/newsfirstlive-kannada/media/post_attachments/wp-content/uploads/2024/11/guru-prasad.jpg)
ಸ್ಯಾಂಡಲ್ವುಡ್ ಸ್ಟಾರ್ ನಿರ್ದೇಶಕ ಗುರುಪ್ರಸಾದ್ ನಗರದ ಮಾದನಾಯಕನಹಳ್ಳಿ ಅಪಾರ್ಟ್ಮೆಂಟ್ವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ. ಕನ್ನಡಕ್ಕೆ 5 ಸಿನಿಮಾಗಳನ್ನು ಕೊಡುಗೆ ನೀಡಿದ ನಿರ್ದೇಶಕ ಈ ರೀತಿ ಪತ್ತೆಯಾಗಿರುವ ಸುದ್ದಿ ತಿಳಿದು ಅನೇಕರಿಗೆ ಅಚ್ಚರಿಯಾಗಿದೆ.
ಇದನ್ನೂ ಓದಿ:ನಿರ್ದೇಶಕ ಗುರುಪ್ರಸಾದ್ ಯಾವ್ಯಾವ ಸಿನಿಮಾಗಳಲ್ಲಿ ಅಭಿನಯ ಮಾಡಿದ್ದರು..?
ಈಗ ಸ್ಟಾರ್ ನಿರ್ದೇಶಕ ಗುರುಪ್ರಸಾದ್ ಅವರ ಅಂತ್ಯಕ್ರಿಯೆ ನಡೆದಿದೆ. ಕುಟುಂಬಸ್ಥರ ಒಪ್ಪಿಗೆ ಮೇರೆಗೆ ವಿಲ್ಸನ್ ಗಾರ್ಡನ್ ವಿದ್ಯುತ್ ಚಿತಾಗಾರದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಗುರುಪ್ರಸಾದ್ ಅಂತ್ಯ ಸಂಸ್ಕಾರ ಮಾಡಲಾಗಿದೆ. ಎರಡನೇ ಪತ್ನಿ ಸಹೋದರನಿಂದ ಅಂತಿಮ ವಿಧಿವಿಧಾನ ನೆರವೇರಿಸಿಲಾಗಿದೆ. ಇನ್ನೂ ಗುರುಪ್ರಸಾದ್ ಅಂತ್ಯ ಸಂಸ್ಕಾರದಲ್ಲಿ ನಟ ದುನಿಯಾ ವಿಜಯ್, ಡಾಲಿ ಧನಂಜಯ, ಸತೀಶ್ ನೀನಾಸಂ ಇದ್ದರು.
ಗುರುಪ್ರಸಾದ್ ಪೂರ್ಣ ಹೆಸರು ಗುರುಪ್ರಸಾದ ರಾಮಚಂದ್ರ ಶರ್ಮಾ. ಮೂಲತಃ ಕನಕಪುರದವರು. ನವೆಂಬರ್ 2, 1972ರಲ್ಲಿ ಜನಿಸಿದ್ದರು. ಸದ್ಯ ಅವರಿಗೆ 52 ವರ್ಷ ವಯಸ್ಸಾಗಿತ್ತು. ನಿನ್ನೆ ಅವರು 52ನೇ ಹುಟ್ಟುಹಬ್ಬವನ್ನು ಆಚರಿಸಬೇಕಾಗಿತ್ತು. ಆದರೆ ಗುರುಪ್ರಸಾದ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. 3 ದಿನಕ್ಕೂ ಮುನ್ನವೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.
52 ವರ್ಷ ವಯಸ್ಸಿನ ಅವರು 2 ಮದ್ವೆಯಾಗಿದ್ದರು ಎಂಬ ಸಂಗತಿಯು ಬೆಳಕಿಗೆ ಬಂದಿದೆ. ಆತ ಮೊದಲ ಪತ್ನಿಗೆ ಹೆಣ್ಣು ಮಗುವಿದ್ದು, ಆಕೆಯಿಂದ ದೂರವಾಗಿದ್ದಾರಂತೆ. ಇನ್ನು ಎರಡನೇ ಪತ್ನಿ ಗರ್ಭಿಣಿ ಎಂಬ ಸಂಗತಿಯೂ ತಿಳಿದುಬಂದಿದೆ. ಸದ್ಯ ಪತಿಯ ಮೃತದೇಹ ಕಾಣಲು ಎರಡನೇ ಪತ್ನಿ ಅಪಾರ್ಡ್ಮೆಂಟ್ ಬಳಿ ಬಂದಿದ್ದರು. ಸದ್ಯ ಮಾದನಾಯಕನಹಳ್ಳಿ ಪೊಲೀಸರು ಗುರು ಪ್ರಸಾದ್ ಅವರ ಆತ್ಮಹತ್ಯೆ ಕುರಿತು ತನಿಖೆ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ