ಮೊನ್ನೆಯಷ್ಟೇ ಮಾತಾಡಿದ್ದೆ, ಬಾಲ್ಯದಿಂದಲೂ ಒಟ್ಟಿಗೆ ಇದ್ದೇವು -ದ್ವಾರಕೀಶ್​ ನೆನೆದು ಭಾರ್ಗವ ಕಣ್ಣೀರು

author-image
Ganesh
Updated On
ಮೊನ್ನೆಯಷ್ಟೇ ಮಾತಾಡಿದ್ದೆ, ಬಾಲ್ಯದಿಂದಲೂ ಒಟ್ಟಿಗೆ ಇದ್ದೇವು -ದ್ವಾರಕೀಶ್​ ನೆನೆದು ಭಾರ್ಗವ ಕಣ್ಣೀರು
Advertisment
  • ಕನ್ನಡದ ಹಿರಿಯ ನಟ ದ್ವಾರಕೀಶ್​ ಇನ್ನು ನೆನಪು ಮಾತ್ರ
  • ‘ಇಷ್ಟು ಬೇಗ ನಮ್ಮನ್ನು ಬಿಟ್ಟು ಹೋಗ್ತಾನೆ ಅಂದ್ಕೊಂಡಿರಲಿಲ್ಲ’
  • ‘ದ್ವಾರಕೀಶ್​ ನನಗೆ ಅನ್ನದಾತ, ನಿರ್ದೇಶನ ಹೇಳಿಕೊಟ್ಟಿದ್ದೇ ಅವರು’

ಕನ್ನಡದ ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್​ ಅವರು ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ತಮ್ಮ 81ನೇ ವರ್ಷದಲ್ಲಿ ಬೆಂಗಳೂರಿನ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಇನ್ನು, ದ್ವಾರಕೀಶ್​ ನೀಧನಕ್ಕೆ ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ, ದ್ವಾರಕೀಶ್ ಅವರ ಸಂಬಂಧಿ ಭಾರ್ಗವ ಕಂಬನಿ ಮಿಡಿದಿದ್ದಾರೆ.

ನ್ಯೂಸ್​ಫಸ್ಟ್​ ಜೊತೆ ಮಾತನಾಡಿದ ಅವರು.. ದ್ವಾರಕೀಶ್​ ಅವರು ನಿಧನರಾಗಿದ್ದಾರೆ ಎಂಬ ಸುದ್ದಿಯನ್ನು ಈಗಷ್ಟೇ ಕೇಳಿದೆ. ಈ ಸುದ್ದಿ ಕೇಳೋದಕ್ಕೆ ನನಗೆ ಆಘಾತ ಆಗುತ್ತಿದೆ. ಮೊನ್ನೆಯಷ್ಟೇ ನಾನು ಅವರ ಜೊತೆ ಮಾತನಾಡಿದ್ದೆ. ಚೆನ್ನಾಗಿ ಇದ್ದೇನೆ, ನೀನು ಹೇಗಿದ್ದೀಯಾ ಎಂದು ಕೇಳಿದ್ದರು. ಇಂದು ನೋಡಿದ್ರೆ ನಮ್ಮಿಂದ ದೂರ ಹೋಗಿದ್ದಾನೆ, ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ಆ ಭಗವಂತ ಧೈರ್ಯ ನೀಡಲಿ ಎಂದು ಆಶಿಸಿದರು.

ಇದನ್ನೂ ಓದಿ:ಕನ್ನಡ ಹಿರಿಯ ನಟ ದ್ವಾರಕೀಶ್​ ಇನ್ನಿಲ್ಲ

publive-image

ದ್ವಾರಕೀಶ್ ಮತ್ತು ನಾನು ಒಟ್ಟಿಗೆ ಬೆಳದವರು. ಚಿಕ್ಕ ವಯಸ್ಸಿನಿಂದನೇ ಒಟ್ಟಿಗೆ ಇದ್ದೇವು. ನಾನು ಓದಿದ ಕಾಲೇಜಿನಲ್ಲಿಯೇ ಅವರು ಓದಿದ್ದರು. ನಾನು ಅವರ ಮನೆಯಲ್ಲೇ ಇರುತ್ತಿದ್ದೆ. ಒಳ್ಳೆಯ ಸಂಬಂಧ ನಮ್ಮಿಬ್ಬರ ಮಧ್ಯೆ ಇತ್ತು. ಅವರು ನನ್ನ ಹೆಂಡತಿಯ ಅಣ್ಣ. ಇಂದು ಒಂದೊಳ್ಳೆ ಬಾಂಧವ್ಯ ಕಳಚಿ ಹೋಗಿದೆ. ತುಂಬಾ ಬೇಸರ ಆಗುತ್ತಿದೆ. ಮೊನ್ನೆಯಷ್ಟೇ ನಾನು ಅವರ ಜೊತೆ ಮಾತನಾಡಿದ್ದೆ. ನಾನು ಆರಾಮಿದ್ದೇನೆ, ಸ್ವಲ್ಪ ಉಸಿರಾಟದ ತೊಂದರೆ ಎಂದಿದ್ದರು. ನಾನು ಆಸ್ಪತ್ರೆಗೆ ಹೋಗುವಂತೆ ಕೇಳಿದ್ದೆ. ಅದಕ್ಕೆ ಏನೂ ಇಲ್ಲ ಕಣೋ ಎಂದಿದ್ದರು. ಅವರ ತಂಗಿಯ ಜೊತೆಗೂ ಮಾತನಾಡಿದ್ದರು ಎಂದು ದ್ವಾರಕೀಶ್ ಜೊತೆಗೆ ಮಾತನಾಡಿದ್ದನ್ನು ಸ್ಮರಿಸಿಕೊಂಡರು.

ಇದನ್ನೂ ಓದಿ:ಇಂಜಿನಿಯರಿಂಗ್ ಮುಗಿಸಿದ್ದ ದ್ವಾರಕೀಶ್ ಚಿತ್ರರಂಗಕ್ಕೆ ಎಂಟ್ರಿಯಾಗಿದ್ದೇಗೆ?

publive-image

ಇಷ್ಟು ಬೇಗ ಅವರು ನಮ್ಮನ್ನು ಬಿಟ್ಟು ಹೋಗುತ್ತಾ ಅಂದ್ಕೊಡಿರಲಿಲ್ಲ. ನಾವಿಬ್ಬರು ಒಟ್ಟಿಗೆ ಕೆಲಸ ಮಾಡಿದ್ದೇವೆ. ದ್ವಾರಕೀಶ್​​ ನನಗೆ ಅನ್ನದಾತ ಆಗಿದ್ದರು. ಮೊದಲ ನಿರ್ದೇಶನ ಕೊಟ್ಟಿದ್ದೇ ಅವರು. ನನಗೆ ಹೇಗೆ ನಿರ್ದೇಶ ಮಾಡಬೇಕು ಎಂದು ಹೇಳಿಕೊಟ್ಟಿದ್ದೇ ಅವರು. ನಾನು ಯಾವತ್ತಿಗೂ ಚಿರಋಣಿ ಆಗಿರುತ್ತೇನೆ. ಸೋಲು ಮತ್ತು ಗೆಲುವು ಎರಡನ್ನೂ ಒಟ್ಟಿಗೆ ಕಂಡವರು. ಸೋಲಿನಿಂದಲೇ ಅವರು ಯಶಸ್ವಿನ ಮೆಟ್ಟಿಲನ್ನು ಹತ್ತಿದವರು ಎಂದು ಸ್ಮರಿಸಿಕೊಂಡರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment