ಗುರುಪ್ರಸಾದ್​ ಆತ್ಮ*ಹತ್ಯೆ ಹಿನ್ನೆಲೆ; ಅಪಾರ್ಟ್​ಮೆಂಟ್ ಸೀಜ್ ಮಾಡಿದ ಪೊಲೀಸರು

author-image
Gopal Kulkarni
Updated On
ಗುರುಪ್ರಸಾದ್​ ಆತ್ಮ*ಹತ್ಯೆ ಹಿನ್ನೆಲೆ; ಅಪಾರ್ಟ್​ಮೆಂಟ್ ಸೀಜ್ ಮಾಡಿದ ಪೊಲೀಸರು
Advertisment
  • ಗುರುಪ್ರಸಾದ್ ಆತ್ಮ*ಹತ್ಯೆಗೆ ಶರಣಾದ ಅಪಾರ್ಟ್​ಮೆಂಟ್ ಸೀಜ್
  • ಮಾದಹನಾಯಕನಹಳ್ಳಿ ಪೊಲೀಸರಿಂದ 27011 ಫ್ಲ್ಯಾಟ್ ಸೀಜ್
  • ಕುಟುಂಬಸ್ಥರು ಬಂದು ಮೃತ*ದೇಹವನ್ನ ಗುರುತು ಪತ್ತೆ ಹಚ್ಚಬೇಕು

ನಿರ್ದೇಶಕ, ನಟ, ಬರಹಗಾರ ಮಠ ಖ್ಯಾತಿಯ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿದ್ದು ಈಗ ಎಲ್ಲರಲ್ಲೂ ಅಚ್ಚರಿಯನ್ನುಂಟು ಮಾಡಿದೆ. ಗುರುಪ್ರಸಾದ್​​ರನ್ನು ಹತ್ತಿರದಿಂದ ಬಲ್ಲವರು ಗುರುಪ್ರಸಾದ್ ಆತ್ಮ*ಹತ್ಯೆ ಮಾಡಿಕೊಳ್ಳುವಷ್ಟು ಸೂಕ್ಷ್ಮ ಮನಸ್ಸಿನವರು ಆಗಿರಲಿಲ್ಲ ಎಂದೇ ಹೇಳುತ್ತಿದ್ದಾರೆ. ಇದರಾಚೆಯೂ ಇಂತಹ ದುರಂತವೊಂದು ನಡೆದು ಹೋಗಿದೆ.

ಇದನ್ನೂ ಓದಿ:ಹುಟ್ಟುಹಬ್ಬಕ್ಕೂ ಮೊದಲೇ ಜೀವ ಕಳೆದುಕೊಂಡ ಸ್ಯಾಂಡಲ್​ವುಡ್ ನಿರ್ದೇಶಕ ಗುರುಪ್ರಸಾದ್

ಸದ್ಯ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾದ ಅಪಾರ್ಟ್​ಮೆಂಟ್​​ನ್ನು ಪೊಲೀಸರು ಸೀಜ್ ಮಾಡಲಾಗಿದೆ. ಮಾದಹನಾಯಕನಹಳ್ಳಿ ಪೊಲೀಸರಿಂದ ಫ್ಲ್ಯಾಟ್​ ನಂಬರ್ 27011ನ್ನು ಸೀಜ್ ಮಾಡಲಾಗಿದೆ. ಪೊಲೀಸರು ಇನ್ನೂ ಹಲವು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಾಗಿದ್ದು ಆ ಹಿನ್ನೆಲೆ ಅಪಾರ್ಟ್​ಮೆಂಟ್ ಸೀಜ್ ಮಾಡಲಾಗಿದ್ದು. ಕುಟುಂಬಸ್ಥರು ಬಂದು ಮೃತದೇಹವನ್ನು ಪತ್ತೆ ಹಚ್ಚಬೇಕು ಅಲ್ಲಿಯವರೆಗೂ ಫ್ಲ್ಯಾಟ್ ಸೀಜ್ ಆಗಿಯೇ ಇರಲಿದೆ.

ಇದನ್ನೂ ಓದಿ:2006ರಲ್ಲಿ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ !ಜೀವ ಕಳೆದುಕೊಳ್ಳವಂತದ್ದು ಗುರುಗೆ ಆಗಿದ್ದೇನು?

ಮೃತ*ದೇಹದ ಗುರುತು ಪತ್ತೆ ಬಳಿಕ ಶವಾಗಾರಕ್ಕೆ ಮೃತ*ದೇಹವನ್ನು ಶಿಫ್ಟ್ ಮಾಡಲಾಗುತ್ತದೆ. ಮರಣೋತ್ತರ ಪರೀಕ್ಷೆಯ ನಂತರ ಮೃತ*ಹದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗುತ್ತದೆ. ಇದಕ್ಕೂ ಮುನ್ನ ಮೊಬೈಲ್ ಹಾಗೂ ಫ್ಲ್ಯಾಟ್ ಸೀಜ್ ಮಾಡುವ ಪೊಲೀಸರು ಕುಟುಂಬಸ್ಥರು ಬಂದ ಮೇಲೆ ಅವರ ಸಮ್ಮುಖದಲ್ಲಿಯೇ ಫ್ಲ್ಯಾಟ್​ನಲ್ಲಿ ಪರಿಶೀಲನೆ ನಡೆಸಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment