ಪಳನಿ ದೇವಸ್ಥಾನದ ಪವಿತ್ರ ಪಂಚಾಮೃತಂ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ ಸಿನಿಮಾ ನಿರ್ದೇಶಕ ಮೋಹನ್​ ಜಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ತಿರುಚ್ಚಿಯ ಸೈಬರ್​ ಕ್ರೈಂ ಪೊಲೀಸರು ನಿರ್ದೇಶಕನನ್ನು ಚೆನ್ನೈನ ಮನೆಯಲ್ಲಿದ್ದಾಗ ಅರೆಸ್ಟ್​ ಮಾಡಿದ್ದಾರೆ.
ಮೋಹನ್​ ಅವರ ಖಾಸಗಿ ಯೂಟ್ಯೂಬ್​ ಚಾನೆಲ್​​ವೊಂದಕ್ಕೆ ಸಂದರ್ಶನ ನೀಡಿದ್ದರು. ಅದರಲ್ಲಿ ಅವರು ಧಾರ್ಮಿಕ ಸೌಹಾರ್ದತೆಗೆ ಧಕ್ಕೆ ತರುವ ಹೇಳಿಕೆಗಳಿವೆ ಎಂದು ಸಮಯಪುರಂ ಮಾರಿಯಮ್ಮನ್​ ದೇವಸ್ಥಾನದಲ್ಲಿ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ವ್ಯವಸ್ಥಾಪಕ ಕವಿ ಅರಸು ಆರೋಪಿಸಿದ್ದರು. ಈ ಕುರಿತು ದೂರು ಕೂಡ ನೀಡಿದ್ದರು.
ಇದನ್ನೂ ಓದಿ: ಬೇಲ್ ಸಿಕ್ಕರು ದರ್ಶನ್ ಗ್ಯಾಂಗ್​ನ ಮೂವರು ಜೈಲಿನಲ್ಲೇ ಇರೋದು ಯಾಕೆ.. ಕಾರಾಗೃಹದಿಂದ ಬಿಡುಗಡೆ ಯಾವಾಗ?
ಡೈರೆಕ್ಟರ್​ ಮೋಹನ್ ಹೇಳಿದ್ದೇನು?
ನಿರ್ದೇಶಕ ಮೋಹನ್ ಅವರು ಪಳನಿ ದೇವಸ್ಥಾನದಲ್ಲಿ ಭಕ್ತರಿಗೆ ನೀಡಲಾಗುವ ಪಂಚಾಮೃತದಲ್ಲಿ ದುರ್ಬಲ ಮಾತ್ರೆ ಬಳಸುತ್ತಾರೆ ಎಂದು ಹೇಳಿಕೆ ನೀಡಿದ್ದರು. ಇದನ್ನು ಗಮನಿಸಿ ಅವರ ಮೇಲೆ ದೂರು ದಾಖಲಾಗಿದೆ. ಈ ಹಿನ್ನೆಲೆ ನಿರ್ದೇಶಕನನ್ನು ಅರೆಸ್ಟ್​ ಮಾಡಲಾಗಿದೆ. ತಿರುಪತಿ ಲಡ್ಡುವಿನಲ್ಲಿ ದನ, ಹಂದಿ ಮತ್ತು ಮೀನಿನ ಎಣ್ಣೆ ಬಳಕೆ ಆರೋಪ ಕೇಳಿ ಬಂದ ಹಿನ್ನೆಲೆ ಡೈರೆಕ್ಟರ್​ ಕೊಟ್ಟ ಈ ಹೇಳಿಕೆಯು ವೈರಲ್​ ಆಗಿದೆ.
ಇದನ್ನೂ ಓದಿ: ಹನಿಮೂನ್‌ನಲ್ಲಿ ತರುಣ್ ಸುಧೀರ್, ಸೋನಲ್ ಮೊಂಥೆರೋ ಜೋಡಿ; ಪ್ರಣಯಪಕ್ಷಿಗಳು ಹೋಗಿದ್ದು ಎಲ್ಲಿಗೆ? VIDEO
ಬಂಧನಕ್ಕೊಳಗಾದ ನಿರ್ದೇಶಕ ಮೋಹನ್ ತಮಿಳಿನಲ್ಲಿ ಕೆಲವು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಬಕಾಸುರನ್​, ರುದ್ರ ತಾಂಡವಮ್​, ದ್ರೌಪತಿ ಸಿನಿಮಾ ನಿರ್ದೇಶಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
ದೇವಸ್ಥಾನದ ಪಂಚಾಮೃತದಲ್ಲಿ ದುರ್ಬಲ ಮಾತ್ರೆ ಬಳಕೆ ಮಾಡ್ತಾರೆ ಎಂಬ ಹೇಳಿಕೆ.. ಸಿನಿಮಾ ಡೈರೆಕ್ಟರ್ ಅರೆಸ್ಟ್

LATEST UPDATES