ಅನುಮಾನಾಸ್ಪದ ರೀತಿಯಲ್ಲಿ ಖ್ಯಾತ ಸಿನಿಮಾ ಡೈರೆಕ್ಟರ್ ಸಾವು.. ಇದು ಆತ್ಮ*ತ್ಯೆಯೋ, ಕೊಲೆಯೋ?

author-image
Bheemappa
Updated On
ಅನುಮಾನಾಸ್ಪದ ರೀತಿಯಲ್ಲಿ ಖ್ಯಾತ ಸಿನಿಮಾ ಡೈರೆಕ್ಟರ್ ಸಾವು.. ಇದು ಆತ್ಮ*ತ್ಯೆಯೋ, ಕೊಲೆಯೋ?
Advertisment
  • ಹೋಟೆಲ್​​ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ
  • ಹಲವಾರು ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದರು
  • ಘಟನಾ ಸ್ಥಳಕ್ಕೆ ಭೇಟಿ ಕೊಟ್ಟ ಪೊಲೀಸರು, ಪರಿಶೀಲನೆ

ಹೈದರಾಬಾದ್: ತೆಲುಗು ಇಂಡಸ್ಟ್ರಿಯ ನಿರ್ಮಾಪಕ ಕಮ್ ನಿರ್ದೇಶಕ ಕೊಮಾರಿ ಜನಯ್ಯ ನಾಯ್ಡು (44) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕುಕಟ್‌ಪಲ್ಲಿಯ ಭಾಗ್ಯನಗರದಲ್ಲಿನ ಹೋಟೆಲ್‌ನಲ್ಲಿ ಅವರ ಶವ ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಇದನ್ನೂ ಓದಿ:ಅತಿಥಿ ಉಪನ್ಯಾಸಕರಿಗೆ ಗುಡ್​ನ್ಯೂಸ್; ನೇಮಕಕ್ಕೆ ಅರ್ಜಿ ಆಹ್ವಾನ; ಸಂಬಳ ಎಷ್ಟು?

ಭಾಗ್ಯನಗರದಲ್ಲಿನ ಹೋಟೆಲ್‌ ರೂಮ್​ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನಿರ್ದೇಶಕ ಕೊಮಾರಿ ಜನಯ್ಯ ನಾಯ್ಡು ಶವ ಪತ್ತೆಯಾಗಿದೆ. ಇದನ್ನು ಕಂಡ ಹೋಟೆಲ್​ ಸಿಬ್ಬಂದಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪ್ರಾಥಮಿಕ ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಅನಂತ್ ಅಂಬಾನಿ ಕೂದಲು ಉದುರುವುದೇಕೆ? ಮಗನ ಕಾಯಿಲೆ ಬಗ್ಗೆ ನೀತಾ ಅಂಬಾನಿ ಹೇಳಿದ್ದೇನು?

publive-image

ನಿರ್ದೇಶಕ ಕೊಮಾರಿ ಜನಯ್ಯ ನಾಯ್ಡು ಹಲವಾರು ತೆಲುಗು ಮೂವಿಗಳನ್ನು ನಿರ್ದೇಶನ ಮಾಡಿದ್ದಾರೆ. ಇದಾದ ಬಳಿಕ ತೊಲುಬೊಮ್ಮಲ ಸಿತ್ರಾಲು ಎಂಬ ಸಿನಿಮಾ ನಿರ್ಮಾಣ ಸಂಸ್ಥೆ ಪ್ರಾರಂಭಿಸಿದ್ದರು. ಇದರ ಅಡಿ ಕೆಲವು ವರ್ಷಗಳ ಹಿಂದೆ 'ಜಿಎಸ್‌ಟಿ (ಗಾಡ್ ಸೈತಾನ್ ಟೆಕ್ನಾಲಜಿ)' ಎಂಬ ಮೂವಿ ನಿರ್ಮಾಣ ಮಾಡಿದ್ದರು. ಆದರೆ ಈ ಮೂವಿ ಫ್ಲಾಪ್ ಆಗಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment