ಸ್ಟಾರ್ ನಿರ್ದೇಶಕನ ವಿರುದ್ಧ ವಂಚನೆ ಆರೋಪ.. ನಂದ ಕಿಶೋರ್ ಫಸ್ಟ್​ ರಿಯಾಕ್ಷನ್

author-image
Veena Gangani
Updated On
ಸ್ಟಾರ್ ನಿರ್ದೇಶಕನ ವಿರುದ್ಧ ವಂಚನೆ ಆರೋಪ.. ನಂದ ಕಿಶೋರ್ ಫಸ್ಟ್​ ರಿಯಾಕ್ಷನ್
Advertisment
  • ತಮ್ಮ ಮೇಲೆ ಬಂದ ಆರೋಪದ ಬಗ್ಗೆ ನಂದ ಕಿಶೋರ್ ಏನಂದ್ರು?
  • ನ್ಯೂಸ್​ ಫಸ್ಟ್​ನೊಂದಿಗೆ ಮಾತಾಡಿದ ನಿರ್ದೇಶಕ ನಂದ ಕಿಶೋರ್
  • ‘ಇದಕ್ಕೆ ಎಲ್ಲಾ ಉತ್ತರವನ್ನು ಕೊಟ್ಟೇ ಕೊಡ್ತೀನಿ’ ಎಂದ ನಿರ್ದೇಶಕ

ಸ್ಯಾಂಡಲ್​ವುಡ್ ನಟ, ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ನಂದ ಕಿಶೋರ್ ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬಂದಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಹೆಸರು ಹೇಳಿ ವಂಚನೆ ಮಾಡಿದ್ದಾರೆ ಎಂದು ಯುವನಟ ಶಬರೀಶ್ ಶೆಟ್ಟಿ ಎಂಬುವವರು ಆರೋಪ ಮಾಡಿದ್ದಾರೆ.

ಇದನ್ನೂ ಓದಿ:ಸ್ಟಾರ್​ ನಿರ್ದೇಶಕ ನಂದ ಕಿಶೋರ್ ವಿರುದ್ಧ ಗಂಭೀರ ಆರೋಪ.. ಕಿಚ್ಚನ ಹೆಸರು ಹೇಳಿ ಮೋಸ ಮಾಡಿದ್ರಂತೆ..!

publive-image

ಇನ್ನೂ ಈ ಬಗ್ಗೆ ಖುದ್ದು ನಂದ ಕಿಶೋರ್​ ಅವರು ನ್ಯೂಸ್​ಫಸ್ಟ್​ನೊಂದಿಗೆ ದೂರವಾಣಿ ಕರೆಯಲ್ಲಿ ಮಾತಾಡಿದ್ದಾರೆ. ಈ ಬಗ್ಗೆ ಮಾತಾಡಿದ ಅವರು, ನಾನು ಈ ಕೇಸ್​ ಬಗ್ಗೆ ಜಾಸ್ತಿ ಏನೂ ಮಾತಾಡೋದಿಲ್ಲ. ಈಗ ನಾನು ಕೆಲಸದ ಮೇಲೆ ಇದ್ದೇನೆ. 15 ದಿನದ ಬಳಿಕ ಬೆಂಗಳೂರಿಗೆ ಬರುತ್ತೇನೆ. ಬಂದ ಕೂಡಲೇ ಒಂದು ಸುದ್ದಿಗೋಷ್ಠಿ ಮಾಡುತ್ತೇನೆ. ಆಗ ಎಲ್ಲಾದಕ್ಕೂ ಉತ್ತರ ಕೊಡುತ್ತೇನೆ. ಇವತ್ತು ನಾನು ಮುಖಾಮುಖಿ ಇಲ್ಲದೇ ಏನೋ ಮಾತಾಡಿದ್ರೂ ತಪ್ಪಾಗುತ್ತೇ. ಇದಕ್ಕೆ ಎಲ್ಲಾ ಉತ್ತರವನ್ನು ಕೊಟ್ಟೇ ಕೊಡ್ತೀನಿ ಎಂದಿದ್ದಾರೆ.

publive-image

ಏನಿದು ಆರೋಪ..?

ನಂದ ಕಿಶೋರ್ ಅವರ ಮೇಲೆ ಆರೋಪ ಮಾಡಿದ ಶಬರೀಶ್ ಶೆಟ್ಟಿ, 2016ರಲ್ಲಿ ನನಗೆ ನಂದ ಕಿಶೋರ್ ಜಿಮ್​​ನಲ್ಲಿ ಪರಿಚಯವಾಗಿದ್ದರು. ನಾನು ನಂದ ಕಿಶೋರ್ ಅವರಿಗೆ ಚಿನ್ನ ಅಡವಿಟ್ಟು 22 ಲಕ್ಷ ಕೊಟ್ಟಿದ್ದೀನಿ. 9 ವರ್ಷಗಳಿಂದ ನನಗೆ ನಂದ ಕಿಶೋರ್ ಹಣವನ್ನು ನೀಡಿಲ್ಲ ಎಂದು ಆರೋಪಿಸಿದ್ದಾರೆ.

ಹಣ ಕೇಳಿದರೆ ನಂದ ಕಿಶೋರ್ ನನಗೆ ಧಮ್ಕಿ ಹಾಕುತ್ತಿದ್ದಾರೆ. ನಾನು ಹಣ ಕೇಳಿದಾಗೆಲ್ಲ ಸುದೀಪ್ ಸರ್ ಹೆಸರೇಳಿ ಯಾಮಾರಿಸುತ್ತಿದ್ದರು. ಸಿನಿಮಾದಲ್ಲಿ ಅವಕಾಶ ಕೊಡುತ್ತೇನೆ ಅಂತ ಹೇಳಿ ನನಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಆದ್ರೆ ಇತ್ತ ನನಗೆ ನನ್ನ ಹಣವು ಕೊಟ್ಟಿಲ್ಲ, ಸಿನಿಮಾದಲ್ಲಿ ಅವಕಾಶವನ್ನು ಕೊಡಲಿಲ್ಲ ಎಂದು ಬೇಸರ ಹೊರ ಹಾಕಿದ್ದಾರೆ.

publive-image

ನಾನು ಸಿಸಿಎಲ್​ನಲ್ಲಿ ಆಡುವ ಕನಸ್ಸು ಕಟ್ಟಿಕೊಂಡಿದ್ದೆ. ಕೆಸಿಸಿ ಟೂರ್ನಿಯಲ್ಲಿ ನಾನು ಎರಡು ಸೀಸನ್ ಆಡಿದ್ದೇನೆ. ಹಣ ಕೇಳಿದರೆ ನಿನ್ನ ಕೆಸಿಸಿಯಿಂದ ಹೊರ ಹಾಕ್ತಿನಿ ಅಂತ ಬೆದರಿಕೆ ಹಾಕುತ್ತಿದ್ದರು. ನಾನು ಸುದೀಪ್ ಸರ್ ಜೊತೆ ಕ್ರಿಕೆಟ್ ಆಡುವ ಆಸೆಯಿಂದ ಸುಮ್ಮನಾಗುತ್ತಿದ್ದೆ. ಈಗ ನನ್ನ ರಾಮಧೂತ ಸಿನಿಮಾ ಶೂಟಿಂಗ್ ಕಂಪ್ಲೀಟ್ ಆಗಿದೆ. ಸಿನಿಮಾ ರಿಲೀಸ್ ಮಾಡಲು ನನ್ನ ಬಳಿ ಹಣ ಇಲ್ಲ. ನನ್ನ ಹಣ ವಾಪಸ್ ಕೊಡಿ ಅಂದ್ರೆ ಏನ್ ಮಾಡಿಕೊಳ್ಳುತ್ತೀಯೋ ಮಾಡ್ಕೋ ಅಂತಾರೆ. ನಮ್ಮಂತ ಪುಟ್ಟ ಕಲಾವಿದರು ಹೇಗೆ ಬದುಕೋದು ಗೊತ್ತಾಗುತ್ತಿಲ್ಲ. ನಾನು ಈ ವಿಚಾರವನ್ನು ಸುದೀಪ್ ಸರ್ ಗಮನಕ್ಕೆ ತರಲು ಪ್ರಯತ್ನ ಪಟ್ಟಾಗ ‌ನನ್ನ ತಡೆದಿದ್ದರು. ನನ್ನ ಹಣ ನನಗೆ ಕೊಡದಿದ್ದರೆ ನಂದ ಕಿಶೋರ್ ವಿರುದ್ಧ ಕಾನೂನು ಮೊರೆ ಹೋಗುತ್ತೇನೆ. ಶಿವಣ್ಣ, ಸುದೀಪ್ ಸರ್ ಫಿಲ್ಮ್ ಚೇಂಬರ್​ಗೆ ದೂರು ಕೊಡುತ್ತೇನೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment