newsfirstkannada.com

ನನ್ನ ಮಗಳ ಮಾತಾಡಿಸಿ ಬುದ್ದಿ.. ನೇಹಾ ತಂದೆ ದುಃಖಕ್ಕೆ ಕಣ್ಣೀರಿಟ್ಟ ದಿಂಗಾಲೇಶ್ವರ ಸ್ವಾಮೀಜಿ- ವಿಡಿಯೋ

Share :

Published April 19, 2024 at 2:30pm

Update April 19, 2024 at 2:37pm

    ನೇಹಾ ಅಂತಿಮ ದರ್ಶನಕ್ಕೆ ಮೂರು ಸಾವಿರ ಮಠದ ಸ್ವಾಮೀಜಿ ಆಗಮನ

    ದಿಂಗಾಲೇಶ್ವರ ಸ್ವಾಮೀಜಿಯ ಅಪ್ಟಟ ಶಿಷ್ಯೆಯಾಗಿದ್ದ ನೇಹಾ ಹಿರೇಮಠ

    ಹುಬ್ಬಳ್ಳಿ ವೀರಶೈವ ಲಿಂಗಾಯತ ರುದ್ರಭೂಮಿಯಲ್ಲಿ ಅಂತಿಮ ವಿಧಿವಿಧಾನ

ಹುಬ್ಬಳ್ಳಿ: ಕಾಲೇಜು ಕ್ಯಾಂಪಸ್‌ನಲ್ಲಿ ಕಾರ್ಪೊರೇಟರ್ ಮಗಳು ನೇಹಾ ಹಿರೇಮಠ್ ಅವರ ಬರ್ಬರ ಹತ್ಯೆಯಾಗಿದ್ದು, ಹುಬ್ಬಳ್ಳಿಯಲ್ಲಿ ಆಕ್ರೋಶದ ಕಟ್ಟೆ ಹೊಡೆದಿದೆ. ನೇಹಾ ಹಿರೇಮಠ್ ಅವರ ಅಂತಿಮ ಯಾತ್ರೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ನೇಹಾ ಅವರ ಅಂತಿಮ ದರ್ಶನಕ್ಕೆ ಮೂರು ಸಾವಿರ ಮಠದ ಸ್ವಾಮೀಜಿ ಆಗಮಿಸಿ ಸಾಂತ್ವನ ಹೇಳಿದರು. ಮೂರು ಸಾವಿರ ಮಠದ ಗುರು ಸಿದ್ದರಾಜಯೋಗಿಂದ್ರ ಸ್ವಾಮೀಜಿಗಳ ಎದುರು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.

ನೇಹಾ ಅಂತ್ಯ ಸಂಸ್ಕಾರದ ವೇಳೆ ದಿಂಗಾಲೇಶ್ವರ ಸ್ವಾಮೀಜಿ ಕೂಡ ಆಗಮಿಸಿದ್ದು, ನೇಹಾ ತಂದೆಯ ಸಮಾಧಾನ ಹೇಳುವ ಪ್ರಯತ್ನ ಮಾಡಿದರು. ಆದರೆ, ನೇಹಾ ತಂದೆ ನನ್ನ ಮಗಳ ಮಾತಾಡಿಸಿ ಬುದ್ದಿ ಎಂದು ಗೋಳಾಡಿದರು. ತಂದೆಯ ಗೋಳು ಕೇಳಿ ದಿಂಗಾಲೇಶ್ವರ ಸ್ವಾಮೀಜಿಯೇ ಗಳಗಳನೇ ಕಣ್ಣೀರಿಟ್ಟರು.

ಆಕೆ ನನ್ನ ಮಗಳಲ್ಲ ಬುದ್ದಿ ಫ್ರೆಂಡ್ ರೀತಿ ಇದ್ದಳು. ನಮ್ಮ ಮನೆಗೆ ಮಹಾಲಕ್ಷ್ಮೀ ಆಕೆ. ಮಗಳಿಗೆ ಅನ್ಯಾಯ ಆಗಿದೆ. ಮಗಳ ಆತ್ಮಕ್ಕೆ ಶಾಂತಿ ಸಿಗಬೇಕು ಬುದ್ದಿ. ನೀವೇ ಹೋರಾಟ ಮಾಡಬೇಕು ಎಂದು ನೇಹಾಳ ತಂದೆ ಕಣ್ಣೀರಿಟ್ಟರು. ಕೊಲೆಯಾದ ನೇಹಾ, ದಿಂಗಾಲೇಶ್ವರ ಸ್ವಾಮೀಜಿಯ ಅಪ್ಟಟ ಶಿಷ್ಯೆಯಾಗಿದ್ದರು. ಹೀಗಾಗಿ ನೇಹಾ ನೆನೆದು ದಿಂಗಾಲೇಶ್ವರ ಸ್ವಾಮೀಜಿ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.

ಇದನ್ನೂ ಓದಿ: ಶಿಕ್ಷಕರ ಮಗ ಫಯಾಜ್; ನೇಹಾ ಹಿರೇಮಠ್​​ರನ್ನು​​ ಕೊಂದ ಆರೋಪಿ ಯಾರು?

ನೇಹಾಳ ಅಂತಿಮ ಯಾತ್ರೆಯನ್ನು ಬಸವ ನಗರದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿಸಲಾಯಿತು. ನಗರದ ಮಂಟೂರು ರಸ್ತೆಯಲ್ಲಿರುವ ವೀರಶೈವ ಲಿಂಗಾಯತ ರುದ್ರಭೂಮಿಯಲ್ಲಿ ಅಂತಿಮ ವಿಧಿವಿಧಾನ ನೆರವೇರಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನನ್ನ ಮಗಳ ಮಾತಾಡಿಸಿ ಬುದ್ದಿ.. ನೇಹಾ ತಂದೆ ದುಃಖಕ್ಕೆ ಕಣ್ಣೀರಿಟ್ಟ ದಿಂಗಾಲೇಶ್ವರ ಸ್ವಾಮೀಜಿ- ವಿಡಿಯೋ

https://newsfirstlive.com/wp-content/uploads/2024/04/Hubbali-Swamiji-Crying.jpg

Load More