಕಣಕ್ಕಿಳಿದರೆ ಒಳ್ಳೆಯದು. ಇದು ನನ್ನ ಸಲಹೆ, ಉಳಿದದ್ದು ಟೀಂ ಇಂಡಿಯಾ ಸೆಲೆಕ್ಟರ್ಸ್​​ ನಿರ್ಧಾರ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟಿ20 ವಿಶ್ವಕಪ್​​.. ದ್ರಾವಿಡ್​​, ರೋಹಿತ್​ ಶರ್ಮಾಗೆ ವಾರ್ನಿಂಗ್​ ಕೊಟ್ಟ ದಿನೇಶ್​ ಕಾರ್ತಿಕ್​

https://newsfirstlive.com/wp-content/uploads/2024/01/Rohit_Dinesh.jpg

Load More