ಪವಿತ್ರ ಪಂಚಾಮೃತಂ ಕುರಿತು ಅವಹೇಳನಕಾರಿ ಹೇಳಿಕೆ
ನಿರ್ದೇಶಕನನ್ನು ಮನೆಯಿಂದಲೇ ಅರೆಸ್ಟ್ ಮಾಡಿದ ಪೊಲೀಸರು
ಪಂಚಾಮೃತದಲ್ಲಿ ದುರ್ಬಲ ಮಾತ್ರೆ ಬಳಸುತ್ತಾರೆ ಎಂದಿದ್ದ ಡೈರೆಕ್ಟರ್
ಪಳನಿ ದೇವಸ್ಥಾನದ ಪವಿತ್ರ ಪಂಚಾಮೃತಂ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ ಸಿನಿಮಾ ನಿರ್ದೇಶಕ ಮೋಹನ್ ಜಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ತಿರುಚ್ಚಿಯ ಸೈಬರ್ ಕ್ರೈಂ ಪೊಲೀಸರು ನಿರ್ದೇಶಕನನ್ನು ಚೆನ್ನೈನ ಮನೆಯಲ್ಲಿದ್ದಾಗ ಅರೆಸ್ಟ್ ಮಾಡಿದ್ದಾರೆ.
ಮೋಹನ್ ಅವರ ಖಾಸಗಿ ಯೂಟ್ಯೂಬ್ ಚಾನೆಲ್ವೊಂದಕ್ಕೆ ಸಂದರ್ಶನ ನೀಡಿದ್ದರು. ಅದರಲ್ಲಿ ಅವರು ಧಾರ್ಮಿಕ ಸೌಹಾರ್ದತೆಗೆ ಧಕ್ಕೆ ತರುವ ಹೇಳಿಕೆಗಳಿವೆ ಎಂದು ಸಮಯಪುರಂ ಮಾರಿಯಮ್ಮನ್ ದೇವಸ್ಥಾನದಲ್ಲಿ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ವ್ಯವಸ್ಥಾಪಕ ಕವಿ ಅರಸು ಆರೋಪಿಸಿದ್ದರು. ಈ ಕುರಿತು ದೂರು ಕೂಡ ನೀಡಿದ್ದರು.
ಇದನ್ನೂ ಓದಿ: ಬೇಲ್ ಸಿಕ್ಕರು ದರ್ಶನ್ ಗ್ಯಾಂಗ್ನ ಮೂವರು ಜೈಲಿನಲ್ಲೇ ಇರೋದು ಯಾಕೆ.. ಕಾರಾಗೃಹದಿಂದ ಬಿಡುಗಡೆ ಯಾವಾಗ?
ಡೈರೆಕ್ಟರ್ ಮೋಹನ್ ಹೇಳಿದ್ದೇನು?
ನಿರ್ದೇಶಕ ಮೋಹನ್ ಅವರು ಪಳನಿ ದೇವಸ್ಥಾನದಲ್ಲಿ ಭಕ್ತರಿಗೆ ನೀಡಲಾಗುವ ಪಂಚಾಮೃತದಲ್ಲಿ ದುರ್ಬಲ ಮಾತ್ರೆ ಬಳಸುತ್ತಾರೆ ಎಂದು ಹೇಳಿಕೆ ನೀಡಿದ್ದರು. ಇದನ್ನು ಗಮನಿಸಿ ಅವರ ಮೇಲೆ ದೂರು ದಾಖಲಾಗಿದೆ. ಈ ಹಿನ್ನೆಲೆ ನಿರ್ದೇಶಕನನ್ನು ಅರೆಸ್ಟ್ ಮಾಡಲಾಗಿದೆ. ತಿರುಪತಿ ಲಡ್ಡುವಿನಲ್ಲಿ ದನ, ಹಂದಿ ಮತ್ತು ಮೀನಿನ ಎಣ್ಣೆ ಬಳಕೆ ಆರೋಪ ಕೇಳಿ ಬಂದ ಹಿನ್ನೆಲೆ ಡೈರೆಕ್ಟರ್ ಕೊಟ್ಟ ಈ ಹೇಳಿಕೆಯು ವೈರಲ್ ಆಗಿದೆ.
ಇದನ್ನೂ ಓದಿ: ಹನಿಮೂನ್‌ನಲ್ಲಿ ತರುಣ್ ಸುಧೀರ್, ಸೋನಲ್ ಮೊಂಥೆರೋ ಜೋಡಿ; ಪ್ರಣಯಪಕ್ಷಿಗಳು ಹೋಗಿದ್ದು ಎಲ್ಲಿಗೆ? VIDEO
ಬಂಧನಕ್ಕೊಳಗಾದ ನಿರ್ದೇಶಕ ಮೋಹನ್ ತಮಿಳಿನಲ್ಲಿ ಕೆಲವು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಬಕಾಸುರನ್, ರುದ್ರ ತಾಂಡವಮ್, ದ್ರೌಪತಿ ಸಿನಿಮಾ ನಿರ್ದೇಶಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ