50 ಲಕ್ಷ ಕಮಿಷನ್ ಆರೋಪ.. ಮಾರ್ಟಿನ್ ಚಿತ್ರದಲ್ಲಿ ಅಸಲಿಗೆ ಆಗಿದ್ದೇನು? ಕೊನೆಗೂ ಮಾಹಿತಿ ಬಿಚ್ಚಿಟ್ಟ ಅರ್ಜುನ್!

author-image
Veena Gangani
Updated On
50 ಲಕ್ಷ ಕಮಿಷನ್ ಆರೋಪ.. ಮಾರ್ಟಿನ್ ಚಿತ್ರದಲ್ಲಿ ಅಸಲಿಗೆ ಆಗಿದ್ದೇನು? ಕೊನೆಗೂ ಮಾಹಿತಿ ಬಿಚ್ಚಿಟ್ಟ ಅರ್ಜುನ್!
Advertisment
  • ಬಹುನೀರಿಕ್ಷಿತ ಮಾರ್ಟಿನ್ ಸಿನಿಮಾ ನಿರ್ದೇಶಕರ ಮೇಲೆ ಗಂಭೀರ ಆರೋಪ
  • ನಿರ್ದೇಶಕ ಸತ್ಯಾ ರೆಡ್ಡಿ ನನ್ನ ಜೊತೆ ನಮ್ಮ ಟೀಂ ಮೇಲೆ ಆರೋಪ ಮಾಡಿದ್ದಾರೆ
  • ಪೊಲೀಸ್​ ಠಾಣೆ ಮೆಟ್ಟಿಲೇರಿದ ಧ್ರುವ ಸರ್ಜಾ ಚಿತ್ರದ ‘ಮಾರ್ಟಿನ್​’ ನಿರ್ಮಾಪಕ

ಆ್ಯಕ್ಷನ್​ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ‘ಮಾರ್ಟಿನ್’ ಸಿನಿಮಾ ತೆರೆಗೆ ಬರಲು ಭರ್ಜರಿ ತಯಾರಿ ನಡೆಸಲಾಗುತ್ತಿದೆ. ಆದರೆ, ಬಿಡುಗಡೆಗೆ ಮುನ್ನ ನಿರ್ದೇಶಕ ಎ.ಪಿ ಅರ್ಜುನ್‌ ಅವರಿಗೆ 50 ಲಕ್ಷ ರೂಪಾಯಿ ಕಮಿಷನ್ ನೀಡಿರೋ ಗಂಭೀರ ಆರೋಪ ಕೇಳಿ ಬಂದಿದೆ. ಹೀಗಾಗಿ ಮಾರ್ಟಿನ್‌ ಚಿತ್ರದ ನಿರ್ಮಾಪಕ ಪೊಲೀಸ್​​ ಠಾಣೆ ಮೆಟ್ಟಿಲೇರಿದ್ದಾರೆ. ಬರೋಬ್ಬರಿ 2.5 ಕೋಟಿ ರೂಪಾಯಿ ಮೋಸವಾಗಿದೆ ಎಂದು ಡಿಜಿಟೆಲ್‌ ಟೆರೆನ್ ನಿರ್ದೇಶಕರನ್ನು ದೂರಿದ್ದಾರೆ.

ಇದನ್ನೂ ಓದಿ:ಧ್ರುವ ಸರ್ಜಾ ‘ಮಾರ್ಟಿನ್​’ ತಂಡಕ್ಕೆ ಮಹಾಮೋಸ? ನಿರ್ದೇಶಕ ಅರ್ಜುನ್​ ಮೇಲೆ ಕಮೀಷನ್​ ಆರೋಪ!

publive-image

ಇನ್ನು ಇದೇ ವಿಚಾರವಾಗಿ ನಿರ್ದೇಶಕ ಎ.ಪಿ ಅರ್ಜುನ್, ವಕೀಲ ಶಂಕರಪ್ಪ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದರು. ನನಗೂ ಮಾಧ್ಯಮದ ಮೂಲಕವೇ ಗೊತ್ತಾಯಿತು. 50 ಲಕ್ಷ, 75 ಲಕ್ಷ ಕಮಿಷನ್ ತಗೊಂಡಿದ್ದೀನಿ ಅಂತಾ. ನನ್ನ ಕಮಿಷನ್ ಡೈರೆಕ್ಟರ್ ಅಂತೆಲ್ಲಾ ಹೇಳಿದ್ರು. ಸಿ.ಜಿ ಮೋಸದ ವಿಚಾರದಲ್ಲಿ ಇಬ್ಬರ ಮೇಲೆ ಆರೋಪ ಮಾಡಲಾಗಿದೆ. ಸತ್ಯ ರೆಡ್ಡಿ, ಸುನೀಲ್ ರೆಡ್ಡಿ ಆರೋಪಿಗಳು. ಆ ಎಫ್​​ಐಆರ್​ನಲ್ಲಿ ನನ್ನ ಹೆಸರು ಇರಲಿಲ್ಲ. ನನ್ನ ಮೇಲೆ ಸುಮ್ಮನೆ ಆರೋಪ ಮಾಡಿದ್ದಾರೆ.

ಈ ವಿಚಾರವಾಗಿ ಪೊಲೀಸರು ನನ್ನ ಕರೆಸಿ ವಿಚಾರಣೆ ನಡೆಸಿದ್ರು. ಕ್ಲೈಮ್ಯಾಕ್ಸ್ ಸಿ.ಜಿ ಕೆಲಸವನ್ನು ಅವರಿಗೆ ಕೊಡೋಕೆ ಮುಂದಾಗಿದ್ವಿ. ಕೆಲಸ ಚೆನ್ನಾಗಿ ಮಾಡ್ತಾನೆ ಅಂತ ಫುಲ್ ಸಿನಿಮಾ ಕೊಟ್ಟಿದ್ವಿ. ಕಾಟೇರ ಹಾಗೂ ರವಿಶಂಕರ್ ನಿರ್ದೇಶನದ ಸುಬ್ರಹ್ಮಣ್ಯ ಸಿನಿಮಾಗೂ ಮೋಸ ಮಾಡಿದ್ದಾನೆ. ಅವರಿಂದಲೂ ದುಡ್ಡು ಪಡೆದು ಓಡಿ ಹೋಗಿದ್ದಾನೆ. ನನಗೂ - ಉದಯ್ ಮೆಹ್ತಾ ಮಧ್ಯೆ ಬೇರೆ ವಿಚಾರಕ್ಕೆ ಮನಃಸ್ತಾಪ ಆಗಿತ್ತು. ಸತ್ಯ ರೆಡ್ಡಿ, ನನ್ನ ಜೊತೆ ನಮ್ಮ ಟೀಂ ಮೇಲೆ ಆರೋಪ ಮಾಡಿದ್ದಾರೆ. ನಾನು ಪೊಲೀಸರ ವಿಚಾರಣೆಗೆ ಸಹಕಾರ ಮಾಡ್ತೀನಿ. ನಾನು ಎ.ಪಿ.ಅರ್ಜುನ್ ಅಂತ ಹೆಸರು ತಗೋಳೋಕೆ ಸಾಕಷ್ಟು ಕಷ್ಟ ಪಟ್ಟಿದ್ದೀನಿ. ನನ್ನ ಹೆಸರು ಹಾಳು ಮಾಡೋಕೆ ಟ್ರೈ ಮಾಡುತ್ತಿದ್ದಾರೆ ಅಂತ ಅರ್ಜುನ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment