ನಿರ್ದೇಶಕ ಗುರುಪ್ರಸಾದ್ ಪ್ರಕರಣದ ತನಿಖೆ ಚುರುಕು.. ಮಹತ್ವದ ಹೇಳಿಕೆ ಪಡೆದ ಪೊಲೀಸರು

author-image
Bheemappa
Updated On
ನಿರ್ದೇಶಕ ಗುರುಪ್ರಸಾದ್ ಪ್ರಕರಣದ ತನಿಖೆ ಚುರುಕು.. ಮಹತ್ವದ ಹೇಳಿಕೆ ಪಡೆದ ಪೊಲೀಸರು
Advertisment
  • ಗುರುಪ್ರಸಾದ್ ಅವರ ಸಹೋದರ ಪೊಲೀಸರಿಗೆ ಏನ್ ಹೇಳಿದ್ರು?
  • ಅಪಾರ್ಟ್​ಮೆಂಟ್​​ನಲ್ಲಿ ಗುರುಪ್ರಸಾದ್ ಮೃತದೇಹ ಪತ್ತೆ ಆಗಿತ್ತು
  • ಸಹಾಯಕ ನಿರ್ದೇಶಕರನ್ನ ವಿಚಾರಣೆ ಮಾಡಿರುವ ಪೊಲೀಸರು

ಬೆಂಗಳೂರು: ನಿರ್ದೇಶಕ ಗುರುಪ್ರಸಾದ್ ಅವರ ಮೃತದೇಹ ಮಾದನಾಯಕನಹಳ್ಳಿಯ ಅಪಾರ್ಟ್​ಮೆಂಟ್ ಒಂದರಲ್ಲಿ ಪತ್ತೆ ಆಗಿತ್ತು. ಸದ್ಯ ಈ ಸಂಬಂಧ ಪೊಲೀಸರು ತನಿಖೆ ಚುರುಗೊಳಿಸಿದ್ದು ಗುರುಪ್ರಸಾದ್ ಅವರ ಸಹೋದರ ಮತ್ತು ಸಹಾಯಕ ನಿರ್ದೇಶಕ ಉದಯ್​ರನ್ನ ವಿಚಾರಣೆ ಮಾಡಿದ್ದಾರೆ.

ಮಾದನಾಯಕನಹಳ್ಳಿಯ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ವಿಚಾರಣೆ ವೇಳೆ ಗುರುಪ್ರಸಾದ್ ಸಹೋದರ ಹಾಗೂ ಸಹಾಯಕ ನಿರ್ದೇಶಕ ಉದಯ್ ಕೆಲ  ವಿಚಾರಗಳನ್ನು ಹೇಳಿದ್ದಾರೆ. ಈ ವೇಳೆ ಗುರುಪ್ರಸಾದ್ ಬಗ್ಗೆ ಕೆಲ ವಿಷಯಗಳು ಬೆಳಕಿಗೆ ಬಂದಿದ್ದು ಹೇಳಿಕೆ ದಾಖಲಿಸಿ ಪ್ರಕರಣದ ಅಂತ್ಯಕ್ಕೆ ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ಇದನ್ನೂ ಓದಿ:ಡೈರೆಕ್ಟರ್ ಗುರುಪ್ರಸಾದ್ ಜೊತೆಗಿನ ಫೋಟೋ ಹಂಚಿಕೊಂಡ ಬಿಗ್​​ಬಾಸ್​ನ ಮಾಜಿ ಸ್ಪರ್ಧಿ

publive-image

ಉದಯ್ ಹೇಳಿದ್ದೇನು?
ಗುರುಪ್ರಸಾದ್ ಅವರು ಹೈಪರ್ ಅಸಿಡಿಟಿ ಹಾಗೂ ಸೋರಿಯಾಸಿಸ್ ಕಾಯಿಲೆಯಿಂದ ಬಳಲುತ್ತಿದ್ದರು. ಈ ಎರಡು ಸಮಸ್ಯೆಗಳ ಜೊತೆಗೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರು. ಕೊನೆ ಸಿನಿಮಾ ರಂಗನಾಯಕ ಸೋತಿದ್ದರಿಂದ ಅವರು ನೊಂದಿದ್ದರು ಅಂತ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಸಹೋದರ ಹೇಳಿದ್ದೇನು?
ಗುರುಪ್ರಸಾದ್ ದಿನಕ್ಕೆ 2 ಪೆಗ್ ಅಷ್ಟೇ ಮದ್ಯಪಾನ ಮಾಡುತ್ತಿದ್ದರು. ಸೋರಿಯಾಸಿಸ್​ನಿಂದ ಬಳಲುತ್ತಿದ್ದರ ಬಗ್ಗೆ ಇತ್ತೀಚೆಗೆ ಹೇಳಿದ್ದರು. ಆದರೆ ಗುರುಪ್ರಸಾದ್ ನಮ್ಮನೊಡನೆ ಅಷ್ಟಾಗಿ ಸಂಪರ್ಕ ಇರಲಿಲ್ಲ. ಹಾಗಾಗಿ ಅವರ ವೈಯಕ್ತಿಕ ಜೀವನದ ಬಗ್ಗೆ ಅಷ್ಟಾಗಿ ನಮಗೆ ತಿಳಿದಿಲ್ಲ ಅಂತ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment