/newsfirstlive-kannada/media/post_attachments/wp-content/uploads/2025/04/dir.jpg)
ಅಮೆರಿಕಾದ ಡಲ್ಲಾಸ್ ಮೂಲದ ಕೊಲೊಸಲ್ ಬಯೋಸೈನ್ಸಸ್ ಇಂಕ್ ಜೈವಿಕ ತಂತ್ರಜ್ಞಾನ ಸಂಸ್ಥೆ ಹೊಸ ದಾಖಲೆ ಬರೆದಿದೆ. ಇಲ್ಲಿನ ವಿಜ್ಞಾನಿಗಳು ಸರಿ ಸುಮಾರು 12 ಸಾವಿರ ವರ್ಷಗಳ ಹಿಂದೆ ಭೂಮಿ ಮೇಲೆ ಜೀವಿಸಿದ್ದ ಪ್ರಾಣಿಯೊಂದನ್ನ DNA ಮೂಲಕ CRISPR ತಂತ್ರಜ್ಞಾನವನ್ನು ಬಳಸಿಕೊಂಡು ಮರು ಸೃಷ್ಟಿ ಮಾಡಿದ್ದಾರೆ.
ಗೇಮ್ ಆಫ್ ಥ್ರೋನ್ನ ಅದೇ ತೋಳಗಳ ಸೃಷ್ಟಿಸಿದ್ರಾ?
ಸೋಮವಾರ ಕೊಲೆಸಲ್ ಬಯೋಸೈನ್ಸಸ್ ಇಂಕ್ ತನ್ನ ಹೊಸ ಆವಿಷ್ಕಾರದ ಬಗ್ಗೆ ಅಧಿಕೃತವಾಗಿ ಹೇಳಿಕೊಂಡಿದೆ. ನೀವು ಗೇಮ್ ಆಫ್ ಥ್ರೋನ್ಸ್ ವೆಬ್ ಸೀರಿಸ್ ನೋಡಿದ್ರೆ ಅದ್ರಲ್ಲಿ ಅದ್ಭುತ ಅನಿಸೋ ಹಿಮಯುಗದ ತೋಳವನ್ನ ನೀಡಬಹುದು. ಅದುವೇ ಡೈರ್ ತೋಳ. ಹಿಮಯುಗದ ಕಾಡು ಕೋಣ, ಕುದುರೆಗಳನ್ನೇ ಬೇಟೆ ಆಡ್ತಿತ್ತು ಈ ಡೈರ್ ತೋಳ. ಬಾಹುಬಲಿಯಂಥಾ ಬಾಹುಗಳು, ಶಕ್ತಿಶಾಲಿ ಕಾಲುಗಳು, ದೊಡ್ಡ ದವಡೆಯ ಈ ಡೈರ್ ತೋಳಗಳನ್ನು ಕ್ರೂರ ಮೃಗದಷ್ಟೇ ಶಕ್ತಿ ಹೊಂದಿಸಿದ್ದವು. 12 ಸಾವಿರ ವರ್ಷಗಳ ಹಿಂದೆ ಇದ್ದ ಇದೇ ಡೈರ್ ತೋಳಗಳನ್ನ ಇದೀಗ ಕೊಲೆಸಲ್ ಬಯೋಸೈನ್ಸಸ್ ಇಂಕ್ ಮರು ಸೃಷ್ಟಿಸಿದೆ. ಇದೀಗ ಮೂರು ಡೈರ್ ತೋಳಗಳನ್ನು ಸೃಷ್ಟಿಸಿರುವುದಾಗಿ ಹೇಳಿಕೊಂಡಿದೆ.
ಎರಡು ಗಂಡು.. ಒಂದು ಹೆಣ್ಣು ತೋಳದ ಹೆಸರು ಏನು?
36 ಕೆಜಿ ತೂಕದ ಮೂರು ಡೈರ್ ತೋಳಗಳಿಗೆ ರೆಮುಸ್, ರೊಮುಲುಸ್ ಹಾಗೂ ಖಲೀಸಿ ಅನ್ನೋ ಹೆಸರು ಇಡಲಾಗಿದೆ. ಈ ಪೈಕಿ ರೆಮುಸ್, ರೊಮುಲುಸ್ ಗಂಡು ತೋಳಗಳಾಗಿದ್ದು, ಖಲೀಸಿ ಹೆಣ್ಣು ತೋಳವಾಗಿದೆ. ಈ ಹೆಸರುಗಳೂ ಸಹ ಗೇಮ್ ಆಫ್ ಥ್ರೋನ್ಸ್ ಸೀರಿಸ್ನ ಪ್ರಮುಖ ಪಾತ್ರಧಾರಿಗಳ ಹೆಸರೇ ಆಗಿದೆ. ಅಂದ್ಹಾಗೆ ಗಂಡು ತೋಳಗಳು ಅವಳಿ ಜವಳಿ ಆಗಿದ್ದು ಅಕ್ಟೋಬರ್ 1, 2024ರಂದು ಮರು ಸೃಷ್ಟಿಸಲಾಗಿದೆ. ಇನ್ನು ಹೆಣ್ಣು ತೋಳ ಖಲೀಸಿಯನ್ನು ಜನವರಿ 30, 2025ರಂದು ಮರು ಸೃಷ್ಟಿಸಲಾಗಿದೆ.
ಎಲ್ಲಿ ಬೆಳೀತಿವೆ? ಏನು ಆಹಾರ ತಿನ್ನುತ್ತವೆ ಡೈರ್ ತೋಳಗಳು?
ಅಮೆರಿಕಾದ ನಿಗೂಢ ತಾಣವೊಂದರಲ್ಲಿ ಈ ಡೈರ್ ತೋಳಗಳನ್ನು ಸಾಕಲಾಗುತ್ತಿದೆ. ದನ, ಜಿಂಕೆ ಹಾಗೂ ಕುದುರೆ ಮಾಂಸವನ್ನು ಡೈರ್ ತೋಳಗಳಿಗೆ ನೀಡಲಾಗುತ್ತಿದೆ. ಇವು ವಯಸ್ಕವಾಗುವ ಹೊತ್ತಿಗೆ ಆರೋಗ್ಯವಂತ ಮನುಷ್ಯನಂತೆ 70 ಕೆಜಿ ತೂಗಬಹುದು ಎಂದು ಅಂದಾಜಿಸಲಾಗುತ್ತಿದೆ. ಈ ಪ್ರೊಜೆಕ್ಟ್ ಸಕ್ಸಸ್ ಆದ್ರೆ ಹಿಮಯುಗದ ಕಾಲದ ಮತ್ತಷ್ಟು ಪ್ರಾಣಿಗಳನ್ನು ಮರು ಸೃಷ್ಟಿಸುವ ಕನಸು ಕಾಣುತ್ತಿದೆ ಕೊಲೆಸಲ್ ಬಯೋಟೆಕ್ ಸಂಸ್ಥೆ.
ಇದನ್ನೂ ಓದಿ: ಸಿನಿಮಾಗಾಗಿ BMW ಕಾರು ಮಾರಾಟ.. ಸ್ಯಾಂಡಲ್‌ವುಡ್ ನಟ ಅಜಯ್ ರಾವ್ ಪುತ್ರಿ ಕಣ್ಣೀರು
ಜುರಾಸಿಕ್ ಪಾರ್ಕ್ನ ಪ್ರಾಣಿಗಳನ್ನ ಸೃಷ್ಟಿಸುತ್ತಾ ಈ ಸಂಸ್ಥೆ?
ಟೈಮ್ ಮ್ಯಾಗಜೀನ್ ತನ್ನ ಮುಖ ಪುಟದಲ್ಲಿ ಇದೇ ಡೈರ್ ತೋಳಗಳ ಫೋಟೋ ಪ್ರಕಟಿಸಿದೆ. ಇದೇ ಫೋಟೋವನ್ನು ಉದ್ಯಮಿ ಎಲನ್ ಮಸ್ಕ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ದಯಮಾಡಿ ಒಂದು ಹಿಮಯುಗದ ದೈತ್ಯ ಸಾಕು ಆನೆಯನ್ನು ಮರು ಸೃಷ್ಟಿಸಿ ಅಂತ ಪೋಸ್ಟ್ ಮಾಡಿದ್ದಾರೆ. ಡೈರ್ ತೋಳಗಳ ಮರು ಸೃಷ್ಟಿ ಪ್ರೋಜೆಕ್ಟ್ ಸಕ್ಸಸ್ ಆದ್ರೆ ಇದೇ ಕೊಲೆಸಲ್ ಬಯೋಟೆಕ್ ಸಂಸ್ಥೆ ಜುರಾಸಿಕ್ ಪಾರ್ಕ್ನ ಬಹುಪಾಲು ಪ್ರಾಣಿಗಳನ್ನು ಮರು ಸೃಷ್ಟಿಸೋ ಉತ್ಸಾಹದಲ್ಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ